ನವದೆಹಲಿ:ದೇಶಾದ್ಯಂತ ಕೋವಿಡ್​-19 ಲಾಕ್​ಡೌನ್​ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್​ಗೆ ಹಾಗೂ ಉಳಿತಾಯ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದಿರುವುದಕ್ಕೆ ಬ್ಯಾಂಕ್​ಗಳು ವಿಧಿಸುತ್ತಿದ್ದ ದಂಡದಿಂದ ವಿನಾಯಿತಿ ನೀಡಿತ್ತು. ಈ ವಿನಾಯಿತಿಗಳು ಜೂನ್​ 30ರವರೆಗೆ ಮಾತ್ರ ಅನ್ವಯಿಸುತ್ತವೆ.
ಆದರೆ, ಕೇಂದ್ರ ಸರ್ಕಾರ ಈ ಸೌಲಭ್ಯವನ್ನು ವಿಸ್ತರಿಸಿರುವ ಬಗ್ಗೆಯಾಗಲಿ ಅಥವಾ ವಿಸ್ತರಿಸುವ ಸಾಧ್ಯತೆ ಬಗ್ಗೆಯಾಗಲಿ ಏನೊಂದು ಮಾತು ಹೇಳಿಲ್ಲ. ಹಾಗಾಗಿ, ಜುಲೈ 1ರಿಂದ ಎಟಿಎಂನಲ್ಲಿ ಹೆಚ್ಚುವರಿ ಟ್ರ್ಯಾನ್ಸಾಕ್ಷನ್​ ಮಾಡುವ ಮುನ್ನ ಹಾಗೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದವರು ಎಚ್ಚರವಹಿಸುವುದು ಒಳಿತು. ಇಲ್ಲವಾದರೆ, ವಿನಾಕಾರಣ ಬ್ಯಾಂಕ್​ಗಳಿಗೆ ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ:ಸುಶಾಂತ್‌ ಟ್ವಿಟರ್‌ನ ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ
ಕೋವಿಡ್​-19 ಹಿನ್ನೆಲೆಯಲ್ಲಿ ಮಾರ್ಚ್​ 24ರ ಮಧ್ಯರಾತ್ರಿಯಿಂದ ಜಾರಿಗೆ ಬಂದ ಲಾಕ್​ಡೌನ್​ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಉಳಿತಾಯ ಖಾತೆ ಹೊಂದಿರುವವರು ತಮ್ಮ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದೇ ಇದ್ದರೆ ಹಾಗೂ ಯಾವುದೇ ಬ್ಯಾಂಕ್​ನ ಎಟಿಎಂನಿಂದ ಹೆಚ್ಚುವರಿ ಟ್ರ್ಯಾನ್ಸಾಕ್ಷನ್​ ಮಾಡಿದರೆ ಜೂನ್​ 30ರವರೆಗೆ ದಂಡ ವಿಧಿಸದಂತೆ ಬ್ಯಾಂಕ್​ಗಳಿಗೆ ಸೂಚಿಸಿದ್ದರು. ಇದರಿಂದ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಿತ್ತು.
ಆಗಸ್ಟ್​ 31ರವರೆಗೆ ಇಎಂಐ ಪಾವತಿ ಮೇಲೆ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ. ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದ ಗ್ರಾಹಕರಿಗೆ ದಂಡ ವಿಧಿಸುವುದು, ಎಟಿಎಂನಿಂದ ಹೆಚ್ಚುವರಿ ಟ್ರಾನ್ಸಾಕ್ಷನ್​ಗೆ ದಂಡ ವಿಧಿಸುವುದರಿಂದ ವಿನಾಯಿತಿ ನೀಡುವ ಬಗ್ಗೆ ಅವರು ಏನೊಂದು ಹೇಳಿಕೆ ನೀಡಿಲ್ಲ.
ಪ್ಯಾಂಗಾಂಗ್​ನ ವಿವಾದಿತ ಪ್ರದೇಶದಲ್ಲಿ ಚೀನಾದ ನಕ್ಷೆ ಬಿಡಿಸಿದ ಚೀನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
