ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿರುವ ಮುಂಬೈನ ಪ್ಲಾಟ್​ನ್ನು ಅದಾ ಶರ್ಮಾ ಖರೀದಿಸಿದ್ದಾರೆ ಎಂಬ ವೈರಲ್ ಸುದ್ದಿಗೆ ನಟಿ ಪ್ರತಿಕ್ರಿಯಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅವರು ಮುಂಬೈನ ಬಾಂದ್ರಾದಲ್ಲಿ ಫ್ಲಾಟ್​​ನಲ್ಲಿ ಬಾಡಿಗೆಗೆ ಇದ್ದರು. ಈ ನಿವೇಶನಕ್ಕೆ ತಿಂಗಳಿಗೆ ಸುಮಾರು 4.5 ಲಕ್ಷ ರೂಪಾಯಿ ಬಾಡಿಗೆ ನೀಡುತ್ತಿದ್ದರು. 2020 ಜೂನ್ 14ರಂದು, ಸುಶಾಂತ್ ಸಿಂಗ್ ರಜಪೂತ್ ಅವರು ವಾಸಿಸುತ್ತಿದ್ದ ಅದೇ ಪ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇದುವರೆಗೂ ಅವರ ಆತ್ಮಹತ್ಯೆ ನಿಜವಾದ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ:ನಿಂತುಕೊಂಡು ಆಹಾರ ಸೇವಿಸುತ್ತಿದ್ದೀರಾ? ನಿಂತಲ್ಲೇ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕರ….
A post shared by Viral Bhayani (@viralbhayani)
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ಲಾಟ್ ಬಾಡಿಗೆಗೆ ಯಾರೂ ಮುಂದೆ ಬಂದಿರಲಿಲ್ಲ. ನಿವೇಶನ ಖರೀದಿಸಲು ಕೆಲವರು ಮುಂದೆ ಬಂದರೂ ಮನೆ ಮಾಲೀಕರು ಮಾತ್ರ ಬಾಡಿಗೆ ಕೊಡಲು ಮುಂದಾಗಿದ್ದಾರೆ ಎಂದು ರಿಯಲ್ ಎಸ್ಟೇಟ್ ಏಜೆಂಟ್ ತಿಳಿಸಿದ್ದಾರೆ. ಕೆಲ ದಿನಗಳಿಂದ ಬಿಟೌನ್ ನಲ್ಲಿ ಅದಾ ಶರ್ಮಾ ಮನೆ ಖರೀದಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಕೊನೆಗೂ ಆದಶರ್ಮಾ ಈ ಬಗ್ಗೆ ಮೌನ ಮುರಿದರು.
ಇದನ್ನೂ ಓದಿ:ಚಿಪ್ಸ್ ಪ್ಯಾಕೆಟ್ ಕದ್ದಿದ್ದಕ್ಕಾಗಿ ಸ್ಟಾರ್​​ ನಟ ಅರೆಸ್ಟ್​​
ಮಾಧ್ಯಮದೊಂದಿಗೆ ಮಾತನಾಡಿದ ಅದಾ ಶರ್ಮಾ ಅವರು, ‘ನಾನಿನ್ನು ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ನಿಮಗೆ ಮೊದಲು ತಿಳಿಸುತ್ತೇನೆ ಮತ್ತು ಸಿಹಿ ಹಂಚುತ್ತೇನೆ’ ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿಗಳ ಪ್ರಕಾರ, 2020ರಲ್ಲಿ ಸುಶಾಂತ್ ಮರಣಕ್ಕೂ ಮೊದಲು ವಾಸವಿದ್ದ ಮನೆಯನ್ನೇ ಅದಾ ಶರ್ಮಾ ಕೊಂಡುಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ. ಕೊಂಡುಕೊಳ್ಳುತ್ತಾರೋ ಅಥವಾ ಬಾಡಿಗೆಗೆ ಪಡೆಯುತ್ತಾರೋ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಇದನ್ನೂ ಓದಿ:VIDEO | ನನ್ನ ತಂಗಿ ಸತ್ತಾಗಲೂ ರಜೆ ಕೊಡಲಿಲ್ಲವೆಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಪೊಲೀಸ್ ಕಾನ್ಸ್‌ಟೇಬಲ್‌…
ನಟಿ ಅದಾ ಶರ್ಮಾ ಮೊದಲ ಚಿತ್ರದಲ್ಲೇ ಯುವಕರಲ್ಲಿ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ‘ದಿ ಕೇರಳ ಸ್ಟೋರಿ’ ಚಿತ್ರದ ಮೂಲಕ ಉತ್ತಮ ಯಶಸ್ಸನ್ನು ಪಡೆದಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.
ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್​​ಗೆ ರಾಜೀನಾಮೆ ನೀಡಿದ ನೀತಾ ಅಂಬಾನಿ

Sign in to your account
Please enter an answer in digits:eleven − 7 =
Remember me
