ನವದೆಹಲಿ:ಸೆಪ್ಟೆಂಬರ್​ 2ರಂದು ಉಡಾವಣೆಗೊಂಡ ಭಾರತದ ಪ್ರಪ್ರಥಮ ಸೂರ್ಯ ಯೋಜನೆ ಆದಿತ್ಯ ಎಲ್​ 1 ನೌಕೆಯ ಕಕ್ಷೆಗೆ ಏರಿಸುವ ಎರಡನೇ ಹಂತದ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಸೆ.05) ಬೆಳಗ್ಗೆ ತಿಳಿಸಿದೆ.
ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್​ ಆ್ಯಂಡ್​ ಕಮ್ಯಾಂಡ್​ ನೆಟ್​ವರ್ಕ್​ (ಐಎಸ್​ಟಿಆರ್​ಎಸಿ) ಈ ಕಾರ್ಯಚರಣೆಯನ್ನು ನಡೆಸಿದೆ.
ಬೆಂಗಳೂರಿನ ಐಎಸ್​ಟಿಆರ್​ಎಸಿ ಇಂದ ಎರಡನೇ ಹಂತದ ಭೂಕಕ್ಷೆಗೆ ಏರಿರುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯ ವೇಳೆ ಮಾರಿಷಸ್​, ಬೆಂಗಳೂರು ಮತ್ತು ಪೋರ್ಟ್​ ಬ್ಲೇರ್​ನಲ್ಲಿರುವ ಐಎಸ್​ಟಿಆರ್​ಎಸಿ/ಇಸ್ರೋ ಗ್ರೌಂಡ್​ ಸ್ಟೇಷನ್​ನಿಂದ ಸ್ಯಾಟಲೈಟ್​ ಅನ್ನು ಟ್ರ್ಯಾಕ್​ ಮಾಡಲಾಯಿತು. ಹೊಸ ಕಕ್ಷೆಯು 282 x 40,225 ಕಿ.ಮೀ ಹೊಂದಿದೆ ಎಂದು ಇಸ್ರೋ ಎಕ್ಸ್​ನಲ್ಲಿ ಅಪ್​ಡೇಟ್​ ನೀಡಿದೆ.
Aditya-L1 Mission:The second Earth-bound maneuvre (EBN#2) is performed successfully from ISTRAC, Bengaluru.
ISTRAC/ISRO's ground stations at Mauritius, Bengaluru and Port Blair tracked the satellite during this operation.
The new orbit attained is 282 km x 40225 km.
The next…pic.twitter.com/GFdqlbNmWg
— ISRO (@isro)September 4, 2023

ಕಕ್ಷೆಗೆ ಏರಿಸುವ ಮುಂದಿನ ಹಂತದ ಪ್ರಕ್ರಿಯೆ ಸೆ. 10 ರಂದು ತಡರಾತ್ರಿ 2.30ಕ್ಕೆ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆಯನ್ನು ಸೆ. 3ರಂದು ಯಶಸ್ವಿಯಾಗಿ ನಡೆಸಲಾಗಿತ್ತು.
ಇದನ್ನೂ ಓದಿ:1 ಮಿಲಿಯನ್​ ಫಾಲೋವರ್ಸ್​ಗೆ ಬಿಕಿನಿ ವಿಡಿಯೋ ಗಿಫ್ಟ್​ ಅಂತೆ! ನೆಟ್ಟಿಗರಿಗೆ ಹೆದರಿ ಸೋನು ಏನು ಮಾಡಿದ್ದಾರೆ ನೋಡಿ…
ಸೋಲಾರ್​ ಅಟ್ಮಾಸ್ಪಿಯರ್​ ಅಂದ್ರೆ ಕ್ರೋಮೋಸ್ಪಿಯರ್​ ಮತ್ತು ಸೂರ್ಯನ ವಾತಾವರಣದ ಹೊರಭಾಗವಾದ ಕರೊನಾವನ್ನು ಡೀಪ್​ ಆಗಿ ಸ್ಟಡಿ ಮಾಡುವುದೇ ಈ ಆದಿತ್ಯ ಎಲ್​ 1 ಮಿಷನ್​ನ ಒಂದು ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಆದಿತ್ಯ ಎಲ್​ 1ಗೆ 7 ಪೇಲೋಡ್​ ಅನ್ನು ಇನ್​ಸರ್ಟ್​ ಮಾಡಿದ್ದಾರೆ. ಅವುಗಳಲ್ಲಿ ನಾಲ್ಕು ಸೋಲಾರ್​ ಸರ್ಫೇಸ್​ ಅನ್ನು ಸ್ಟಡಿ ಮಾಡುತ್ತವೆ ಮತ್ತು ಉಳಿದ ಮೂರು ಸೋಲಾರ್​ ವಿಂಡ್ಸ್​ ಮತ್ತು ಮ್ಯಾಗ್ನೇಟಿಕ್​ ಫೀಲ್ಡ್​ ಅನ್ನು ಅಧ್ಯಯನ​ ಮಾಡುತ್ತವೆ.
ಸೂರ್ಯನ ಅಧ್ಯಯನಕ್ಕಾಗಿ ವೀಕ್ಷಣಾಲಯ ಹೊಂದಿರುವ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ ಇದಾಗಿದೆ. ನೇಸರನ ಪ್ರಭಾವಲಯವಾದ ಕೊರೊನಾವನ್ನು ವೀಕ್ಷಿಸುವಂತೆ ಆದಿತ್ಯ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸೌರ ಮಾರುತವನ್ನು ವೀಕ್ಷಿಸುವ ಇನ್-ಸಿಟು ವ್ಯವಸ್ಥೆಯೂ ಇದರಲ್ಲಿದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದ ವರೆಗೆ ಈ ನೌಕೆ ಕ್ರಮಿಸಲಿದೆ. ಬಳಿಕ ಸೂರ್ಯನ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಇದು ಭೂಮಿ-ಸೂರ್ಯನ ದೂರದ ಸುಮಾರು 1% ಆಗಿದೆ. ಆದಿತ್ಯ-L1 ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ. ಆದರೆ, ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪಿಸುವುದಿಲ್ಲ ಎಂದು ಇಸ್ರೋ ಹೇಳಿದೆ.(ಏಜೆನ್ಸೀಸ್​)
ಚಂದ್ರನ ಬಳಿಕ ಸೂರ್ಯ ಶಿಕಾರಿ: ಭಾರತದ ಚೊಚ್ಚಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ಉಡಾವಣೆ ಯಶಸ್ವಿ

ಇಸ್ರೋ ಸೂರ್ಯ ಶಿಕಾರಿ! ಆದಿತ್ಯ-ಎಲ್ 1 ಮಿಷನ್​ನ ಒಟ್ಟು ವೆಚ್ಚ, ಪ್ರಯಾಣದ ದಿನ, ಕ್ರಮಿಸುವ ದೂರವೆಷ್ಟು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
