ತಿರುವನಂತಪುರ:ಇವರೊಂಥರಾ ಅಜಗಜಾಂತರ ದಂಪತಿ. ಅದು ಹೇಗೆ ಒಂದಾದರೋ ಗೊತ್ತಿಲ್ಲ. ಇವರ ನಡುವೆ ‘ಅಫೇರ್ಸ್’​ ಇದ್ದಿದ್ದು ನಿಜವಾದರೂ ಅದು ಈಗಾಗಲೇ ‘ಕರೆಂಟ್​’ನಲ್ಲಿ ಕೊನೆಗೊಂಡಿದೆ ಎಂಬುದು ‘ಕರೆಂಟ್​ ಅಫೇರ್ಸ್’. ಅರ್ಥಾತ್​ ಈಗ ಅವಳಲ್ಲಿ, ಅವನಿಲ್ಲಿ ಎಂಬಂತಾಗಿರುವ ಇವರದ್ದು ಒಂಥರಾ ‘ಶಾಕಿಂಗ್’ ನ್ಯೂಸ್​.
ಹೌದು.. ವಯಸ್ಸಿನ ಅಂತರದ ಮಧ್ಯೆಯೂ ಹತ್ತಿರವಾಗಿದ್ದ ಈ ದಂಪತಿಯ ಪೈಕಿ ಈಗ ಪತ್ನಿ ಪರಲೋಕದಲ್ಲಿ, ಪತಿ ಪೊಲೀಸ್ ಠಾಣೆಯಲ್ಲಿ ಎಂಬಂತಾಗಿದೆ. 51 ವರ್ಷದ ಪತ್ನಿ ನಿಗೂಢವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ 26 ವರ್ಷದ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ವರ್ಷಾಂತ್ಯಕ್ಕೆ ನಂದಿಬೆಟ್ಟದಲ್ಲಿ ಸಂಭ್ರಮಿಸುವ ಆಸೆ ಇಟ್ಟುಕೊಂಡಿದ್ದರೆ ಬಿಟ್ಟುಬಿಡಿ…
ಕಾರಕೋಣಂ ಸಮೀಪದ ಥ್ರೆಸ್ಯಾಪುರಂ ನಿವಾಸಿ ಸಖಾ ಕುಮಾರಿ ಮೃತಪಟ್ಟಿರುವ ಮಹಿಳೆ. ಎಚ್ಚರ ತಪ್ಪಿದಂಥ ಸ್ಥಿತಿಯಲ್ಲಿದ್ದ ಸಖಾ ಕುಮಾರಿಯನ್ನು ಪತಿ ಅರುಣ್​ ಶನಿವಾರ ಬೆಳಗ್ಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದ್ದಾರೆ.
ಕ್ರಿಸ್​ಮಸ್​ ಆಚರಣೆ ಹಿನ್ನೆಲೆಯಲ್ಲಿ ಮನೆಯಲ್ಲಿ ಅಲಂಕಾರ ಮಾಡುತ್ತಿದ್ದ ಪತ್ನಿಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಅರುಣ್​ ಹೇಳಿದ್ದರೂ ಶವದ ಲಕ್ಷಣದ ಬಗ್ಗೆ ಅನುಮಾನ ಮೂಡಿದ್ದರಿಂದ ಪೊಲೀಸರು ಅದನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಪತಿಯ ವಿಚಾರಣೆ ಜತೆಗೆ ಅವರ ಮನೆಯನ್ನು ಪರಿಶೀಲಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ. ಇನ್ನು ಇವರಿಬ್ಬರು 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಎಂಬ ಮಾಹಿತಿ ಸಖಾ ಕುಮಾರಿಯ ಸಂಬಂಧಿಕರಿಂದ ಪೊಲೀಸರಿಗೆ ಲಭಿಸಿದೆ. (ಏಜೆನ್ಸೀಸ್​)
ವಿಷ್ಣುವರ್ಧನ್​ ಪುತ್ಥಳಿ ಧ್ವಂಸ; ಅಭಿಮಾನಿಗಳಿಂದ ಪ್ರತಿಭಟನೆ, ಆಕ್ರೋಶ

ಮನೆಯವರ ವಿರೋಧದ ನಡುವೆಯೂ ಅದನ್ನೇ ಆರಿಸಿಕೊಂಡ್ಲು ಈ ಮೂರು ಮಕ್ಕಳ ತಾಯಿ..!

ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 9 =
Remember me
