ಹೈದರಾಬಾದ್:50 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕದ್ದು, ಅದನ್ನು ಶೌಚಾಲಯದಲ್ಲಿ ಫ್ಲಶ್ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದೆ.ಜುಬಿಲಿಹಿಲ್ಸ್‌ನಲ್ಲಿರುವ ದಂತ ಚಿಕಿತ್ಸಾಲಯಕ್ಕೆ ನರೇಂದ್ರ ಕುಮಾರ್ ಅಗರ್ವಾಲ್ ಎಂಬುವರ ಸೊಸೆ ಜೂನ್ 27ರಂದು ತಪಾಸಣೆಗಾಗಿ ಭೇಟಿ ನೀಡಿದ್ದಳು. ಮಹಿಳೆಯು ತಪಾಸಣೆಯ ಸಮಯದಲ್ಲಿ ತನ್ನ ಬೆರಳಿನಿಂದ ವಜ್ರದ ಉಂಗುರವನ್ನು ಹೊರತೆಗೆದು ಪಕ್ಕದ ಮೇಜಿನ ಮೇಲೆ ಇಟ್ಟು, ಅದನ್ನು ಅಲ್ಲಿಯೇ ಮರೆತು ಬಂದಿದ್ದಾಳೆ.ಇದನ್ನೂ ಓದಿ:ತಲೆ ಮೇಲೆ ಸೆಂಟ್ರಿಂಗ್ ಪೀಸ್ ಬಿದ್ದು ವಿದ್ಯಾರ್ಥಿಗೆ ಗಂಭೀರ ಗಾಯ, ಕುಟುಂಬಸ್ಥರ ಆಕ್ರೋಶ; ಪ್ರಕರಣ ದಾಖಲುಮನೆಗೆ ಹಿಂದಿರುಗಿದ ನಂತರ, ಮಹಿಳೆ ತನ್ನ ಕೈಯಲ್ಲಿ ಉಂಗುರ ಕಾಣದೇ ಇದ್ದಾಗ ಆಕೆ ವಾಪಾಸ್ಸು ಆಸ್ಪತ್ರೆಗೆ ಹೋಗಿದ್ದಾಳೆ. ಆದರೆ ಅಲ್ಲಿ ಆಕೆಗೆ ಉಂಗುರ ದೊರೆಯದ ಕಾರಣ, ಕ್ಲಿನಿಕ್‌ನಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದ್ದಾಳೆ. ಕೊನೆಗೆ ಆಕೆಯ ಮಾವ ನರೇಂದ್ರ ಕುಮಾರ್ ಜುಬಿಲಿಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ಆಸ್ಪತ್ರೆಯ ಸಿಬ್ಬಂದಿಯನ್ನು ಈ ಕುರಿತಾಗಿ ಪ್ರಶ್ನಿಸಿ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕ್ಲಿನಿಕ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತನ್ನ ಪರ್ಸ್‌ನಲ್ಲಿ ಟಿಶ್ಯೂ ಪೇಪರ್‌ನಲ್ಲಿ ಸುತ್ತಿದ ಉಂಗುರವನ್ನು ಯಾರೋ ಇಟ್ಟಿದ್ದರು. ತಾನು ಅದನ್ನು ಟಾಯ್ಲೆಟ್​​ ಕಮೋಡ್‌ನಲ್ಲಿ ಫ್ಲಶ್ ಮಾಡಿದ್ದಾಗಿ ತಿಳಿಸಿದ್ದಾಳೆ.ಇದನ್ನೂ ಓದಿ:ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಿ : ಕಲಾವಿದೆ, ಗಾಯಕಿ ಡಾ.ಶ್ವೇತಾಮಡಪ್ಪಾಡಿ ಸಲಹೆಕೊನೆಗೆ ಪೊಲೀಸರು, ಪ್ಲಂಬರ್‌ನ ಸಹಾಯದಿಂದ ಕಮೋಡ್‌ಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್‌ನಿಂದ ಉಂಗುರವನ್ನು ವಶಕ್ಕೆ ಪಡೆದು ಹಾಗೂ ಮಹಿಳೆಯನ್ನು ತೀವ್ರ ವಿಚಾರನಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ ಸತ್ಯಾಂಶ ಬಾಯ್ಬಿಟ್ಟಿದ್ದು, ತಾನೇ ಆ ಉಂಗುರವನ್ನು ಕದ್ದಿದ್ದಾಗಿ ಹಾಗೂ ನಂತರ ಭಯದಿಂದ ಶೌಚಾಲಯಕ್ಕೆ ಎಸೆದು ಫ್ಲಶ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆರೋಪಿ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
