ನವದೆಹಲಿ:ಅಮೆರಿಕದ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪವನ್ನು ಅದಾನಿ ಗ್ರೂಪ್​​ ತಿರಸ್ಕರಿಸಿದೆ. ಆಧಾರರಹಿತವಾದ ಈ ಆರೋಪಗಳನ್ನು ವೈಯಕ್ತಿಕ ಲಾಭಕ್ಕಾಗಿ ಮಾಡಲಾಗುತ್ತಿದೆ. ಇದು ದುರುದ್ದೇಶದಿಂದ ಕೂಡಿದ್ದು, ಸಂಸ್ಥೆಯ ಘನತೆಗೆ ಹಾನಿಯುಂಟು ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದೆ.
ಇದನ್ನು ಓದಿ:ವಿಪತ್ತಿನ ಸಮಯವನ್ನು ನಾನು ಅನುಭವಿಸಿದ್ದೇನೆ; ವಯನಾಡು ಭೇಟಿಯಲ್ಲಿ ಮೋರ್ಬಿ ಅಣೆಕಟ್ಟು ದುರಂತ ನೆನೆಪಿಸಿಕೊಂಡ ಪ್ರಧಾನಿ ಮೋದಿ
ಅಮೆರಿಕದ ಸಂಸ್ಥೆಯು ತನ್ನ ವರದಿಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಕೆಲವು ಆಯ್ದ ಸಂಗತಿಗಳನ್ನು ತನ್ನದೇ ಆದ ರೀತಿಯಲ್ಲಿ ಜಾಣತನದಿಂದ ಪ್ರಸ್ತುತಪಡಿಸಿದೆ. ವರದಿಯಲ್ಲಿ ಹೆಸರಿಸಲಾದ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರ ಸಂಬಂಧವನ್ನು ಹೊಂದಿಲ್ಲ ಎಂದು ಅದಾನಿ ಗ್ರೂಪ್ ತಿಳಿಸಿದೆ. ಈ ಹೊಸ ಆರೋಪಗಳು, ಹಿಂದೆ ಸಂಸ್ಥೆಯ ಅಪಖ್ಯಾತಿಗೆ ಕಾರಣವಾದ ಹಿಂಡೆನ್‌ಬರ್ಗ್ ಕ್ಲೈಮ್‌ಗಳ ಮರುಬಳಕೆಯಾಗಿದೆ. ಇವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡಿದ್ದು ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ. 2024ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಈ ಆರೋಪಗಳನ್ನು ತಿರಸ್ಕರಿಸಿದೆ ಎಂದು ಅದಾನಿ ಗ್ರೂಪ್ ಹೇಳಿದೆ.
ತನ್ನ ಸಾಗರೋತ್ತರ ವ್ಯವಹಾರವು ಸಂಪೂರ್ಣ ಪಾರದರ್ಶಕವಾಗಿದೆ. ಎಲ್ಲಾ ಸಂಬಂಧಿತ ವಿವರಗಳನ್ನು ಹಲವಾರು ಸಾರ್ವಜನಿಕ ದಾಖಲೆಗಳಲ್ಲಿ ನಿಯಮಿತವಾಗಿ ಬಹಿರಂಗಪಡಿಸಲಾಗುತ್ತದೆ. ನಾವು ಪಾರದರ್ಶಕತೆ, ಎಲ್ಲಾ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಅನುಸರಣೆಗೆ ದೃಢವಾಗಿ ಬದ್ಧರಾಗಿದ್ದೇವೆ ಎಂದು ಸಂಸ್ಥೆಯು ತಿಳಿಸಿದೆ.
ಅದಾನಿ ಸಮೂಹವು ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಅಥವಾ ಅವರ ಪತಿ ಧವಲ್ ಬುಚ್ ಅವರೊಂದಿಗೆ ಯಾವುದೇ ವಾಣಿಜ್ಯ ಸಂಬಂಧವನ್ನು ಹೊಂದಿಲ್ಲ. ಅಮೆರಿಕ ಕಂಪನಿಯು, ಅದಾನಿ ಗ್ರೂಪ್​ನ ಮಾನಹಾನಿ ಮಾಡಲು ಉದ್ದೇಶಪೂರ್ವಕವಾಗಿ ಈ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅದಾನಿ ಗ್ರೂಪ್​​​ ಆರೋಪಿಸಿದೆ.
Adani Group issues a statement on the latest report from Hindenberg Research.The latest allegations by Hindenburg are malicious, mischievous and manipulative selections of publicly available information to arrive at pre-determined conclusions for personal profiteering with…pic.twitter.com/WwKbPLTkrv
ಇತ್ತೀಚೆಗೆ ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್​ ಬುಚ್​​​ ಕಡಲಾಚೆಯ ಅದಾನಿ ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​​)
ನಮ್ಮ ಮಿಲಿಟರಿಗೆ ಭಾರತೀಯರನ್ನು ಸೇರಿಸಿಕೊಳ್ಳುತ್ತಿಲ್ಲ; ರಷ್ಯಾ ರಾಯಭಾರ ಕಚೇರಿ ಸ್ಪಷ್ಟನೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × five =
Remember me
