ನವದೆಹಲಿ :ಕರೊನಾ ಸನ್ನಿವೇಶದ ಹಿನ್ನೆಲೆಯಲ್ಲಿ ಇನ್ಸ್​ಟಿಟ್ಯೂಟ್ ಆಫ್​ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ (ಐಸಿಎಸ್​ಐ) ಈ ವರ್ಷದ ಕಂಪೆನಿ ಸೆಕ್ರೆಟರೀಸ್​ ಎಕ್ಸಿಕ್ಯುಟೀವ್ ಎಂಟ್ರೆನ್ಸ್​ ಟೆಸ್ಟ್​ (CSEET 2021) ಅನ್ನು ಆನ್​ಲೈನ್ ಪರೀಕ್ಷೆಯಾಗಿ ನಡೆಸುತ್ತಿದೆ. ಮೇ 8 ರಂದು ನಿಗದಿಯಾಗಿರುವ ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿರುವ ಅಭ್ಯರ್ಥಿಗಳಿಗೆ ಇದೀಗ ಅಡ್ಮಿಟ್​ ಕಾರ್ಡ್​ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆ ಬರೆಯಲಿರುವ ಅರ್ಜಿದಾರರು ಐಸಿಎಸ್​​ಐನ ಅಧಿಕೃತ ವೆಬ್​ಸೈಟ್ icsi.edu ನಿಂದ ಅಡ್ಮಿಟ್ ಕಾರ್ಡ್​ಅನ್ನು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ರಿಮೋಟ್-ಪ್ರೊಕ್ಟರ್ಡ್ ಆನ್‌ಲೈನ್ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳು ತಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗಳ ಮೂಲಕ ಮನೆಯಿಂದಲೇ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ
ಆಪ್ಟ್​-ಔಟ್​ ಸೌಲಭ್ಯ :ಈ ಬಾರಿ ಮಾತ್ರ ಅನ್ವಯವಾಗುವಂತೆ, ಆನ್​ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳಲು ವೆಬ್​ಕ್ಯಾಮ್​ ಹೊಂದಿದ ಕಂಪ್ಯೂಟರ್​ನ ಮೂಲ ಸೌಕರ್ಯವಿಲ್ಲದ ಮತ್ತು ಕಂಟೈನ್​ಮೆಂಟ್ ಜೋನ್​​ಗಳಲ್ಲಿರುವ ಅರ್ಜಿದಾರರಿಗೆ ಮೇ ಪ್ರವೇಶ ಪರೀಕ್ಷೆಯಿಂದ ಆಪ್ಟ್​ ಔಟ್​ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಹೀಗೆ ಆಪ್ಟ್ ಔಟ್ ಪಡೆಯುವವರು ನಿಗದಿತ ಫಾರ್ಮಾಟ್​ನಲ್ಲಿ ಘೋಷಣೆ ಸಲ್ಲಿಸಿ ಜುಲೈ 2021 ರಲ್ಲಿ ನಡೆಯುವ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.(ಏಜೆನ್ಸೀಸ್)
ಈ ಬಾರಿ ಚಾರ್ ​​ಧಾಮ್​ ಯಾತ್ರಾ ಇಲ್ಲ : ಉತ್ತರಾಖಂಡ ಸಿಎಂ

ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
