ನವದೆಹಲಿ:ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳ (ಪಿಎಸ್​ಯುು) ಹೆಚ್ಚುವರಿ ಜಮೀನು ಮತ್ತು ಕಟ್ಟಡಗಳ ಮಾರಾಟಕ್ಕೆ ಅನುವಾಗುವಂತೆ ರಾಷ್ಟ್ರೀಯ ಭೂ ನಗದೀಕರಣ ನಿಗಮ (ನ್ಯಾಶನಲ್ ಲ್ಯಾಂಡ್ ಮಾನಿಟೈಸೇಶನ್ ಕಾರ್ಪೆರೇಷನ್-ಎನ್​ಎಲ್​ಎಂಸಿ) ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ ಮೂಲಸೌಕರ್ಯ ಹೂಡಿಕೆ ಕ್ಷೇತ್ರಕ್ಕೆ ಹೆಚ್ಚಿನ ವೇಗ ಲಭಿಸಲಿದೆ. ಈಗಾಗಲೇ ಮಾರಾಟ ಮಾಡಿರುವ ಅಥವಾ ಮುಚ್ಚುವ ಹಂತದಲ್ಲಿರುವ ಪಿಎಸ್​ಯುು ಮತ್ತು ಸರ್ಕಾರಿ ಸಂಸ್ಥೆಗಳ ಆಸ್ತಿ ಮಾರಾಟಕ್ಕೆ ಈ ನಿಗಮ ಕಾರ್ಯ ನಿರ್ವಹಿಸಲಿದೆ.
ಬಳಕೆಯಾಗದ ಹಾಗೂ ಅರ್ಧ ಬಳಕೆಯಾದ ಮಹತ್ವದ್ದಲ್ಲದ ಆಸ್ತಿಗಳ ಮಾರಾಟದಿಂದ ಗಣನೀಯ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುವುದು ಸರ್ಕಾರದ ಉದ್ದೇಶವಾಗಿದೆ. ಪ್ರಸ್ತುತ, ಕೇಂದ್ರೀಯ ಸಾರ್ವಜನಿಕ ರಂಗದ ಉದ್ಯಮಗಳಲ್ಲಿ (ಸಿಪಿಎಸ್​ಇ) ಭೂಮಿ ಹಾಗೂ ಕಟ್ಟಡಗಳ ರೂಪದಲ್ಲಿ ಗಣನೀಯ ಪ್ರಮಾಣದ ಬಳಕೆಯಾಗದ ಹಾಗೂ ಅರೆಬರೆ ಬಳಕೆಯಾದ ಹೆಚ್ಚುವರಿ ಆಸ್ತಿಪಾಸ್ತಿಗಳಿವೆ. ಮುಚ್ಚಲಾಗುವ ಅಥವಾ ಬಂಡವಾಳ ಮಾರಾಟ ನಡೆಯುತ್ತಿರುವ ಸಿಪಿಎಸ್​ಇಗಳ ಈ ಹೆಚ್ಚುವರಿ ಆಸ್ತಿಗಳನ್ನು ಮಾರಿ ಅವುಗಳ ಮೌಲ್ಯವನ್ನು ನಗದೀಕರಿಸುವುದು ಅಗತ್ಯ ಎಂದು ಮೋದಿ ಸರ್ಕಾರ ಅಭಿಪ್ರಾಯ ಪಟ್ಟಿದೆ. ಈ ಆಸ್ತಿಗಳ ನಗದೀಕರಣಕ್ಕೆ ಎನ್​ಎಲ್​ಎಂಸಿ ಬೆಂಬಲ ನೀಡಲಿದೆ. ಸರಿಯಾಗಿ ಬಳಕೆಯಾಗದೇ ಇರುವ ಈ ಆಸ್ತಿಗಳ ಮಾರಾಟವು ಅವುಗಳನ್ನು ಉತ್ಪಾದಕ ಉದ್ದೇಶಗಳಿಗೆ ಬಳಸಲು ನೆರವಾಗುತ್ತದೆ. ಅದು ಖಾಸಗಿಯವರ ಬಂಡವಾಳ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತದೆ, ಹೊಸ ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವುದಲ್ಲದೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಇಂಬು ನೀಡುತ್ತದೆ. ಆರ್ಥಿಕ ಹಾಗೂ ಸಾಮಾಜಿಕ ಮೂಲ ಸೌಕರ್ಯ ರಚನೆಗೆ ಸಂಪನ್ಮೂಲ ಕ್ರೋಡೀಕರಿಸಲೂ ಅದು ಸಹಾಯಕವಾಗುತ್ತದೆ ಎಂದು ಸರ್ಕಾರ ಹೇಳಿದೆ.
ಬಜೆಟ್​ನಲ್ಲಿ ಘೋಷಣೆ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022ನೇ ಸಾಲಿನ ಬಜೆಟ್ ಭಾಷಣದಲ್ಲಿ ಎನ್​ಎಲ್​ಎಂಸಿ ರಚನೆಯ ಉದ್ದೇಶವನ್ನು ಪ್ರಕಟಿಸಿದ್ದರು. ಸಿಪಿಎಸ್​ಇಗಳು ಪ್ರಸಕ್ತ ಸುಮಾರು 3,400 ಎಕರೆ ಹೆಚ್ಚುವರಿ ಜಮೀನು ಹೊಂದಿವೆ ಎಂದು 2022ರ ಜನವರಿಯಲ್ಲಿ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + five =
Remember me
