ಅಫ್ಘಾನಿಸ್ತಾನ:ತಾಲಿಬಾನ್ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. ಈ ಹಿಂದೆ ಮುಖ ಕಾಣದಂತೆ ಹಿಜಾಬ್ ಧರಿಸದ ಮಹಿಳಾ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಆದೇಶ ಹೊರಡಿಸಿತ್ತು. ಇದೀಗ ಮಹಿಳೆಯರ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡುವಾಗ ಬಳಸುವ ಗೊಂಬೆಗಳ ಮುಖ ಬಹಿರಂಗವಾಗಬಾರದು. ಹೀಗಾಗಿ ಗೊಂಬೆಗಳ ಮುಖವನ್ನು ಮರೆಮಾಚಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ. ಇದರಿಂದಾಗಿ ಅಫ್ಘಾನಿಸ್ತಾನದಲ್ಲಿರುವ ಬಟ್ಟೆ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿರುವ ಗೊಂಬೆಗಳ ಮುಖ ಮರೆಮಾಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಸದ್ಯ ಪ್ಲಾಸ್ಟಿಕ್ ಚೀಲಗಳಿಂದ ಬಟ್ಟೆ ಅಂಗಡಿಯಲ್ಲಿ ಗೊಂಬೆಗಳ ಮುಖವನ್ನು ಮರೆಮಾಚಿರುವ ಫೋಟೋಗಳು ವೈರಲ್ ಆಗುತ್ತಿವೆ. ಇದನ್ನು ನೋಡಿದ ಅನೇಕರು ತಾಲಿಬಾನ್​ನ ನೂತನ ನಿಯಮದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ತಾಲಿಬಾನ್​ನ ಈ ನಡೆ ಸರಿಯಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ನಡೆ ತಾಲಿಬಾನ್ ಸರ್ಕಾರದ ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರಬಲ ಪುರುಷ ಯಾವತ್ತಿದ್ದರೂ ಮಹಿಳೆಯರನ್ನು ನಿಯಂತ್ರಿಸಲು ಮುಂದಾಗುವುದಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿವೆ.
The Taliban’s hatred of women extends beyond the living. It is now mandatory for store owners to cover the faces of mannequins.These dystopian images are a sign of how much worse life is going to become for Afghan women if the world doesn’t stand with them.pic.twitter.com/p2p0b0QGRR— Sara Wahedi (@SaraWahedi)January 18, 2023
The Taliban’s hatred of women extends beyond the living. It is now mandatory for store owners to cover the faces of mannequins.These dystopian images are a sign of how much worse life is going to become for Afghan women if the world doesn’t stand with them.pic.twitter.com/p2p0b0QGRR
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂಗಡಿಯಾತ ಹೇಳಿರುವ ಪ್ರಕಾರ, ಇದಕ್ಕೂ ಮೊದಲು ತಾಲಿಬಾನ್ ಸರ್ಕಾರ ಮನುಷ್ಯಾಕೃತಿಗಳನ್ನು ತೆಗೆದು ಹಾಕಬೇಕು. ಇಲ್ಲವಾದರೆ ಅವುಗಳನ್ನು ಸಂಪೂರ್ಣವಾಗಿ ಶಿರಚ್ಛೇದ ಮಾಡಬೇಕು ಎಂದು ಆದೇಶಿಸಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
