ನವದೆಹಲಿ :ಟೋಕಿಯೋದಲ್ಲಿ ಪದಕ ಗೆಲ್ಲದಿದ್ದರೂ 200ಕ್ಕೂ ಹೆಚ್ಚು ದೇಶಗಳ ಆಟಗಾರರ ವಿರುದ್ಧ ಸೆಣೆಸಿ, ನಾಲ್ಕನೇ ಸ್ಥಾನ ಗಳಿಸಿರುವ ಭಾರತದ ಗಾಲ್ಫರ್​ ಅದಿತಿ ಅಶೋಕ್ ಎಲ್ಲರ ಗಮನ ಸೆಳೆದಿದ್ದಾರೆ. ಒಲಿಂಪಿಕ್ಸ್​ನಲ್ಲಿ ಭಾರತದ ಪರವಾಗಿ ಗಾಲ್ಫ್​ನಲ್ಲಿ ಇದುವರೆಗಿನ ಅತ್ಯುತ್ತಮ ಆಟಗಾರಿಕೆ ಪ್ರದರ್ಶಿಸಿರುವ ಅದಿತಿಗೆ, ದಿವಂಗತ ಮಿಲ್ಕಾ ಸಿಂಗ್​ರ ಪುತ್ರ ಹಾಗೂ ದೇಶದ ಹಿರಿಯ ಗಾಲ್ಫರ್ ಆಗಿರುವ ಜೀವ್​ ಮಿಲ್ಕಾ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
“ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಅದಿತಿ ಅಶೋಕ್​ ಇತಿಹಾಸ ರಚಿಸಿದ್ದಾರೆ. ಗಾಲ್ಫ್​ಅನ್ನು ಒಲಿಂಪಿಕ್ಸ್​ನಲ್ಲಿ 2016 ರಲ್ಲಿ ಸೇರಿಸಲಾಯಿತು. ಅದಿತಿ ಇದೀಗ ಯುವಜನರಿಗೆ ಹೊಸ ಭರವಸೆ ಹುಟ್ಟಿಸಿದ್ದಾರೆ. ಇದು ಭಾರತದಲ್ಲಿ ಗಾಲ್ಫ್​ ಕ್ರೀಡೆಯಾಗಿ ಬೆಳೆಯಲು ಒಳ್ಳೆಯ ಉತ್ತೇಜನ ನೀಡಲಿದೆ” ಎಂದಿದ್ದಾರೆ. “ಅದಿತಿಯ ತಂದೆತಾಯಿ ಅವಳಿಗೆ ಸಹಾಯ ಮಾಡಿದ್ದಾರೆ. ಈಗ ಆಕೆ ಏನೆಲ್ಲ ಮತ್ತು ಎಲ್ಲವೂ ಸಾಧ್ಯ ಎಂದು ತೋರಿಸಿದ್ದಾಳೆ. ಅದಿತಿ ಸಾಧಿಸಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ, ಬೇಸರಪಡುವ ಅಗತ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​
ಗಾಲ್ಫ್​ ಆಟವು ಶ್ರೀಮಂತರು ಸಮಯ ಕಳೆಯಲು ಆಡುವ ಆಟದಂತೆಯೇ ಬಿಂಬಿತವಾಗಿದ್ದು, ಬೇರೆ ಕ್ರೀಡೆಗಳಂತೆ ಈ ಆಟವನ್ನು ಆಯ್ದುಕೊಳ್ಳುವ ಜನರು ಕಡಿಮೆ. ಇದೀಗ ಒಲಿಂಪಿಕ್ಸ್​ನಲ್ಲಿ ಭಾರತದ ಯುವತಿಯು ರೋಮಾಂಚಕ ಪ್ರದರ್ಶನ ನೀಡಿರುವುದು ಕ್ರೀಡಾರ್ಥಿಗಳ ಆಸಕ್ತಿಯನ್ನು ಅದರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
“ನಮ್ಮ ದೇಶದಲ್ಲಿ ಗಾಲ್ಫ್​​ಗಾಗಿ ಹೆಚ್ಚು ಸಾರ್ವಜನಿಕ​ ಡ್ರೈವಿಂಗ್​ ರೇಂಜ್​ಗಳಿರಬೇಕೆಂದು ನಾನು ಸರ್ಕಾರವನ್ನು ಕೇಳುತ್ತಾ ಬಂದಿದ್ದೇನೆ. ಎಲ್ಲರಿಗೂ ಗಾಲ್ಫ್​ ಆಟವನ್ನು ಪ್ರಯತ್ನಿಸುವುದಕ್ಕೆ ಅವಕಾಶ ಸಿಗಬೇಕು. ಸಾರ್ವಜನಿಕರಿಗೆ ತೆರೆಯಲಾಗುವ ರೇಂಜ್​ಗಳಲ್ಲಿ ಮಕ್ಕಳು ಅವರ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಗಾಲ್ಫ್​ ಕೋರ್ಸ್​ಗಳಲ್ಲಿ ಭಾಗವಹಿಸಿ ಅವರ ಆಸಕ್ತಿಯಲ್ಲಿ ತೊಡಗಿಕೊಳ್ಳಬಹುದು” ಎಂದು ಜೀವ್​ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್)
ಒಲಿಂಪಿಕ್ಸ್​: ಕುಸ್ತಿಯಲ್ಲಿ ಕಂಚಿಗಾಗಿ ಕಾದಾಟ, ಜಾವಲಿನ್​ ಥ್ರೋನಲ್ಲಿ ಚಿನ್ನದಾಸೆ

ಬಿಜೆಪಿ, ಸರ್ಕಾರಕ್ಕೆ ಮಠಾಧೀಶರಿಂದ ಮೂರು ಬೇಡಿಕೆ! ಸಿಎಂ ಬೊಮ್ಮಾಯಿಗೆ ಶುಭ ಹಾರೈಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
