ಮುಂಬೈ:ರಿಯಾ ಸೇನ್ ಒಂದಾನೊಂದು ಕಾಲದಲ್ಲಿ ಬಾಲಿವುಡ್‌ನ ಖ್ಯಾತ ನಟಿ. ಒಂದೇ ಒಂದು ವಿಡಿಯೋ ಆಕೆಯ ಸಿನಿಮಾ ಕೆರಿಯರ್ ಅನ್ನು ಹಾಳು ಮಾಡಿತ್ತು. ಬೆಂಗಾಲಿ ಚಿತ್ರಗಳಲ್ಲಿ ನಟಿಸಿದರೂ ಬಾಲಿವುಡ್ ನಲ್ಲಿ ಸಿಕ್ಕ ಯಶಸ್ಸು ಆಕೆಗೆ ಸಿಗಲಿಲ್ಲ.
ಬಾಲನಟಿಯಾಗಿ ವೃತ್ತಿ ಜೀವನ ಆರಂಭಿಸಿದ ನಟಿ ರಿಯಾ ಸೇನ್, ಬಾಲಿವುಡ್‌ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ರಿಯಾ ಸೇನ್ ರಾಜಮನೆತನದ ಹಿನ್ನೆಲೆಯಿಂದ ಬಂದವರು. ತಂದೆ ಭರತ್ ತೇವ್ ವರ್ಮಾ ತ್ರಿಪುರದ ರಾಜಮನೆತನಕ್ಕೆ ಸೇರಿದವರಾಗಿದ್ದರೆ, ತಾಯಿ ಮೂನ್ ಮೂನ್ ಸೇನ್ ಮತ್ತು ಅಜ್ಜಿ ಸುಚಿತ್ರಾ ಸೇನ್ ಪ್ರಸಿದ್ಧ ನಟಿಯರಾಗಿದ್ದರು. ತಮ್ಮ ಪರಂಪರೆಯನ್ನು ಮೈಗೂಡಿಸಿಕೊಂಡ ರಿಯಾ 1991ರಲ್ಲಿ ‘ವಿಷ್ಕನ್ಯಾ’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು.
ಹಿಂದಿಯಲ್ಲದೆ, ಅವರು ಬಂಗಾಳಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡರು. 1998 ರಲ್ಲಿ 17 ನೇ ವಯಸ್ಸಿನಲ್ಲಿ ಫಲ್ಗುಣಿ ಪಾಠಕ್ ಅವರ ಮ್ಯೂಸಿಕ್ ವಿಡಿಯೋ ‘ಯಾದ್ ಪಿಯಾ ಕಿ ಆನೆ ಲಗೀ’ ನಲ್ಲಿ ರಿಯಾ ಕಾಣಿಸಿಕೊಂಡು ಪ್ರಸಿದ್ಧಿ ಪಡೆದಿರುವ ರಿಯಾ ಅನೇಕ ಚಲನಚಿತ್ರಗಳು, ಸಂಗೀತ ವೀಡಿಯೊಗಳು ಮತ್ತು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.2001 ರಲ್ಲಿ ‘ಸ್ಟೈಲ್’ ಕಮರ್ಷಿಯಲ್ ಹಿಟ್. 2003 ರಲ್ಲಿ ಬಿಡುಗಡೆಯಾದ ‘ಝಂಕರ್ ಬೀಟ್ಸ್’ ಮತ್ತು 2005 ರಲ್ಲಿ ಬಿಡುಗಡೆಯಾದ ‘ಅನಂತಭದ್ರಂ’ ಚಿತ್ರಗಳು ಅವರ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಆದವು. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡಾ ಇಕೆಯನ್ನು ಹುಡುಕಿಕೊಂಡು ಬಂದಿದ್ದವು.
ರಿಯಾ ಅಕ್ಷಯ್ ಖನ್ನಾ ಮತ್ತು ಬರಹಗಾರ ಸಲ್ಮಾನ್ ರಶ್ದಿ ಜತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದವು. ಇವರಲ್ಲದೆ ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಜತೆ ರಿಯಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. 2005 ರಲ್ಲಿ, ರಿಯಾ ಸೇನ್ ಅವರು ನಟ ಅಶ್ಮಿತ್ ಪಟೇಲ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ವದಂತಿಗಳ ನಡುವೆ ಒಂದು ವಿಡಿಯೋ ಹಲವು ವಿವಾದಗಳಿಗೆ ಕಾರಣವಾಗಿತ್ತು.ಎಲ್ಲರ ಗಮನ ಸೆಳೆಯಲು ರಿಯಾ ಉದ್ದೇಶಪೂರ್ವಕವಾಗಿ ಎಂಎಂಎಸ್ ಸೋರಿಕೆ ಮಾಡಿದ್ದಾರೆ ಎಂಬ ವರದಿಗಳಿವೆ.
ನಂತರ, ರಿಯಾ ಸೇನ್ ಅವರ ವೃತ್ತಿಜೀವನವು ಸಂಪೂರ್ಣವಾಗಿ ಹಾನಿಗೊಳಗಾಯಿತು ಮತ್ತು ಅವರು ಬಾಲಿವುಡ್ ತೊರೆದರು. ಆ ಸಮಯದಲ್ಲಿ ರಿಯಾ ಬೇರೆ ಭಾಷೆಗಳಲ್ಲಿ ನಟಿಸಿದ್ದರು. 2016-2019 ರ ನಡುವೆ, ಅವರು ‘ಅಲಿಶಾ, ರಾಗಿಣಿ ಎಂಎಂಎಸ್, ರಿಟರ್ನ್, ಪಾಯಿಸನ್, ಮಿಸ್ ಮ್ಯಾಚ್’ ನಂತಹ 4 ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ ಆದರೆ OTT ಪ್ಲಾಟ್‌ಫಾರ್ಮ್ ಅವರಿಗೆ ಹಿಂದಿನ ವರ್ಚಸ್ಸನ್ನು ತರಲು ಸಾಧ್ಯವಾಗಲಿಲ್ಲ. ಒಂದೇ ಒಂದು ವಿಡಿಯೋ ರಿಯಾ ಸೇನ್​​ ಅವರ  ಸಿನಿಮಾ ಕರಿಯರ್​ನ್ನು ತಲೆ ಕೆಳಗೆ ಮಾಡಿತ್ತು.
ತನಗಿಂತ 22 ವರ್ಷ ಕಿರಿಯಳಾದ ಯುವತಿಯನ್ನು ವರಿಸಲಿದ್ದಾರೆ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 − three =
Remember me
