ನವದೆಹಲಿ: ಭಾರತದ ಪ್ರಥಮ ಸೌರ ಉಪಗ್ರಹ ಆದಿತ್ಯ ಎಲ್​&1 ಬಾಹ್ಯಾಕಾಶ ನೌಕೆಯಲ್ಲಿರುವ ಸಾಧನಗಳಲ್ಲಿ ಒಂದಾಗಿರುವ ಆದಿತ್ಯ ಸೋಲಾರ್​ ವಿಂಡ್​ ಪಾರ್ಟಿಕಲ್​ ಎಕ್ಸ್​ಪೆರಿಮೆಂಟ್​ (ಎಎಸ್​ಪಿಇಎಕ್ಸ್​ ಆಸ್ಪೆಕ್ಸ್​) ಅನ್ನು ಸಕ್ರಿಯಗೊಳಿಸಲಾಗಿದೆ.
ಅದು ತನ್ನ ಕಾರ್ಯಾಚರಣೆ ಆರಂಭಿಸಿದ್ದು ಸೌರ ಮಾರುತದ ಅಯಾನ್​ಗಳು, ಅದರಲ್ಲೂ ಮುಖ್ಯವಾಗಿ ಪ್ರೋಟಾನ್​ ಮತ್ತು ಆಲ್ಫಾ ಕಣಗಳನ್ನು ಸ್ವಿಸ್​ ಯಶಸ್ವಿಯಾಗಿ ಅಳತೆ ಮಾಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಆಸ್ಪೆಕ್ಸ್​ನಲ್ಲಿ ಸೋಲಾರ್​ ವಿಂಡ್​ ಅಯಾನ್​ ಸ್ಪೆಕ್ಟ್ರೋಮೀಟರ್​ (ಎಸ್​ಡಬ್ಲ್ಯುಐಎಸ್​&ಸ್ವಿಸ್​) ಮತ್ತು ಸುಪ್ರಾ ಥರ್ಮಲ್​ ಆ್ಯಂಡ್​ ಎನರ್ಜಿಟಿಕ್​ ಪಾರ್ಟಿಕಲ್​ ಸ್ಪೆಕ್ಟ್ರೋಮೀಟರ್​ (ಎಸ್​ಟಿಇಪಿಎಸ್​&ಸ್ಟೆಪ್ಸ್​) ಎಂಬ ಎರಡು ಉಪಕರಣಗಳಿವೆ ಎಂದು ಇಸ್ರೋ ಎಕ್ಸ್​ ಪೋಸ್ಟ್​ನಲ್ಲಿ ಹೇಳಿದೆ. ಸೆ. 10ರಂದು ಸ್ಟೆಪ್ಸ್​ ಸಕ್ರಿಯಗೊಳಿಸಲಾಗಿದ್ದು ನ. 2ರಂದು ಸ್ವಿಸ್​ ಉಪಕರಣ ಕಾರ್ಯಾರಂಭ ಮಾಡಿದೆ ಎಂದು ಇಸ್ರೋ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 11 =
Remember me
