ಮುಂಬೈ:ಅನೇಕ ಆ್ಯಕ್ಷನ್​ ಸಿನಿಮಾಗಳಲ್ಲಿ ಅತ್ಯುತ್ತಮ ನಟನೆ ತೋರಿ ಜನಪ್ರಿಯತೆ ಗಳಿಸಿರುವ ನಟಿ, ತಾಪ್ಸೀ ಪನ್ನು. ಇತ್ತೀಚೆಗೆ ಬಾಲಿವುಡ್​ ಸುದ್ದಿ ಕೇಂದ್ರಿತ ಟ್ವಿಟರ್​ ಖಾತೆಯೊಂದು ಅವರು ಗಂಡಸಿನ ದೇಹ ಹೊಂದಿರುವರೆಂಬ ಕಾಮೆಂಟ್​ ಮಾಡಿತ್ತು. ಈ ಕಾಮೆಂಟನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ನಟಿಯು, ಧನ್ಯವಾದ ಹೇಳಿದ್ದಾರೆ. ಈ ರೀತಿಯ ಶ್ಲಾಘನೆಗಾಗಿ ನಾನು ಬಹಳ ಕಷ್ಟಪಟ್ಟಿದ್ದೇನೆ ಎಂದಿದ್ದಾರೆ!
‘ರಶ್ಮಿ ರಾಕೆಟ್’​ ಎಂಬ ಕ್ರೀಡಾ ಪ್ರಧಾನ ಚಿತ್ರದಲ್ಲಿ ಓಟಗಾರ್ತಿಯ ಪಾತ್ರ ನಿರ್ವಹಿಸುತ್ತಿರುವ ತಾಪ್ಸೀ ಅವರನ್ನು ಹಿಂದಿನಿಂದ ತೋರಿಸುವ ಚಿತ್ರವೊಂದು ಇತ್ತೀಚೆಗೆ ಹೊರಬಿದ್ದಿತ್ತು. ಈ ಬಗ್ಗೆ ಬಾಲಿವುಡ್​ ಕಿ ನ್ಯೂಸ್​ ಎಂಬ ಟ್ವಿಟರ್​ ಖಾತೆಯಲ್ಲಿ ‘ಈ ಗಂಡಸಿನ ದೇಹ ಹೊಂದಿರುವವಳು ತಾಪ್ಸೀನೇ ಆಗೋಕೆ ಸಾಧ್ಯ’ ಎಂದು ಟ್ವೀಟ್​​ ಮಾಡಿತ್ತು.
ಇದನ್ನೂ ಓದಿ:‘ಟೈಗರ್​ 3’ನಲ್ಲಿ ನಟಿಸ್ತಿದ್ದೀನಿ ಅಂತ ಯಾರು ಹೇಳಿದ್ದು? ಇಮ್ರಾನ್​ ಪ್ರಶ್ನೆ
ಇದಕ್ಕೆ ಉತ್ತರಿಸಿರುವ ತಾಪ್ಸೀ, “ನಾನು ಹೇಳೋದಿಷ್ಟೇ… ಈ ಲೈನನ್ನು ನೆನಪಿಟ್ಟುಕೊಳ್ಳಿ ಮತ್ತು ಸೆಪ್ಟೆಂಬರ್​ 23ಕ್ಕಾಗಿ ಕಾಯಿರಿ. ಹಾಗೂ ನಿಮಗೆ ಮುಂಗಡವಾಗಿ ಥ್ಯಾಂಕ್ಯೂ … ಏಕೆಂದರೆ ನಾನು ಈ ಹೊಗಳಿಕೆಗಾಗಿ ತುಂಬಾ ಕಷ್ಟ ಪಟ್ಟಿದ್ದೇನೆ” ಎಂದು ಟ್ವೀಟ್​ ಮಾಡಿದ್ದಾರೆ.
All I will say is…. Just remember this line and wait for 23rd September 🙂And advance mein THANK YOU I really worked hard for this compliment 🙏🏽https://t.co/O5O8zMRzP0
— taapsee pannu (@taapsee)September 20, 2021

ಆಕರ್ಷ್​ ಖುರಾನಾ ನಿರ್ದೇಶಿಸಿರುವ ರಶ್ಮಿ ರಾಕೆಟ್​ ಚಿತ್ರಕ್ಕಾಗಿ ತೀವ್ರ ತೆರನ ಫಿಟ್​ನೆಸ್​ ರುಟೀನ್ ಕೈಗೊಂಡಿದ್ದ ತಮ್ಮ ಫೋಟೋಗಳನ್ನು ಈ ಮುನ್ನ ತಾಪ್ಸೀ ಶೇರ್ ಮಾಡಿದ್ದರು. ಆ ಚಿತ್ರ ಅಕ್ಟೋಬರ್​ 15ಕ್ಕೆ ಜೀ5ನಲ್ಲಿ ತೆರೆಕಾಣಲಿದೆ. ಹೀಗಾಗಿ ಸೆ.23ಕ್ಕೆ ಏನು ವಿಶೇಷ ಎಂದು ಸಿನಿ ಆಸಕ್ತರು ಪ್ರಶ್ನಿಸುತ್ತಿದ್ದಾರೆ.(ಏಜೆನ್ಸೀಸ್)
‘ಪ್ರತಿಯೊಂದು ರೂಪಾಯಿ ಸರತಿಯಲ್ಲಿ ಕಾಯುತ್ತಿದೆ!’ ಮೌನ ಮುರಿದ ನಟ ಸೋನು ಸೂದ್​, ಐಟಿ ಸಮೀಕ್ಷೆ ಬಗ್ಗೆ ಹೇಳಿದ್ದೇನು?

ಟೀಚರ್​​ಗೆ ಗಿಫ್ಟ್ ತಂದಿದೀನಿ ಎನ್ನುತ್ತಾ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − 12 =
Remember me
