ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಭಾರತೀಯ ಅರಣ್ಯಾಧಿಕಾರಿ ಸುಶಾಂತ್​ ನಂದಾ ಅವರು ಆಗಾಗ ಜೀವ ಸಂಕುಲದ ಅದ್ಭುತ ಫೋಟೋ ಅಥವಾ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ.
ಅದೇ ರೀತಿಯಾಗಿ ಇಂದು ಕೂಡ ತಮ್ಮ ಟ್ವಿಟರ್​ ಬತ್ತಳಿಕೆಗೆ ಮತ್ತೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದು, ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?:ಕೇವಲ 11 ಸೆಕೆಂಡಿನ ವಿಡಿಯೋದಲ್ಲಿ ನೆಲದ ಮೇಲೆ ಹರಿದಾಡುವ ಬಿಳಿ ಬಣ್ಣದ ಕೀಟವನ್ನು ಮಣ್ಣಿನಡಿಯಿಂದಲೇ ಅಪರೂಪದ ಎಂಟು ಕಾಲಿನ ಆಫ್ರಿಕನ್ ರೆಡ್​ ಟ್ರ್ಯಾಪ್​ಡೋರ್​ ಜೇಡ ಹೊಂಚು ಹಾಕಿ ಬೇಟೆಯಾಡುವ ಅದ್ಭುತ ದೃಶ್ಯವಿದೆ.
ಅಂದಹಾಗೇ ಈ ವಿಡಿಯೋವನ್ನು ಮೊದಲ ಲ್ಯಾಟ್​ ಬೈಬಲ್​(LADbible) ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಈ ವಿಡಿಯೋವನ್ನು ಅಮೆರಿಕದಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಅಮೆರಿಕದ ನ್ಯಾಶ್​ವಿಲ್ಲೆ ನಿವಾಸಿ ಆ್ಯಂಡ್ರಿಯಾ ವ್ಯಾನ್​ ವೆಗ್ಗೆಲ್​ ಎಂಬುವರು ಚಿತ್ರೀಕರಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.
ಅಂದಹಾಗೆ ಆಫ್ರಿಕನ್ ರೆಡ್​ ಟ್ರ್ಯಾಪ್​ಡೋರ್​ ಭೂಮಿಯ ಒಳಗಡೆಯೇ ಬಲೆಯನ್ನು ನಿರ್ಮಿಸುತ್ತವೆ. ತನ್ನ ಜೀವಾತವಧಿಯಲ್ಲಿ ಹೆಚ್ಚು ಕಾಲ ಮಣ್ಣಿನಡಿಯಲ್ಲೇ ವಾಸಿಸುತ್ತವೆ. ಕೀಟ ಮತ್ತು ಹಾವು, ಇಲಿ ಹಾಗೂ ಪಕ್ಷಿಗಳ ಮರಿಗಳನ್ನು ತಿಂದು ಬದುಕುತ್ತವೆ.(ಏಜೆನ್ಸೀಸ್​)
No body is exempted from the surprises of life😔Let it a pleasant one for u today 🙏🏼🙏🏼pic.twitter.com/AAXtjaLCix
— Susanta Nanda (@susantananda3)March 7, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
