ಗುವಾಹಟಿ:ಅಸ್ಸಾಂನಲ್ಲಿ ದಿನದಿಂದ ದಿನಕ್ಕೆ ಅಫ್ರಿಕನ್​ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಲಖಿಂಪುರ್​ ಜಿಲ್ಲೆಯಲ್ಲಿ ರೋಗ ಪತ್ತೆಯಾಗಿದೆ. ಹಂದಿಜ್ವರ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾಡಳಿತ ಪ್ರದೇಶದ ಸುತ್ತ ಫಾರ್ಮ್​ಗಳಲ್ಲಿ ಸಾಕಿರುವ ಹಂದಿಗಳನ್ನು ಹತ್ಯೆ ಮಾಡಿದೆ.
ಪಶು ವೈದ್ಯರ ಸಹಾಯದೊಂದಿಗೆ ಸೋಂಕು ಕಾಣಿಸಿಕೊಂಡಿರುವ ಪ್ರದೇಶದ ಸುತ್ತ ಮುತ್ತ ಸಾಕಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಹಂದಿಗಳನ್ನು ಕರೆಂಟ್​ ಶಾಕ್​ ನೀಡಿ ಕೊಲ್ಲಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
African swine fever grips Assam's Lakhimpur, 1,000 pigs culledRead@ANIStory |https://t.co/lgovMsQwv5#AfricanSwineFever#Assam#swinefeverpic.twitter.com/JLAuvhGiy2
ಇದನ್ನೂ ಓದಿ:VIDEO| ಯಾವ ಧರ್ಮ ಸಮಾನ ಹಕ್ಕುಗಳನ್ನು ನೀಡುವುದಿಲ್ಲ ಅದು ರೋಗಕ್ಕೆ ಸಮ: ಸಚಿವ ಪ್ರಿಯಾಂಕ ಖರ್ಗೆ
ಈ ಕುರಿತು ಪ್ರತಿಕ್ರಿಯಿಸಿರುವ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸಚಿವ ಅತುಲ್ ಬೋರಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಏವಿಯನ್ ಇನ್ಫ್​​ಫ್ಲೂಯೆಂಜಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಿಟ್ಟಿನಲ್ಲಿ ಹೊರರಾಜ್ಯಗಳಿಂದ ಕೋಳಿ ಹಾಗೂ ಹಂದಿಗಳ ಅಮದಿಗೆ ನಿಷೇಧ ಹೇರಲಾಗಿದೆ.
ಸೋಂಕು ಕಾಣಿಸಿಕೊಂಡ ಪ್ರದೇಶದ ಸುತ್ತ ಮುತ್ತ ಸಾಕಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಹಂದಿಗಳನ್ನು ಪಶು ವೈದ್ಯರು ಕರೆಂಟ್​ ಶಾಕ್​ ನೀಡಿ ಸಾಯಿಸಿದ್ದಾರೆ. ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಸೋಂಕು ಹರಡದಂತೆ ಮುಂಜಾಗ್ರಾತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 4 =
Remember me
