ನವದೆಹಲಿ:ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಶನಿವಾರ ರಾತ್ರಿ ಭಾರತದಲ್ಲಿನ ರಾಯಭಾರ ಕಚೇರಿಯ ಕುರಿತು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಅಫ್ಘಾನಿಸ್ತಾನವು ಭಾರತದಲ್ಲಿನ ತನ್ನ ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ನಿಲ್ಲಿಸುತ್ತಿರುವುದಾಗಿ ಪ್ರಕಟಿಸಿದೆ. ಇದಕ್ಕೆ ಭಾರತ ಸರ್ಕಾರದಿಂದ ಸೂಕ್ತ ರಾಜತಾಂತ್ರಿಕ ನೆರವು ಸಿಗದೆ ಇರುವುದು ಕಾರಣ ಎಂದು ಆರೋಪಿಸಿದೆ.
ಭಾನುವಾರದಿಂದ ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ತಾಲಿಬಾನ್ ಘೋಷಿಸಿದೆ. ಆತಿಥೇಯ ಭಾರತ ಸರ್ಕಾರದ ಬೆಂಬಲದ ಕೊರತೆ ಮತ್ತು ಆಫ್ಘನ್ ಜನರ ಹಿತಾಸಕ್ತಿಗಳನ್ನು ಪೂರೈಸಲು ಅಸಮರ್ಥತೆಯಿಂದಾಗಿ ಅಕ್ಟೋಬರ್ 1 ರಿಂದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರ ಕಚೇರಿ ಶನಿವಾರ ರಾತ್ರಿ ಘೋಷಿಸಿತು. ಈ ನಿರ್ಧಾರವನ್ನು ಪ್ರಕಟಿಸಿದ್ದಕ್ಕಾಗಿ ವಿಷಾದಿಸುತ್ತೇವೆ ಎಂದು ಆಫ್ಘನ್ ಹೇಳಿದೆ.
ಇದನ್ನೂ ಓದಿ:ಏಷ್ಯನ್​ ಗೇಮ್ಸ್; ಟ್ರ್ಯಾಪ್​ ಶೂಟಿಂಗ್ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ
“ತೀವ್ರ ದುಃಖ, ವಿಷಾದ ಮತ್ತು ನಿರಾಶೆಯೊಂದಿಗೆ ಹೊಸದಿಲ್ಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ಅಂತ್ಯಗೊಳಿಸುವ ಈ ನಿರ್ಧಾರವನ್ನು ಪ್ರಕಟಿಸುತ್ತಿದೆ” ಎಂದು ಎಂಬೆಸಿ ಹೇಳಿಕೆ ನೀಡಿದೆ.ಫರೀದ್ ಮಮುಂಡ್‌ಜಾಯ್ ಆಫ್ಘನ್ ರಾಯಭಾರಿ ಕಚೇರಿಯಲ್ಲಿ ರಾಯಭಾರಿಯಾಗಿ ಕೆಲಸ ಮಾಡಿದರು.ಹಿಂದಿನ ಅಶ್ರಫ್ ಘನಿ ಸರ್ಕಾರದಿಂದ ಮಮುಂಜಾಯ್ ಅವರನ್ನು ನೇಮಿಸಲಾಯಿತು.ಆಗಸ್ಟ್ 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅವರು ಇನ್ನೂ ಆಫ್ಘನ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅಫ್ಘಾನಿಸ್ತಾನದ ಜನರ ಕಲ್ಯಾಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೇಶದ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜತಾಂತ್ರಿಕ ಸಂಬಂಧಗಳ (1961) ವಿಯೆನ್ನಾ ಕನ್ವೆನ್ಷನ್‌ನ ಆರ್ಟಿಕಲ್ 45 ರ ಪ್ರಕಾರ, ರಾಯಭಾರ ಕಚೇರಿಯ ಆಸ್ತಿ ಮತ್ತು ಸೌಲಭ್ಯಗಳನ್ನು ಆತಿಥೇಯ ದೇಶದ ಪಾಲನಾ ಪ್ರಾಧಿಕಾರಕ್ಕೆ ವರ್ಗಾಯಿಸಲಾಗುತ್ತದೆ.ರಾಯಭಾರ ಕಚೇರಿಯ ಮುಚ್ಚುವಿಕೆಯ ಹೊರತಾಗಿಯೂ ಅಫ್ಘಾನ್ ನಾಗರಿಕರಿಗೆ ತುರ್ತು ಕಾನ್ಸುಲರ್ ಸೇವೆಗಳು ಲಭ್ಯವಿರುತ್ತವೆ ಎಂದು ದೇಶವು ವಿವರಿಸಿದೆ.
ಭಾರತದಲ್ಲಿನ ಕಾರ್ಯಾಚರಣೆಯನ್ನು ದುರದೃಷ್ಟಕರವಾಗಿ ನಿಲ್ಲಿಸುವುದಕ್ಕೆ ಇವು ಮುಖ್ಯ ಕಾರಣ ಎಂದು ಹೇಳಿದೆ. ಭಾರತ ಸರ್ಕಾರವು ಅಗತ್ಯ ನೆರವು ಒದಗಿಸುವಲ್ಲಿ ವಿಫಲವಾಗಿದೆ. ಇದು ಎಂಬೆಸಿಯು ತನ್ನ ಕರ್ತವ್ಯಗಳನ್ನು ಪರಿಣಾಮಕಾರಿ ನಡೆಸಲು ತೊಡಕು ಉಂಟುಮಾಡಿದೆ ಎಂದು ಆರೋಪಿಸಿದೆ.
“ಭಾರತದಲ್ಲಿನ ರಾಜತಾಂತ್ರಿಕ ಬೆಂಬಲದ ಕೊರತೆ ಮತ್ತು ಕಾಬೂಲ್‌ನಲ್ಲಿ ಕಾನೂನಾತ್ಮಕ ಸರ್ಕಾರದ ಕಾರ್ಯ ನಿರ್ವಹಣೆ ಗೈರಿನಿಂದಾಗಿ ಅಫ್ಘಾನಿಸ್ತಾನ ಹಾಗೂ ಅದರ ನಾಗರಿಕರ ಹಿತಾಸಕ್ತಿಗೆ ಅನುಗುಣವಾಗಿ ಅಗತ್ಯವಾದ ಕೆಲಸಗಳು ಹಾಗೂ ನಿರೀಕ್ಷೆಗಳನ್ನು ನಡೆಸುವುದು ನಮಗೆ ಸಾಧ್ಯವಾಗುತ್ತಿಲ್ಲ ಎಂಬ ವೈಫಲ್ಯವನ್ನು ಒಪ್ಪಿಕೊಳ್ಳುತ್ತೇವೆ” ಎಂದು ಎಂಬೆಸಿ ಹೇಳಿಕೆ ನೀಡಿದೆ.
Papaya Seeds benefits: ಪರಂಗಿ ಬೀಜಗಳ ಪ್ರಯೋಜನಗಳನ್ನು ತಿಳಿದ್ರೆ ನೀವು ಖಂಡಿತ ಎಸೆಯುವುದಿಲ್ಲ!


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − ten =
Remember me
