ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ಯಶಸ್ಸಿನ ಬೆನ್ನಿಗೇ ಸೂರ್ಯಯಾನ ಆದಿತ್ಯ ಎಲ್​-1ಗೂ ಸಜ್ಜಾಗಿರುವ ವಿಷಯ ಇನ್ನೊಮ್ಮೆ ಮುನ್ನೆಲೆಗೆ ಬಂದಿತ್ತು. ಇದೀಗ ಸೂರ್ಯಯಾನದ ದಿನಾಂಕ ಕೂಡ ನಿಗದಿಯಾಗಿದೆ.
ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೂರ್ಯನ ಅಧ್ಯಯನಕ್ಕೆ ಹಮ್ಮಿಕೊಳ್ಳಲಾಗಿರುವ ಆದಿತ್ಯ ಎಲ್​-1, ಪಿಎಸ್​ಎಲ್​ವಿ-ಸಿ57 ಉಡಾವಣೆ ಕುರಿತ ದಿನಾಂಕವನ್ನು ಇಸ್ರೋ ನಿಗದಿ ಮಾಡಿ ಪ್ರಕಟಿಸಿದೆ. ಇದೇ ಸೆ. 2ರಂದು ಸೂರ್ಯಯಾನದ ಆದಿತ್ಯ ಎಲ್​-1 ಉಡಾವಣೆ ಆಗಲಿರುವುದಾಗಿ ಇಸ್ರೋ ತಿಳಿಸಿದೆ.
ಇದನ್ನೂ ಓದಿ:ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು ‘ಇಸ್ರೋ’ ಸಬ್​ಸ್ಕ್ರೈಬರ್ಸ್​ ಸಂಖ್ಯೆ
ಚಂದ್ರಯಾನ-3ರಂತೆ ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆ ಕೂಡ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಇದೇ ಸೆ. 2ರ ಬೆಳಗ್ಗೆ 11.50ಕ್ಕೆ ಉಡಾವಣೆ ಆಗಲಿದೆ. ಆಸಕ್ತರು ಶ್ರೀಹರಿಕೋಟಾದ ಲಾಂಚ್​ ಗ್ಯಾಲರಿಯಲ್ಲಿ ಕುಳಿತು ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದೂ ಇಸ್ರೋ ಆ ಕುರಿತ ಮಾಹಿತಿ ನೀಡಿದೆ.
🚀PSLV-C57/🛰️Aditya-L1 Mission:
The launch of Aditya-L1,the first space-based Indian observatory to study the Sun ☀️, is scheduled for🗓️September 2, 2023, at🕛11:50 Hrs. IST from Sriharikota.
Citizens are invited to witness the launch from the Launch View Gallery at…pic.twitter.com/bjhM5mZNrx
— ISRO (@isro)August 28, 2023

ಚಂದ್ರಯಾನ-3 ಲ್ಯಾಂಡರ್ ವಿನ್ಯಾಸ ನಂದೇ, ನಾನು ಇಸ್ರೋ ವಿಜ್ಞಾನಿ ಎಂದ; ಆಮೇಲೆ ಗೊತ್ತಾಯ್ತು, ಈತ ಬಿಕಾಂ ಪದವೀಧರ!

ಈಗ ‘ಎಕ್ಸ್’​ನಲ್ಲೇ ಕೆಲಸವೂ ಸಿಗಲಿದೆ: ಲಿಂಕ್ಡ್​ಇನ್​ಗೆ ಪೈಪೋಟಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
