ಬೆಂಗಳೂರು:2004ರಂದು ಮಂಗಳೂರಿನಲ್ಲಿ ನಡೆದ ವಕೀಲ ನೌಶಾನ್​ ಕಾಶಿಂಜಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು 10 ದಿನಗಳ ಕಾಲ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.ಇಲ್ಲಿಯವರೆಗೆ ಮಂಗಳೂರಿನ ಪೊಲೀಸರು ಈ ಪ್ರಕರಣ ತನಿಖೆ ನಡೆಸುತ್ತಿದ್ದರು. ಈಗ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಕೇಸಿನ ತನಿಖೆ ನಡೆಸುವಂತೆ ಸಿಸಿಬೆ ನಿರ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಸಿಸಿಬಿಗೆ ಈ ಕೇಸ್‌ ವರ್ಗಾವಣೆಯಾಗಿದೆ.ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ನೇಪಾಳ ಮೂಲದ ಗೃಹಿಣಿ ಆತ್ಮಹತ್ಯೆಗೆ ಶರಣು10 ದಿನಗಳ ಕಾಲ ಬೆಂಗಳೂರು ನಗರ ಸಿಸಿಬಿ ವಶಕ್ಕೆ ಪಡೆಯಲಾಗಿದೆ. 2004ರ ಏ.9ರಂದು ಮಂಗಳೂರಿನ ಪಳ್ನೀರ್‌ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿಯೇ ನೌಶಾದ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ತನ್ನ ಸಹಚರರ ಮೂಲಕ ವಕೀಲ ನೌಶಾದ್ ಅವರನ್ನು ಹತ್ಯೆ ಮಾಡಿಸಿದ್ದ. ಭೂಗತ ದೊರೆ ದಾವೂದ್‌ ಇಬ್ರಾಹಿಂ ಸಹಚರ ರಶೀದ್‌ ಮಲಬಾರಿ ಪರವಾಗಿ ನೌಶಾದ್‌ ವಾದ ಮಂಡಿಸುತ್ತಿದ್ದುದೇ ಈ ಕೊಲೆಗೆ ಕಾರಣ ಎಂಬ ಆರೋಪವಿದೆ.ರವಿ ಪೂಜಾರಿ ವಿರುದ್ಧ ಇದಾಗಲೇ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪಟ್ಟಿಯಲ್ಲಿ ಈತ ಮೋಸ್ಟ್‌ ವಾಂಟೆಡ್‌ ಅಂಡರ್‌ ವರ್ಲ್ಡ್‌ ಡಾನ್‌. ಕರ್ನಾಟಕದಲ್ಲಿ ಈತನ ಮೇಲೆ 200ಕ್ಕೂ ಹೆಚ್ಚು ಪ್ರಕರಣಗಳಿವೆ.ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11, ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಹಾಗೂ ಶಿವಮೊಗ್ಗದಲ್ಲಿ ತಲಾ ಒಂದೊಂದು ಪ್ರಕರಣವಿದೆ. ಇವಿಷ್ಟೆ ಅಲ್ಲದೇ, ಮುಂಬೈನಲ್ಲಿ 49 ಮತ್ತು ಗುಜರಾತ್‌ನಲ್ಲಿ 75 ಪ್ರಕರಣಗಳು ರವಿ ಪೂಜಾರಿ ಮೇಲೆ ದಾಖಲಾಗಿದೆ.
ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
