ಮುಂಬೈ:ಗೌತಮ್ ಅದಾನಿ ಗ್ರೂಪ್ ಕಂಪನಿ ಅದಾನಿ ವಿಲ್ಮರ್ (Adani Wilmar) ಷೇರುಗಳು ಕಳೆದ ಕೆಲವು ತಿಂಗಳುಗಳಿಂದ ಒತ್ತಡದಲ್ಲಿದೆ. ನಾವು ಈ ವರ್ಷದ ಬಗ್ಗೆ ಮಾತನಾಡಿದರೆ, ಸ್ಟಾಕ್ ತನ್ನ ಹೂಡಿಕೆದಾರರಿಗೆ ನಕಾರಾತ್ಮಕ ಆದಾಯವನ್ನು ನೀಡಿದೆ. ಅಂದರೆ, ಷೇರು ಬೆಲೆ ಕುಸಿದಿದೆ. ಆದರೂ, ತಜ್ಞರು ಅದಾನಿ ವಿಲ್ಮರ್ ಷೇರುಗಳ ಮೇಲೆ ಬುಲಿಶ್ ಆಗಿದ್ದಾರೆ. ಅಂದರೆ, ಈ ಷೇರು ಬೆಲೆ ಏರುಗತಿಯಲ್ಲಿ ಸಾಗಲಿದೆ ಎಂದಿದ್ದಾರೆ.
ಬ್ರೋಕರೇಜ್ ಸಂಸ್ಥೆ ನುವಾಮಾ ಇನ್‌ಸ್ಟಿಟ್ಯೂಶನಲ್ ಇಕ್ವಿಟಿಯು ಈ ಸ್ಟಾಕ್ ಬೆಲೆ ರೂ. 450 ದಾಟಲಿದೆ ಎಂದು ಅಂದಾಜಿಸಿದೆ. ಇತ್ತೀಚೆಗೆ ಈ ಬ್ರೋಕರೇಜ್ ಸಂಸ್ಥೆಯು ಅದಾನಿ ವಿಲ್ಮರ್‌ ಷೇರಿನ 12 ತಿಂಗಳ ಗುರಿ ಬೆಲೆಯನ್ನು ರೂ. 480ಕ್ಕೆ ನಿಗದಿಪಡಿಸಿದೆ. ಅಂದರೆ ಒಂದು ವರ್ಷದಲ್ಲಿ ಈ ಷೇರು 480 ರೂ. ಆಗಲಿದೆ ಎಂದು ಅಂದಾಜಿಸಿದೆ. ಪ್ರಸ್ತುತ ಈ ಷೇರಿನ ಬೆಲೆ 330.90 ರೂ. ಇದರ ಪ್ರಕಾರ ಶೇರು ಶೇ. 46ಕ್ಕಿಂತ ಹೆಚ್ಚಿನ ಲಾಭವನ್ನು ನೀಡಬಹುದಾಗಿದೆ.
ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ 878 ಹಾಗೂ ಕನಿಷ್ಠ ಬೆಲೆ ರೂ. 227 ಇದೆ. ಕಳೆದ ಒಂದು ತಿಂಗಳಲ್ಲಿ ಈ ಷೇರ ಬೆಲೆ 4.10% ಕುಸಿತ ದಾಖಲಿಸಿದೆ. ಕಳೆದೊಂದು ವರ್ಷದಲ್ಲಿ 15.64% ಇಳಿಕೆ ಕಂಡಿದೆ.
ನುವಾಮಾ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ಹೇಳುವಂತೆ ಅದಾನಿ ವಿಲ್ಮರ್‌ನ ಲಾಭಗಳು ಕುಸಿತ ಕಂಡಿವೆ. ಕಚ್ಚಾ ವಸ್ತುಗಳ (RM) ಬೆಲೆಗಳಲ್ಲಿನ ಪ್ರವೃತ್ತಿಗಳು ಮತ್ತು ಸ್ಥಳೀಯ ಕಂಪನಿಗಳಿಂದ ಹಿನ್ನಡೆ ವೀಕ್ಷಿಸಬಹುದಾಗಿದೆ. ಬಾಂಗ್ಲಾದೇಶದ ಕಾರ್ಯಾಚರಣೆಗಳಲ್ಲಿ ಕಂಪನಿಯು ಎದುರಿಸುತ್ತಿರುವ ಸವಾಲುಗಳನ್ನು ವಿದೇಶಿ ವಿನಿಮಯ ಸ್ಥಾನ ಮತ್ತು ಆರ್ಥಿಕ ಮೂಲಭೂತ ಸುಧಾರಣೆಗಳೊಂದಿಗೆ ಪರಿಹರಿಸಲಾಗಿದೆ ಎಂದು ಬ್ರೋಕರೇಜ್ ಹೇಳಿದೆ.
ಈಗ ಕಂಪನಿಯ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳಿವೆ. ವಾರ್ಷಿಕ ಆಧಾರದ ಮೇಲೆ ಅದಾನಿ ವಿಲ್ಮಾರ್ ಕಂಪನಿಯ ಆದಾಯ 4.6 ಪ್ರತಿಶತದಷ್ಟು ಕುಸಿದಿದೆ. ಆದರೆ, ತೆರಿಗೆಯ ನಂತರದ ಲಾಭ (PAT) ವರ್ಷದಿಂದ ವರ್ಷಕ್ಕೆ ಶೇ. 67.5 ರಷ್ಟು ಹೆಚ್ಚಾಗಿದೆ.

ಬಿಗ್ ಬಾಸ್ OTT 3: ಭಾಯಿಜಾನ್ ಅಭಿಮಾನಿಗಳಿಗೆ ಶಾಕ್; ಸಲ್ಮಾನ್​ಖಾನ್​ ಈ ಕಾರ್ಯಕ್ರಮ ಹೋಸ್ಟ್ ಮಾಡುವುದಿಲ್ಲವೇಕೆ?
ಬಟ್ಟೆಗಳನ್ನು ಬಿಟ್ಟುಬಿಡಿ, ಈ ಬಾರಿ ಕೂದಲು ಬೋಳಿಸಿಕೊಂಡಿದ್ದಾರೆ! ನಟಿ ಉರ್ಫಿ ಜಾವೇದ್‌ ಟ್ರೋಲ್​ಗಳ ಸುರಿಮಳೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
