ನವದೆಹಲಿ:ಹಿಂಡನ್​ಬರ್ಗ್ ರೀಸರ್ಚ್ ವರದಿಯ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಅದಾನಿ ಸಮೂಹ ಗುಜರಾತ್​ನ ಮುಂದ್ರಾದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ 34,900 ಕೋಟಿ ರೂಪಾಯಿ ಮೊತ್ತದ ಕಲ್ಲಿದ್ದಲಿನಿಂದ ಪೊಲಿವಿನಿಲ್ ಕ್ಲೋರೈಡ್ (ಪಿವಿಸಿ) ಯೋಜನೆಯನ್ನು ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಗಾಗಿ ಹಣ ಸಂಗ್ರಹಿಸುವ ಯೋಜನೆಗೂ ಅದು ತಿಲಾಂಜಲಿ ನೀಡಿದೆ. ಈ ಯೋಜನೆಗಾಗಿ ಎಸ್​ಬಿಐ ನೇತೃತ್ವದ ಏಳರಿಂದ ಎಂಟು ಬ್ಯಾಂಕ್​ಗಳ ಸಮೂಹದಿಂದ 14,000 ಕೋಟಿ ರೂಪಾಯಿ ಸಂಗ್ರಹಿಸಲು ಮಾತುಕತೆ ನಡೆಸಲಾಗುತ್ತಿತ್ತು. ಅದಾನಿ ಸಮೂಹದಿಂದ ನಡೆದಿದೆ ಎನ್ನಲಾದ ವಂಚನೆಗಳ ಬಗ್ಗೆ ಹಿಂಡನ್​ಬರ್ಗ್ ಪ್ರಕಟಿಸಿದ ವರದಿಯಿಂದ ಆದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿರುವುದರ ನಡುವೆಯೇ ವಾರ್ಷಿಕ ದಶಲಕ್ಷ ಟನ್ ಹಸಿರು ಪಿವಿಸಿ ಯೋಜನೆಯ ಎಲ್ಲ ಚಟುವಟಿಕೆಗಳನ್ನು ತಕ್ಷಣ ದಿಂದಲೇ ನಿಲ್ಲಿಸುವಂತೆ ಸಂಬಂಧಪಟ್ಟ ಎಲ್ಲ ವರ್ತಕರು ಮತ್ತು ಸರಬರಾಜು ದಾರರಿಗೆ ಅದಾನಿ ಗ್ರೂಪ್ ಇಮೇಲ್ ರವಾನಿಸಿದೆ.
ಭಾರತದಲ್ಲಿ ಪಿವಿಸಿ ವಾರ್ಷಿಕ ಬೇಡಿಕೆ 3.50 ದಶಲಕ್ಷ ಟನ್ ಆಗಿರುವ ಹಿನ್ನೆಲೆಯಲ್ಲಿ ಮುಂದ್ರಾ ಪೆಟ್ರೋಕೆಮಿಕಲ್ ಯೋಜನೆಯನ್ನು ಅದಾನಿ ಗ್ರೂಪ್ ರೂಪಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
