ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯಶಸ್ಸಿನ ಬಳಿಕ ನಿನ್ನೆಯಷ್ಟೇ ಸೌರಯಾನ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಆದಿತ್ಯ-ಎಲ್​​1 ಉಡಾವಣೆ ಕೂಡ ಮಾಡಲಾಗಿದೆ. ಈ ಆದಿತ್ಯ-ಎಲ್​1 ಕುರಿತು ಒಂದಷ್ಟು ಆಸಕ್ತಿಕರ ಅಂಶ ಬಹಿರಂಗಗೊಂಡಿದೆ.
ಆದಿತ್ಯ-ಎಲ್​1 ಮಿಷನ್​ನ ಭಾಗವಾಗಿರುವ ಒಂದಷ್ಟು ವಿಜ್ಞಾನಿಗಳು ಸ್ವಚ್ಛತೆಗೆ ಅತ್ಯಧಿಕ ಆದ್ಯತೆ ಕೊಡಬೇಕಾಗಿದ್ದಲ್ಲದೆ, ಅವರು ಸೆಂಟ್​ ಧರಿಸುವಂತೆ ಇರಲಿಲ್ಲ. ಆದಿತ್ಯ-ಎಲ್​1ನ ಮುಖ್ಯ ಪೇಲೋಡ್​ ವಿಸಿಬಲ್ ಎಮಿಷನ್ ಲೈನ್​ ಕೊರೊನಾಗ್ರಾಫ್​ (ವಿಇಎಲ್​ಸಿ)ಗೆ ಕೆಲಸ ಮಾಡಿದ್ದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್ ಆ್ಯಸ್ಟ್ರೋಫಿಸಿಕ್ಸ್​ (ಐಐಎ) ವಿಜ್ಞಾನಿಗಳು ಇಂಥ ಕಠಿಣ ನಿಯಮಗಳನ್ನು ಅನುಸರಿಸಬೇಕಾಗಿದ್ದುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಈ ತಂಡದಲ್ಲಿನ ವಿಜ್ಞಾನಿಗಳು ಅತ್ಯಂತ ಸ್ವಚ್ಛವಾದ ಕೊಠಡಿಯಲ್ಲಿ 6 ಗಂಟೆಗಳ ಶಿಫ್ಟ್​ನಲ್ಲಿ ಕೆಲಸ ಮಾಡಿದ್ದರು. ಇವರು ಸೆಂಟ್​ ಸೇರಿದಂತೆ ಯಾವುದೇ ಸ್ಪ್ರೇ ಬಳಸುವಂತಿರಲಿಲ್ಲ. ಇಡೀ ದೇಹ ಮುಚ್ಚುವಂಥ ತೊಡುಗೆ ತೊಡಬೇಕಾಗಿತ್ತು. ಎಚ್​ಇಪಿಎ ಫಿಲ್ಟರ್, 99% ಕಾನ್ಸಂಟ್ರೇಟೆಡ್ ಐಸೊಪ್ರೊಫೈಲ್ ಆಲ್ಕೋಹಾಲ್ ಬಳಸಬೇಕಾಗಿತ್ತು. ಅಲ್ಲದೆ ಇವರು ಕೆಲಸ ಮಾಡುವ ಕೊಠಡಿ ಆಸ್ಪತ್ರೆಯ ಐಸಿಯುಗಿಂತಲೂ ಒಂದು ಲಕ್ಷ ಪಟ್ಟು ಹೆಚ್ಚು ಸ್ವಚ್ಛವಾಗಿರುತ್ತಿತ್ತು. ಕಲ್ಮಶದ ಒಂದೇ ಒಂದು ಸೂಕ್ಷ್ಮ ಕಣ ಕೂಡ ಇಡೀ ಶ್ರಮವನ್ನು ಹಾಳು ಮಾಡುವ ಸಾಧ್ಯತೆ ಇರುವುದರಿಂದ ಇದು ಅಗತ್ಯವಿತ್ತು ಎಂದು ಈ ತಂಡದ ವಿಜ್ಞಾನಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದರು.
ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…

ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
