ಮುಂಬೈ :ಬಾಲಿವುಡ್​ ನಟಿ ಮತ್ತು ಫಿಟ್​​ನೆಸ್​ ದಿವಾ ಶಿಲ್ಪ ಶೆಟ್ಟಿ ಅವರ ಹೊರತಾಗಿ, ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ಕರೊನಾ ಸೋಂಕು ತಗುಲಿದೆ. ಈ ಬಗ್ಗೆ ಶೆಟ್ಟಿ ಅವರು ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಿಳಿಸಿದ್ದು, ಕಳೆದ 10 ದಿನಗಳು ತುಂಬಾ ಕಷ್ಟಕರವಾಗಿದ್ದವು ಎಂದು ಬರೆದಿದ್ದಾರೆ.
ಮೊದಲು ನನ್ನ ಅತ್ತೆ-ಮಾವನಿಗೆ ಕರೊನಾ ಪಾಸಿಟೀವ್​ ಬಂತು. ನಂತರ ಒಂದು ವರ್ಷದ ಮಗಳು ಸಮೀಶಾ, ಮಗ ವಿಯಾನ್-ರಾಜ್, ನನ್ನ ತಾಯಿ ಮತ್ತು ಕೊನೆಗೆ ಪತಿ ರಾಜ್ ಕುಂದ್ರ​​ಗೆ ಕರೊನಾ ಪಾಸಿಟೀವ್ ಬಂತು. ನಿಯಮಾನುಸಾರ ಎಲ್ಲರೂ ಅವರವರ ಕೋಣೆಗಳಲ್ಲಿ ಐಸೊಲೇಟ್​ ಆಗಿದ್ದು, ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದಾರೆ. ದೇವರ ಕೃಪೆಯಿಂದ ಎಲ್ಲರೂ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎಂದು ಶಿಲ್ಪ ಬರೆದಿದ್ದಾರೆ.
ಇದನ್ನೂ ಓದಿ:ಆರ್​ಟಿಪಿಸಿಆರ್​ ಪರೀಕ್ಷೆಗೆ 500 ರೂ. ದರ ನಿಗದಿ : ಸರ್ಕಾರಿ ಆದೇಶಕ್ಕೆ ತಡೆ ಇಲ್ಲ
ಅವರ ಮನೆಗೆಲಸದ ಸಿಬ್ಬಂದಿಯಲ್ಲಿ ಇಬ್ಬರಿಗೆ ಕರೊನಾ ಪಾಸಿಟೀವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದೂ ಬರೆದಿರುವ ಶೆಟ್ಟಿ ತಮಗೆ ಪರೀಕ್ಷೆಗಳಲ್ಲಿ ನೆಗೆಟೀವ್ ವರದಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ನಮಗಾಗಿ ಪ್ರಾರ್ಥನೆ ಮಾಡಿ ಎಂದು ತಮ್ಮ ಅಭಿಮಾನಿಗಳನ್ನು ಕೇಳಿರುವ ಶಿಲ್ಪಾ ಶೆಟ್ಟಿ, “ಮಾಸ್ಕ್​ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಸುರಕ್ಷಿತವಾಗಿರಿ” ಎಂದು ಬರೆದಿದ್ದಾರೆ. ಜೊತೆಗೆ, “ಕೋವಿಡ್​ ಪಾಸಿಟೀವ್ ಆಗಿರಲಿ ಬಿಡಲಿ, ಮಾನಸಿಕವಾಗಿ ಮಾತ್ರ ಪಾಸಿಟೀವ್ ಆಗಿರಿ” ಎಂದು ಸಲಹೆ ನೀಡಿದ್ದಾರೆ.(ಏಜೆನ್ಸೀಸ್)
ಕರೊನಾದಿಂದ ಚೇತರಿಸಿಕೊಂಡ ಮೇಲೆ ಟೂತ್​ಬ್ರಶ್​ ಬದಲಿಸಿ : ತಜ್ಞರ ಸಲಹೆ

ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
