ಹೈದರಬಾದ್​​:ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡ ನಟಿ ಸಮಂತಾ ಮಯೋಸಿಟಿಸ್ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದಾರೆ. ಸ್ಯಾಮ್ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ರಿಯರಾಗಿದ್ದಾರೆ ಮತ್ತು ಅವರು ಅಲ್ಲಿ ಕಳೆದ ಪ್ರತಿ ಕ್ಷಣವನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳುತ್ತಾರೆ.

ಸ್ಯಾಮ್ ಇತ್ತೀಚೆಗೆ ನ್ಯೂಯಾರ್ಕ್​​ನ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಈ ರೀತಿಯ ಮುಂಜಾನೆಗಳು..ನನಗೆ ಖುಷಿ ಕೊಡುವ ಸ್ಥಳಗಳು ಎಂದು ಕ್ಯಾಪ್ಷನ್​​ ನೀಡಿ ಫೋಟೋ ಶೇರ್​​ ಮಾಡಿದ್ದಾರೆ. ಸದ್ಯ ಸ್ಯಾಮ್ ಶೇರ್ ಮಾಡಿರುವ ಚಿತ್ರಗಳು ವೈರಲ್ ಆಗುತ್ತಿವೆ.
A post shared by Samantha (@samantharuthprabhuoffl)
ಸ್ಯಾಮ್ ಕೆಲವು ದಿನಗಳಿಂದ ಪ್ರೀತಿ ಮತ್ತು ಸಂಬಂಧದ ಬಗ್ಗೆ ಕೆಲವು ಉಲ್ಲೇಖಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮತ್ತೊಮ್ಮೆ ಇನ್‌ಸ್ಟಾ ಸ್ಟೋರಿಯಲ್ಲಿ ಆಸಕ್ತಿದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜಂಬೋ ಕಪ್ ಕಾಫಿಯನ್ನು ಕೈಯಲ್ಲಿ ಹಿಡಿದು ನಗುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಹಂಚಿಕೊಂಡ ಸ್ಯಾಮ್, ” ಕೊನೆಗೂ ಯಾರೋ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆಂದ #jumbosizedcoffee” ಎಂದು ಬರೆದಿದ್ದಾರೆ.

ಸಮಂತಾ ಅಭಿನಯದ ಖುಷಿ ಚಿತ್ರ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ್ದು, ನಿರ್ದೇಶಕ ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಈಗಾಗಲೇ ಖುಷಿ ಚಿತ್ರದ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿವೆ. ಈ ಚಿತ್ರದಲ್ಲಿ ವಿಜಯ್ ಮತ್ತು ಸ್ಯಾಮ್ ಅವರ ಕೆಮಿಸ್ಟ್ರಿ ಪ್ರೇಕ್ಷಕರನ್ನು ಮೆಚ್ಚಿಸುತ್ತದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಿಂದ ತೋರುತ್ತದೆ.
1200 ಅಡಿ ಎತ್ತರದಲ್ಲಿ ಏಕಾಏಕಿ ತುಂಡಾದ ಕೇಬಲ್ ಕಾರ್​; 14 ಗಂಟೆ ಕಾರ್ಯಾಚರಣೆ ನಂತ್ರ ಸಿಕ್ಕಿಬಿದ್ದ 8 ಜನರ ರಕ್ಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
