ಹಿಂದಿ ಕಿರುತೆರೆಖ್ಯಾತ ನಟಿ ಆರ್ಶಿ ಖಾನ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ, ಉಗ್ರರ ಕೈಯಲ್ಲಿ ಅಫ್ಘಾನಿಸ್ತಾನ ನಲುಗುತ್ತಿದ್ದು, ಇದರ ಎಫೆಕ್ಟ್ ಈ ನಟಿಗೂ ತಟ್ಟಿದೆ. ಅರೇ ತಾಲಿಬಾನಿಗಳಿಗೂ ಈ ನಟಿಗೂ ಏನು ಸಂಬಂಧ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಅದಕ್ಕೆ ಕಾರಣ ಇಲ್ಲಿದೆ ನೋಡಿ.
ಖ್ಯಾತ ನಟಿ ಆರ್ಶಿ ಅಫ್ಘಾನಿಸ್ತಾನದ ಕ್ರಿಕೆಟ್​ ಆಟಗಾರರೊಬ್ಬರ ಜೊತೆ ಮದುವೆ ಆಗಲು ನಿರ್ಧರಿಸಿದ್ದರು. ಆದರೆ ಈಗ ಅದು ಕಷ್ಟಸಾಧ್ಯ ಎಂದು ಸ್ವತಃ ಆರ್ಶಿ ಖಾನ್​ ಮಾಹಿತಿ ಹೊರಹಾಕಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಪ್ರಾರಂಭವಾಗಿದೆ. ತಾಲಿಬಾನಿಗಳು ತಮಗೆ ಬೇಕಾದ ಹಾಗೆ ನಿಮಯಗಳನ್ನು ಮಾಡಿಕೊಂಡು ಆಡಳಿತ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರೆನ್ನದೇ ಬೀದಿ ಬೀದಿಗಳಲ್ಲಿ ಗುಂಡಿಟ್ಟು ಸಾಯಿಸುತ್ತಿದ್ದಾರೆ. ಅಲ್ಲಿ ಬದುಕುವುದು ಅಸಾಧ್ಯವಾಗಿದೆ.
ತಾಲಿಬಾನಿಗಳು ಆಫ್ಘನ್​ ಅನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಅಲ್ಲಿನ ಕ್ರಿಕೆಟರ್​ ಒಬ್ಬರ ಜೊತೆ ಆರ್ಶಿ ಮದುವೆ ಮಾಡಬೇಕು ಎಂದು ಅವರ ತಂದೆ ನಿರ್ಧರಿಸಿದ್ದರು. ಇದೇ ಅಕ್ಟೋಬರ್​ನಲ್ಲಿ ನಿಶ್ಚಿತಾರ್ಥ ನೆರವೇರಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಅಪ್ಘಾನಿಸ್ತಾನದ ಪರಿಸ್ಥಿತಿ ನೋಡಿದರೆ ಆ ದೇಶಕ್ಕೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ನಮ್ಮ ಕುಟುಂಬದ ಪೂರ್ವಜರು ಇದ್ದಿದ್ದು ಕೂಡ ಅಫ್ಘಾನಿಸ್ತಾನದಲ್ಲಿ. ನಮ್ಮ ತಾತ ಆಫ್ಘನ್​ನಿಂದ ಭೊಪಾಲ್​ಗೆ ವಲಸೆ ಬಂದು ಜೈಲರ್​ ಆಗಿದ್ದರು. ಆದರೆ ನನ್ನ ತಂದೆ-ತಾಯಿ ರೀತಿ ನಾನು ಅಪ್ಪಟ ಭಾರತೀಯಳು. ಈಗ ನನ್ನ ಪೋಷಕರು ನನಗೆ ಭಾರತೀಯ ಹುಡುಗನನ್ನೇ ಹುಡುಕುತ್ತಾರೆ ಎಂಬುದು ನನಗೆ ಖಾತ್ರಿ ಆಗಿದೆ ಎಂದು ಆರ್ಶಿ ಖಾನ್​ ಹೇಳಿದ್ದಾರೆ.
ಹಿಂದಿ ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಆರ್ಶಿ ಖಾನ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಸೀಸನ್​ 11ರಲ್ಲೂ ಅವರು ಭಾಗವಹಿಸಿದ್ದು, ಹಲವಾರು ಆಲ್ಬಂ ಸಾಂಗ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್)
ಬಂದೂಕು ಸ್ವಚ್ಛ ಮಾಡುವಾಗ ಮಿಸ್ ಫೈರಿಂಗ್: ಓರ್ವ ಪೊಲೀಸ್ ಸಾವು
KGF ಸಿನಿಮಾ ಬಗ್ಗೆ ವಿದೇಶಿಗನಿಂದ ರ್ಯಾಪ್ ಸಾಂಗ್, ಪ್ರತಿಕ್ರಿಯೆ ನೀಡಿದ ಪ್ರಶಾಂತ್ ನೀಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
