ನವದೆಹಲಿ:ಕರೊನಾ ಸಾಂಕ್ರಾಮಿಕ ರೋಗ ಎದುರಿಸಲು ವಿಧಿಸಲಾಗಿರುವ ಲಾಕ್​ಡೌನ್​ನಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಎದುರಿಸುವ ಕ್ರಮವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಒಂದಕ್ಕೆ ಅನುಕ್ರಮವಾಗಿ 10 ಮತ್ತು 13 ರೂಪಾಯಿ ಏರಿಕೆ ಮಾಡಿದೆ. ಈ ಏರಿಕೆಯಿಂದಾಗಿ ಜಾಗತಿಕವಾಗಿ ಕುಸಿಯುತ್ತಿರುವ ಕಚ್ಚಾ ತೈಲ ಬೆಲೆಗಳಲ್ಲಿ ಆಗುತ್ತಿರುವ ಕುಸಿತದ ಲಾಭ ಸಿಗದಂತೆ ಆಗಿದೆ. ಇಂಧನ ಬೆಲೆಯೇರಿಕೆ ಬುಧವಾರದಿಂದಲೇ ಜಾರಿಗೆ ಬಂದಿದೆ.
ಏರಿಕೆಯನ್ನು ತೈಲೋತ್ಪನ್ನ ಕಂಪನಿಗಳು ವಹಿಸಿ ಕೊಳ್ಳಲಿವೆ. ಹೀಗಾಗಿ ಅಬಕಾರಿ ಸುಂಕದ ಏರಿಕೆಯಿಂದ ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಗರಿಷ್ಠ ಚಿಲ್ಲರೆ ಬೆಲೆಗಳು ಈಗಿನಂತೆಯೇ ಮುಂದುವರಿಯಲಿವೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಚ್ಚಾ ತೈಲ ಬೆಲೆ ಶೇಕಡಾ 60 ಕುಸಿದಿರುವುದರಿಂದ ಅಬಕಾರಿ ಸುಂಕ ಏರಿಕೆಯಿಂದಾಗಿ ಚಿಲ್ಲರೆ ಮಾರಾಟ ಬೆಲೆಯಲ್ಲಿ ಏರಿಕೆಯಾಗುವುದಿಲ್ಲ. ಇದಕ್ಕೂ ಮುನ್ನ ದೆಹಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯಾಧಾರಿತ ತೆರಿಗೆಯನ್ನು (ವ್ಯಾಟ್) ಲೀಟರ್ ಒಂದಕ್ಕೆ ಅನುಕ್ರಮವಾಗಿ 1.67 ರೂ. ಹಾಗೂ 7.10 ರೂ. ಏರಿಕೆ ಮಾಡಿತ್ತು. ಈ ಏರಿಕೆಯಿಂದಾಗಿ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 71.26 ರೂ. ಹಾಗೂ ಡೀಸೆಲ್ ಬೆಲೆ 69.39 ರೂ. ಆಗಿದೆ.
ಇದನ್ನೂ ಓದಿನಿಮ್ಮ ಜಿಲ್ಲೆಯ ಕರೊನಾ ಸ್ಥಿತಿ ಇಂದು ಹೇಗಿದೆ? ಇಲ್ಲಿದೆ ವಿವರ
ದಾಖಲೆ ಹೆಚ್ಚಳ
ಪ್ರಸಕ್ತ ಅಬಕಾರಿ ಸುಂಕ ಏರಿಕೆ ದಾಖಲೆಯಾಗಿದೆ. ಸದ್ಯದ ಏರಿಕೆಯಿಂದ ಪೆಟ್ರೋಲ್ ಲೀಟರ್ ಒಂದರ ಅಬಕಾರಿ ಸುಂಕ 32.98 ರೂಪಾಯಿ ಹಾಗೂ ಡೀಸೆಲ್​ನ ಅಬಕಾರಿ ಸುಂಕ 31.83 ರೂ. ಆಗಿದೆ.
ಸರ್ಕಾರಕ್ಕೆ ಭಾರಿ ಆದಾಯ
ಅಬಕಾರಿ ಸುಂಕದಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಿದರೂ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 13,000ದಿಂದ 14,000 ಕೋಟಿ ರೂಪಾಯಿ ಅಧಿಕ ವರಮಾನ ಲಭ್ಯವಾಗುತ್ತದೆ. ಈ ಬಾರಿಯ ಏರಿಕೆಯಿಂದ ಪ್ರಸಕ್ತ ವಿತ್ತ ವರ್ಷದಲ್ಲಿ 2.85 ಲಕ್ಷ ಕೋಟಿ ರೂಪಾಯಿ ಆದಾಯ ಬರುವುದೆಂದು ನಿರೀಕ್ಷಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ದುಬಾರಿ
ಕರೊನಾ ವೈರಸ್ ಬಿಕ್ಕಟ್ಟಿನ ನಡುವೆ ಉತ್ತರ ಪ್ರದೇಶ ಸರ್ಕಾರ ಪೆಟ್ರೋಲ್ ಲೀಟರ್ ಬೆಲೆಯನ್ನು ಎರಡು ರೂಪಾಯಿ
ಹಾಗೂ ಡೀಸೆಲ್ ಬೆಲೆಯನ್ನು ಒಂದು ರೂಪಾಯಿ ಹೆಚ್ಚಿಸಿದೆ.
ಜಗತ್ತಿನಲ್ಲೇ ಅಧಿಕ ತೆರಿಗೆ ದರ
ಇದನ್ನೂ ಓದಿಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?
ಪ್ರಸಕ್ತ ಅಬಕಾರಿ ಸುಂಕ ಏರಿಕೆಯೊಂದಿಗೆ ಭಾರತ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಜಗತ್ತಿನಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಈಗಿನ ಏರಿಕೆಯಿಂದ ಇಂಧನ ಮೇಲಿನ ತೆರಿಗೆಗಳು ಸುಮಾರು ಶೇ. 69 ಆಗುತ್ತದೆ. ಇದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ.
ಮೂಗಿಗಿಂತ ಮೂಗುತಿ ಭಾರ!
ಪೆಟ್ರೋಲ್ ಮತ್ತು ಡೀಸೆಲ್​ಗೆ ಗ್ರಾಹಕರು ತೆರುವ ಹಣದಲ್ಲಿ ತೆರಿಗೆ ಮೊತ್ತವೇ ಶೇ. 70ರಷ್ಟಿರುತ್ತದೆ. ವಿವರ ಹೀಗಿದೆ:
1 ಲೀಟರ್ ಪೆಟ್ರೋಲ್
ಮೂಲ ಬೆಲೆ: 17.96. ಸುಂಕ (ಫ್ರೈಟ್): 0.32. ವರ್ತಕರಿಗೆ ವಿಧಿಸುವ ಬೆಲೆ (ಅಬಕಾರಿ ಸುಂಕ ಮತ್ತು ವ್ಯಾಟ್ ಬಿಟ್ಟು): 18.28. ಅಬಕಾರಿ ಸುಂಕ: 32.98. (ಇದು ಮೂಲ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಸೆಸ್ ಒಳಗೊಂಡಿರುತ್ತದೆ).
ಸರಾಸರಿ ಡೀಲರ್ ಕಮಿಷನ್: 3.56. ವ್ಯಾಟ್ (ಡೀಲರ್ ಕಮಿಷನ್ ಮೇಲಿನ ವ್ಯಾಟ್ ಸಹಿತ): 16.44. ದೆಹಲಿಯಲ್ಲಿ ಚಿಲ್ಲರೆ ಮಾರಾಟ ಬೆಲೆ: 71.26 (ಇದು 2.5% ಮೂಲ ಅಬಕಾರಿ ಸುಂಕ, 2.98 ಹೆಚ್ಚುವರಿ ಅಬಕಾರಿ ಸುಂಕ ಮತ್ತು 10 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ಒಳಗೊಂಡಿದೆ).
1 ಲೀಟರ್ ಡೀಸೆಲ್
ಮೂಲ ಬೆಲೆ:18.49. ಸುಂಕ (ಫ್ರೈಟ್): 0.29. ವರ್ತಕರಿಗೆ ವಿಧಿಸುವ ಬೆಲೆ (ಅಬಕಾರಿ ಸುಂಕ ಮತ್ತು ವ್ಯಾಟ್ ಬಿಟ್ಟು): 18.78. ಅಬಕಾರಿ ಸುಂಕ: 31.83. (ಇದು ಮೂಲ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಸೆಸ್ ಒಳಗೊಂಡಿರುತ್ತದೆ).
ಸರಾಸರಿ ಡೀಲರ್ ಕಮಿಷನ್: 2.52. ವ್ಯಾಟ್ (ಡೀಲರ್ ಕಮಿಷನ್ ಮೇಲಿನ ವ್ಯಾಟ್ ಸಹಿತ): 16.26. ದೆಹಲಿಯಲ್ಲಿ ಚಿಲ್ಲರೆ ಮಾರಾಟ ಬೆಲೆ: 69.39. (ಇದು 2.5% ಮೂಲ ಅಬಕಾರಿ ಸುಂಕ, 2.98 ಹೆಚ್ಚುವರಿ ಅಬಕಾರಿ ಸುಂಕ ಮತ್ತು 10 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ಒಳಗೊಂಡಿದೆ).
ಇತರ ಕೆಲವು ಪ್ರಮುಖ ದೇಶಗಳಲ್ಲಿ ಇಂಧನ ಮೇಲಿನ ತೆರಿಗೆ ದರ
ಇಟಲಿ- 64%. ಫ್ರಾನ್ಸ್ ಮತ್ತು ಜರ್ಮನಿ- 63%. ಬ್ರಿಟನ್- 62%. ಸ್ಪೇನ್- 53%.
ಜಪಾನ್- 47%. ಕೆನಡಾ- 33%. ಅಮೆರಿಕ- 19%.
ನಾಳೆಯಿಂದಲೇ ಮನೆ ಬಾಗಿಲಿಗೆ ಮದ್ಯ ಸರಬರಾಜು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 19 =
Remember me
