ಅಹಮದಾಬಾದ್​:ಆಘಾತಖಾರಿ ಘಟನಯೊಂದರಲ್ಲಿ 13 ವರ್ಷದ ಬಾಲಕಿ ಒಬ್ಬಳು ಮೊಬೈಲ್​ ಪೋನ್​ ಬಳಸಬೇಡ ಎಂದಿದ್ದಕ್ಕೆ ತನ್ನ ತಂದೆ-ತಾಯಿಗೆ ವಿಷ ಹಾಕಿ ಕೊಲಲು ಮುಂದಾಗಿದ್ದ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ.
ಬಾಲಕಿ ಹೆಚ್ಚಾಗಿ ಮೊಬೈಲ್​ ಪೋನ್​ ಉಪಯೋಗಿಸುತ್ತಿದ್ದ ಕಾರಣ ಆಕೆ ಸಂಪೂರ್ಣವಾಗಿ ಓದಿನ ಮೇಲೆ ಆಸಕ್ತಿಯನ್ನು ಕಳೆದುಕೊಂಡಿದ್ದಳು. ಈ ವಿಚಾರ ತಿಳಿದು ಆಕೆಯ ಪೋಷಕರು ಮೊಬೈಲ್​ ಪೋನ್​ ಕಸಿದು ಬಳಸದಂತೆ ಎಚ್ಚರಿಸಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಭಯಂ ಹೆಲ್ಪ್​ಲೈನ್ ಸದಸ್ಯೆ ಫಾಲ್ಗುಣಿ ಪಟೇಲ್ 13 ವರ್ಷದ ಬಾಲಕಿ ಸದಾ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾ, ತನ್ನ ಸ್ನೇಹಿತರ ಜೊತೆ ಮಾತನಾಡುತ್ತೆ ಹೆಚ್ಚಿನ ಸಮಯ ಕಳೆಯುತ್ತಿದ್ದಳು.​ ಓದಿನಲ್ಲಿ ಹಿಂದುಳಿದಿರುವ ಕಾರಣ ಹೆಚ್ಚಾಗಿ ಮೊಬೈಲ್​ ಬಳಸಬೇಡ ಎಂದು ಬಾಲಕಿಗೆ ಆಕೆಯ ಪೋಷಕರು ಎಚ್ಚರಿಕೆ ನೀಡಿದ್ಧಾರೆ.
ಇದನ್ನೂ ಓದಿ:ಮನೆ ಕಟ್ಟಲು, ಮಗನ ಮದುವೆಗೆ ಸಂಸದರ ನಿಧಿ ಬಳಸಿದ್ದೇನೆ! ಬಿಜೆಪಿ ಸಂಸದನ ಹೇಳಿಕೆ ವಿಡಿಯೋ ವೈರಲ್
ತನ್ನ ಮೊಬೈಲ್​ ಕಸಿದುಕೊಂಡಿದ್ದಕ್ಕೆ ಸಿಟ್ಟಿಗೆದ್ದಿದ ಬಾಲಕಿ ಪೋಷಕರು ಸೇವಿಸುವ ಆಹಾರಕ್ಕೆ ವಿಷ ಬೆರೆಸಿದ್ದಾಳೆ. ಸಕ್ಕರೆ ಡಬ್ಬದಲ್ಲಿ ಕೀಟನಾಶಕ ಔಷಧಿಯ ವಾಸನೆ ಬಂದಿದೆ. ಕೂಡಲ್ಲೇ ಅದನ್ನು ಪರಿಶೀಲಿಸಿದಾಗ ವಿಷ ಬೆರಸಿರುವ ವಿಚಾರ ಬೆಳಕಿಗೆ ಬಂದಿದೆ. ಬಾಲಕಿಯನ್ನು ಆಕೆಯ ಪೋಷಕರು ಹಿಡಿದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಕೂಡಲ್ಲೇ ಅವರು ಅಭಯಂ ಹೆಲ್ಪ್​ಲೈನ್​ಗೆ ಕರೆ ಮಾಡಿ ಮಾಹಿತಿ ನೀಡಿದ್ಧಾರೆ. ಬಾಲಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಆಪ್ತ ಸಮಾಲೋಚನೆಯ ನಂತರ ಆಕೆಯ ಚಲನವಲನಗಳನ್ನು ಗಮನಿಸಿ ಮನೆಗೆ ವಾಪಸ್​ ಕಳಿಸಲಾಗುವುದು ಎಂದು ಅಭಯಂ ಹೆಲ್ಪ್​ಲೈನ್​​ ಸದಸ್ಯೆ ಫಾಲ್ಗುಣಿ ಪಟೇಲ್ ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fifteen =
Remember me
