ತಿರುಪತಿ:ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಟಿಸಿರುವ ರಾಮಾಯಣ ಕಥೆಯಾಧಾರಿತ ಆದಿಪುರುಷ್​​​ ಚಿತ್ರ ಜೂನ್ 16ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಆದಿಪುರುಷ್​​​ ಚಿತ್ರತಂಡವು ಅಂತಿಮ ಟ್ರೇಲರ್​ನ್ನು ಬಿಡುಗಡೆ ಮಾಡಿದೆ.
ಮಂಗಳವಾರ ತಿರುಪತಿಯಲ್ಲಿ ನಡೆದ ಅದ್ಧೂರಿ ಪ್ರೀ-ರಿಲೀಸ್ ಸಮಾರಂಭದಲ್ಲಿ ಈ ಟ್ರೇಲರ್​ನ್ನು ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರರಂಗದ ನಟ-ನಟಿ ಹಾಗೂ ಅನೇಕ ಗಣ್ಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆದಿಪುರುಷ್​ ಚಿತ್ರದ​ ಅಂತಿಮ ಟ್ರೈಲರ್​ನಲ್ಲಿ ಏನಿದೆ?2 ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೇಲರ್​ನಲ್ಲಿ ರಾಮಾಯಣದ ಕಥಾಹಂದರವನ್ನು ತೋರಿಸಲಾಗಿದೆ. ರಾವಣನು ಸೀತೆಯನ್ನು ಅಪಹರಿಸಿದ ನಂತರದಲ್ಲಾಗುವ ಘಟನೆಗಳ ಚಿತ್ರಣದ ಜತೆಗೆ ಯುದ್ಧಭೂಮಿಯಲ್ಲಿ ಪ್ರಭಾಸ್, ವಾನರ ಸೈನ್ಯ​ ಮತ್ತು ಯುದ್ಧದ ಅನೇಕ ದೃಶ್ಯಗಳನ್ನು ಈ ಟ್ರೇಲರ್​ ಒಳಗೊಂಡಿವೆ.
ಹಿಂದಿನ ಟ್ರೇಲರ್‌ಗಳು ಮತ್ತು ಟೀಸರ್‌ಗಳಿಗೆ ಹೋಲಿಸಿದರೆ ಈ ಟ್ರೇಲರ್​ನ ಮೊದಲಾರ್ಧವು ಉತ್ತಮವಾದ ದೃಶ್ಯಗಳನ್ನು ಹೊಂದಿದೆ. ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಟ್ರೇಲರ್​ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಭಾರತದ 5 ವಿವಿಧ ಭಾಷೆಗಳಲ್ಲಿ ಆದಿಪುರುಷ್​​ ಚಿತ್ರ ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
