ಬೆಂಗಳೂರು:ಪ್ರಜ್ವಲ್​ ದೇವರಾಜ್​​ ನಟನೆಯ ಗಂಗೆ ಬಾರೆ ತುಂಗೆ ಬಾರೆ ಸಿನಿಮಾ ನಟಿ ಸುನೈನಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಾದ ಫೋಟೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾದಲ್ಲೇ ಕ್ಲಿಕ್ ಆದ ನಾಯಕಿಯರಲ್ಲಿ ಸುನೈನಾ ಕೂಡ ಒಬ್ಬರು. ಯುವ ಮತ್ತು ಪ್ರತಿಭಾವಂತ ನಾಯಕಿ ಸುನೈನಾ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕನ್ನಡದಲ್ಲಿ ನಟ ಪ್ರಜ್ವಲ್​ ದೇವರಾಜ್​​ ಜತೆ ಗಂಗೆ ಬಾರೆ ತುಂಗೆ ಬಾರೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ತೆಲುಗು ಕೆಲವು ಸಿನಿಮಾಗಳಲಗಲಿ ನಟಿಸಿದ್ದಾರೆ. ಅವರು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
A post shared by Sunainaa Yeellaa (@thesunainaa)
ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ನೋಡಿದರೆ, “ನನಗೆ ಸ್ವಲ್ಪ ಸಮಯ ಕೊಡಿ… ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ” ಎಂದು ಬರೆದುಕೊಂಡು ಸುನೈನಾ ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಟಿ ಆಸ್ಪತ್ರೆಗೆ ದಾಖಲಾಗಲು ಕಾರಣವೇನು ಎಂದು ತಿಳಿದು ಬಂದಿಲ್ಲ.  ಏನಾಯಿತು? ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಸುನೈನಾ ಯೆಲ್ಲಾ, ಈಗ ಆಸ್ಪತ್ರೆಗೆ ದಾಖಲಾಗಿದ್ದು ವಿಚಾರ ತಿಳಿದ ಅಭಿಮಾನಿಗಳು ಗಾಬರಿ ಆಗಿದ್ದಾರೆ.
ಸುನೈನಾ ಮೂಲತಃ ತೆಲುಗಿಗೆ ನಟಿ. ಆದರೆ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದಲ್ಲಿ. 2005ರಲ್ಲಿ ತೆರೆ ಕಂಡ ಕುಮಾರ್‌ vs ಕುಮಾರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸುನೈನಾ ನಂತರ ತಮಿಳು ಸಿನಿಮಾರಂಗದಲ್ಲಿ ಸಕ್ರಿಯರಾದರು.
2008ರಲ್ಲಿ ತೆರೆ ಕಂಡ ಗಂಗೆ ಬಾರಿ ತುಂಗೆ ಬಾರೆ ಚಿತ್ರದಲ್ಲಿ ಸುನೈನಾ ಗಂಗಾ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಿದ್ದರು. ಸುನೈನಾ ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾ ಆದರೂ ಆಕೆಗೆ ಕನ್ನಡದಲ್ಲಿ ಕೂಡಾ ಅಭಿಮಾನಿಗಳಿದ್ದರು. ಕಳೆದ ಜೂನ್‌ನಲ್ಲಿ ತೆರೆ ಕಂಡ ರೆಜಿನಾ ಎಂಬ ಚಿತ್ರದಲ್ಲಿ ಕೂಡಾ ಸುನೈನಾ ನಟಿಸಿದ್ದರು. ಆದರೆ ಅದಾದ ನಂತರ ಅವರು ಹೊಸ ಸಿನಿಮಾ ಅನೌನ್ಸ್‌ ಮಾಡಿರಲಿಲ್ಲ.
ನಮ್ಮ ಮೆಟ್ರೋ ಕಾಮಗಾರಿ; 4 ತಿಂಗಳವರೆಗೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಬಂದ್…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × three =
Remember me
