ಬೆಂಗಳೂರು:ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಸಾಲುಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮದನಿಕ ಸಿನಿಮಾ ಚಿತ್ರೀಕರಣದ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಶೂಟಿಂಗ್​ ಕ್ಯಾನ್ಸಲ್​ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಚಿತ್ರದ ಶೂಟಿಂಗ್​ ಸಮಯದಲ್ಲಿ ರಾಗಿಣಿ ಅವರಿಗೆ ಏಟುಬಿದ್ದಿದ್ದು, ಶೂಟಿಂಗ್ ಕೆಲವು ದಿನಗಳ ಕಾಲ​ ನಿಲ್ಲಿಸಲಾಗಿದೆ. ಈ ಕುರಿತು ನಟಿ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಈ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು ಸ್ಟುಡಿಯೋಸ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದ ಸಮಯದಲ್ಲಿ ಅವಘಡ ಸಂಭವಿಸಿದ್ದು, ಚಿಕಿತ್ಸೆ ನಂತರ ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿರುವ ಕಾರಣ, ರೆಸ್ಟ್​ ಮಾಡುತ್ತಿದ್ದಾರೆ.
ನಟಿಯ ಕಾಲಿಗೆ ಪೆಟ್ಟಾಗಿರುವ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ನೋವಿನ ನಡುವೆಯೂ ನಟಿ ನಗುತ್ತಿರುವುದನ್ನು ನೋಡಬಹುದು. ನಟಿಯ ಕಾಲಿಗೆ ಸ್ವಲ್ಪ ಫ್ರ್ಯಾಕ್ಚರ್​ ಆಗಿದ್ದು, ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ಆಗಿದೆ.
ರಾಗಿಣಿ ನಾಯಕಿಯಾಗಿ ನಟಿಸಿರುವ ‘ಬಿಂಗೊ’ ಚಿತ್ರದ ಶೂಟಿಂಗ್​ ಇತ್ತೀಚೆಗೆ ಮುಕ್ತಾಯವಾಗಿದೆ. ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಆರ್.ಕೆ ಚಂದನ್ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈ ನಡುವೆ ಮದನಿಕ ಶೂಟಿಂಗ್​ ಸಮಯದಲ್ಲಿ ಅವಘಡ ಸಂಭವಿಸಿದೆ.
SSLC ಮುಗಿತ್ತಿದ್ದಂತೆ ಸಿನಿಮಾಗೆ ಎಂಟ್ರಿ; ನಟಿ ಸೌಂದರ್ಯ ಚಿತ್ರರಂಗಕ್ಕೆ ಬರಲು ಈ ವ್ಯಕ್ತಿಯೇ ಕಾರಣ

ಸ್ನೇಹಿತರ ಜತೆ ಮಲಗು ಅಂತಿದ್ದ ಅದಕ್ಕೆ ಡಿವೋರ್ಸ್ ನೀಡಿದೆ ಎಂದು ಕಣ್ಣೀರಿಟ್ಟ ನಟಿ

Gold, Silver Price; 65 ಸಾವಿರ ರೂ. ದಾಟಿ ಮುನ್ನುಗ್ಗಿದ ಚಿನ್ನದ ಬೆಲೆ, ಬೆಳ್ಳಿ ಬೆಲೆ ಇಳಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
