ಮುಂಬೈ:ನಟನೆಯಾದರೂ ಸೈ, ರಾಷ್ಟ್ರ ಸೇವೆಯಾದರೂ ಸೈ ಎಂಬ ಮಾತನ್ನು ಬಾಲಿವುಡ್​ನ ನಟಿಯೊಬ್ಬರು ಸಾಬೀತುಪಡಿಸಿ ತೋರಿಸಿದ್ದಾರೆ.
ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ನಾಯಕ ನಟರಾಗಿ ನಟಿಸಿದ್ದ ಫ್ಯಾನ್​ ಎಂಬ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದ ಶಿಖಾ ಮಲ್ಹೋತ್ರಾ ಇದೀಗ ಏಪ್ರನ್​ ತೊಟ್ಟು, ನರ್ಸ್​ ಪಾತ್ರ ಧರಿಸಿ ಕೋವಿಡ್​ 19 ಸೋಂಕಿತರ ಸೇವೆಗೆ ಮುಂದಾಗಿದ್ದಾರೆ. ಸ್ವಪ್ರೇರೇಣೆಯ ಮೇರೆಗೆ ಕರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿನ ತಮ್ಮ ಖಾತೆಯಲ್ಲಿ ಈ ವಿಷಯ ಹೇಳಿಕೊಂಡಿರುವ ಅವರು, ರಾಷ್ಟ್ರ ಸಂಕಷ್ಟಮಯ ಪರಿಸ್ಥಿತಿ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಸ್ವಯಂಸೇವಕಿಯಾಗಿ ರೋಗಿಗಳ ಸೇವೆಯಲ್ಲಿ ತೊಡಗಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ವರ್ದಮಾನ್​ ಮಹಾವೀರ ವೈದ್ಯಕೀಯ ಕಾಲೇಜು ಮತ್ತು ಸಪ್ದರ್​ಜಂಗ್​ ಆಸ್ಪತ್ರೆಯಿಂದ ಬಿ.ಎಸ್ಸಿ (ನರ್ಸಿಂಗ್​) ಡಿಗ್ರಿ ಪಡೆದಿರುವ ಅವರು, ಆಕಸ್ಮಿಕವಾಗಿ ಬಾಲಿವುಡ್​ಗೆ ಬಂದವರು. ಸದ್ಯ ಅವರು ಮುಂಬೈನ ಬಾಲಾ ಸಾಹೇಬ್​ ಠಾಕ್ರೆ ಟ್ರಾಮ ಸೆಂಟರ್​ನಲ್ಲಿ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾನು ಒಬ್ಬ ನರ್ಸ್​ ಆಗಿ, ಒಬ್ಬ ನಟಿಯಾಗಿ ಎಲ್ಲಿ ನನ್ನ ಅಗತ್ಯವಿದೆಯೋ ಅಲ್ಲೆಲ್ಲ ದೇಶಕ್ಕಾಗಿ ಕೆಲಸ ಮಾಡಲು ಸದಾ ಸಿದ್ಧಳಿದ್ದೇನೆ. ಇದಕ್ಕಾಗಿ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದ ಅಗತ್ಯ ಇದೆ. ನಮ್ಮ ಕೆಲಸವನ್ನು ನಮಗೆ ಮಾಡಲು ಬಿಟ್ಟು ಉಳಿದವರು ಮನೆಯಲ್ಲೇ ಇರುವ ಮೂಲಕ ರಾಷ್ಟ್ರದ ಒಳಿತಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಆದ್ದರಿಂದ, ವೈದ್ಯರು, ನರ್ಸಿಂಗ್​ ಸೇರಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಪದವಿ ಹೊಂದಿರುವವರೆಲ್ಲರೂ ಸ್ವಪ್ರೇರಣೆಯಿಂದ ಕರೊನಾ ವಾರಿಯರ್​ಗಳಾಗಲು ಮುಂದಾಗಬೇಕು ಎಂದು ಅವರು ಕೋರಿಕೊಂಡಿದ್ದಾರೆ.
ದೂರದಿಂದಲೇ ಮನೆಯವರ ಜತೆ ಚಹಾ, ಮಾತುಕತೆ, ಇದು ಕರೊನಾ ವಾರಿಯರ್​ ವೈದ್ಯರ ಸ್ಥಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
