ಮುಂಬೈ:ಖ್ಯಾತ ಗಾಯಕ ಅದ್ನಾನ್​ ಸಾಮಿ ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಭಾರೀ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣವೂ ಇದೆ. ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಗಾಯಕ ಅದ್ನಾನ್​ ತಮ್ಮ ಹಳೆಯ ಫೋಟೋ ಹಾಗೂ ಈಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೇ ಶಾಕ್​ ನೀಡಿದ್ದಾರೆ.
ಬರೋಬ್ಬರಿ 200 ಕೆಜಿಗೂ ಅಧಿಕ ತೂಕವಿದ್ದ ಅದ್ನಾನ್​​ ಕಳೆದ ಕೆಲವು ವರ್ಷಗಳಿಂದಲೇ ದೇಹವನ್ನು ಕರಗಿಸಿಕೊಂಡಿದ್ದರು. ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ ನಾಯಕನಿಗೂ ಮೀರಿಸುವ ಫಿಟ್ನೆಸ್​ ಹೊಂದಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳೇ ಶಾಕ್​ ಆಗಿದ್ದಾರೆ.ನಿಜಕ್ಕೂ ಇದು ನೀವೇ ನಾ ಎಂದು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಅವರನ್ನು ಹೊಗಳಿದ್ದಾರೆ. ಇನ್ನು ಸ್ಥೂಲಕಾಯ ಜನರಿಗೆ ಅದ್ನಾನ್​ ಮಾದರಿಯಾಗಿದ್ದಾರೆ.
ಸದ್ಯ ಈಗ ನಾನು ಸಂಪೂರ್ಣವಾಗಿ ಫಿಟ್​ ಆಗಿದ್ದೇನೆ. ಸ್ಥೂಲಕಾಯದಿಂದ ದೇಹ ಕರಗಿಸಿಕೊಳ್ಳಲು ಪಟ್ಟ ಶ್ರಮ ಒಂದಿಷ್ಟಲ್ಲ ಎಂದಿರುವ ಅದ್ನಾನ್​​, ಸದ್ಯ ತಮ್ಮ ಈಗಿನ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ. 50 ವರ್ಷದ ಅದ್ನಾನ್​ ಬರೋಬ್ಬರಿ 230 ಕೆಜಿ ತೂಕವಿದ್ದರು. ಸದ್ಯ ಈಗ 75ಕೆಜಿಗೆ ಇಳಿಸಿಕೊಂಡಿದ್ದಾರೆ. ಇದಕ್ಕಾಗಿ ನಾನು ಯಾವುದೇ ಶಸ್ತ್ರಚಿಕಿತ್ಸೆ ಮೊರೆ ಹೋಗಿಲ್ಲ, ಉತ್ತಮ ಡಯಟ್​ ತೆಗೆದುಕೊಂಡು ದೇಹ ದಂಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾಗೆ ಕರೊನಾ ಪಾಸಿಟಿವ್​: ಬಿಸಿಸಿಐ ಸ್ಪಷ್ಟನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
