ಮುಂಬೈ:ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್​ ಜಿಹಾದ್​ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.
ಇನ್ನು ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಈ ಕುರಿತು ಚಿತ್ರದ ನಾಯಕ ನಟಿ ಆದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುವ ಮೂಲಕ ಖಡಕ್​ ರಿಪ್ಲೈ ನೀಡಿದ್ದಾರೆ.
ಇನ್ನು ಈ ಚಿತ್ರವನ್ನು ದ್ವೇಷ ಹಾಗೂ ಪ್ರೊಪಗೆಂಡದ ಆಧಾರದ ಮೇಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಕುರಿತು ನಟಿ ಆದಾ ಶರ್ಮಾ ಕೆಂಡಕಾರಿದ್ದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್​ ಮಾಡಿರುವ ನಟಿ ದಿ ಕೇರಳ ಸ್ಟೋರಿ ಚಿತ್ರವನ್ನು ಪ್ರೊಪಗೆಂಡ ಎಂದು ಕರೆಯುತ್ತಿರುವವರು ಸಿನಿಮಾ ವೀಕ್ಷಿಸಿದ ನಂತರವೂ ಈ ರೀತಿಯ ಘಟನೆಗಳು ನಡೆದಿಲ್ಲ ಎಂದು ಆಪಾದಿಸುತ್ತಿದ್ದಾರೆ.
And for the the few still calling#TheKeralaStorya propaganda film ,saying these incidents do not exist even after watching testimonials of several Indian victims,,,my humble request , Google two words ISIS and Brides…maybe an account of white girls narrated to you might make…pic.twitter.com/qYBp3B3owQ
ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಗೆ ತಡೆ; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ
ನಾನು ಈ ಮೂಲಕ ವಿನಂತಿಸುವುದೇನೆಂದರೆ ನೀವು ಐಸಿಸ್​ ಹಾಗೂ ಬ್ರೈಡ್ಸ್​ ಎಂಬ ಎರಡು ಪದಗಳನ್ನು ಗೂಗಲ್​ ಮಾಡಿ ಆ ನಂತರ ನಿಮ್ಮಗೆ ನಮ್ಮ ಚಿತ್ರ ನಿಜ ಎನ್ನಿಸುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.
ಇನ್ನು ಥಿಯೇಟರ್​ಗಳಲ್ಲಿ ನಮ್ಮ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬರು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಚಿತ್ರದ ಬಗ್ಗೆ ಉಲ್ಲೇಖಿಸಿ ಮಾತನಾಡಿದ್ದಾರೆ.
ಅನೇಕರು ಚಿತ್ರಮಂದಿರ ಹೌಸ್​ಫುಲ್​ ಹಾಗೂ ಬಂಪರ್​​​ ಒಪನಿಂಗ್​ ಎಂಬ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದಾರೆ. ಇದರ ಹೊರತ್ತಾಗಿಯೂ ಈ ರೀತಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
