ಕಂಕೇರ್​:ದತ್ತು ಸ್ವೀಕಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬಳು ಇಬ್ಬರು ಚಿಕ್ಕಮಕ್ಕಳನ್ನು ಮನಬಂದಂತೆ ಥಳಿಸಿ ನೆಲಕ್ಕೆ ಎಸೆದಿರುವ ಘಟನೆ ಛತ್ತಿಸ್​ಗಢದ ಕಂಕೇರ್​ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಒಡಿಶಾ ರೈಲು ದುರಂತ | ನೆರವಿನ ಹಸ್ತ ಚಾಚಿದ ರಿಲಯನ್ಸ್ ಫೌಂಡೇಶನ್
ಸೀಮಾ ದ್ವಿವೇದಿ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದು. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ದೃಶ್ಯದಲ್ಲೇನಿದೆ?ಆರೋಪಿಯು ಚಿಕ್ಕ ಹುಡುಗಿಯನ್ನು ಹೊಡೆದು, ಕೂದಲಿನಿಂದ ಹಿಡಿದು ನೆಲಕ್ಕೆ ಎಸೆದಿದ್ದಾರೆ. ಇದರಿಂದಾಗಿ ಹುಡುಗಿ ಅಳಲು ಪ್ರಾರಂಭಿಸಿದ್ದು, ಸೀಮಾ ಹುಡುಗಿಯನ್ನು ಮತ್ತೊಮ್ಮೆ ಎತ್ತಿ ಹಾಸಿಗೆಯ ಮೇಲೆ ಎಸೆದು ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ಇತರ ಸಿಬ್ಬಂದಿಗಳು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದರೂ ಅವರಿಬ್ಬರೂ ಮಧ್ಯಪ್ರವೇಶಿಸಿ ಮಗುವನ್ನು ರಕ್ಷಿಸಿಲ್ಲ.
ಈ ಕೃತ್ಯವು ಬೆಳಕಿಗೆ ಬಂದ ನಂತರ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಕಂಕೇರ್​​ ಜಿಲ್ಲಾಧಿಕಾರಿ ಡಾ.ಪ್ರಿಯಾಂಕಾ ಶುಕ್ಲಾ ಆಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
