ನವದೆಹಲಿ:ಕರೊನಾ ಎರಡನೇ ಅಲೆ ಜೋರಾಗಿಯೇ ಬೀಸುತ್ತಿದ್ದು, ಮತ್ತೊಮ್ಮೆ ಜನಜೀವನವನ್ನು ಅಡಿಮೇಲು ಮಾಡಲು ಆರಂಭಿಸಿದೆ. ದಿನೇದಿನೆ ಸೋಂಕಿನ ಪ್ರಮಾಣ ಮಾತ್ರವಲ್ಲದೆ ಸಾವಿನ ಪ್ರಮಾಣವೂ ಏರುತ್ತಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ.
ಈ ನಡುವೆಯೇ ದೇಶದಲ್ಲಿನ ಸೋಂಕಿನ ಪ್ರಮಾಣ ಈಗ ಹೇಳಲಾಗಿರುವುದಕ್ಕಿಂತಲೂ ಜಾಸ್ತಿ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಕರೊನಾ ಕುರಿತ ಭಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಒಂದುವೇಳೆ ಆ ಅಂದಾಜು ಸರಿಯಾದುದೇ ಆಗಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರಲಿದೆ.
ಇದನ್ನೂ ಓದಿ:ಅಮ್ಮಾ ತಾಯಿ.. ಭಿಕ್ಷೆ ನೀಡಿ.. ಸಂಬಳ ಕೊಟ್ಟಿಲ್ಲ, ದಯವಿಟ್ಟು ಭಿಕ್ಷೆ ಹಾಕಿ: ಹಬ್ಬದ ದಿನವೇ ಸಾರಿಗೆ ಸಂಸ್ಥೆ ನೌಕರರಿಂದ ಭಿಕ್ಷಾಟನೆ
ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯನ್ವಯ ಭಾರತದಲ್ಲಿ ಶುಕ್ರವಾರದ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 2,17,353 ಕೋವಿಡ್​-19 ಪ್ರಕರಣಗಳು ದೃಢಪಟ್ಟಿದ್ದು, 1,185 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಗುರುವಾರ ಕೋವಿಡ್​-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿದೆ. ಇದು ದೇಶದಲ್ಲಿ 2020ರಲ್ಲಿ ಕರೊನಾ ಪ್ರಕರಣ ಕಾಣಿಸಿಕೊಂಡ ಬಳಿಕ ಒಂದು ದಿನದಲ್ಲಿ ವರದಿಯಾದ ಪ್ರಕರಣಗಳಲ್ಲೇ ಗರಿಷ್ಠವಾಗಿದೆ.
ಇದನ್ನೂ ಓದಿ:ನೀನ್​ ಚೆನ್ನಾಗಿರು ದೇವ್ರು.. ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ
ಆದರೆ ಸೋಂಕಿನ ಪ್ರಕರಣಗಳ ಅಸಲಿ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನುತ್ತಾರೆ ಕೆಲವು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಪ್ರತಿ ಪ್ರಕರಣವನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಎರಿಕ್​ ಫೀಗ್ಲ್​ ಡಿಂಗ್, ಭಾರತದಲ್ಲಿ ಸೋಂಕಿನ ಪ್ರಮಾಣ ಈಗ ಖಚಿತ ಪಡಿಸಿರುವುದಕ್ಕಿಂತಲೂ 5ರಿಂದ 10 ಪಟ್ಟು ಹೆಚ್ಚಿರಬಹುದು ಎಂದಿದ್ದಾರೆ. (ಏಜೆನ್ಸೀಸ್​)
ಈ ವರ್ಷದ ಮುಂಗಾರು ಮಳೆ ಭವಿಷ್ಯವೇನು? ಇಲ್ಲಿದೆ ಮಾಹಿತಿ

ಕೊನೆಗೂ 20 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಆದ; ವಾಪಸ್ ಬರುವಷ್ಟರಲ್ಲಿ ಹೆಂಡ್ತಿ, ಮಗ, ಅಮ್ಮ, ಇಬ್ಬರು ಸೋದರರೂ ಇರಲಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 7 =
Remember me
