ಕಣ್ಣೂರು:ಕೇರಳದಲ್ಲಿ ದಿನದಿಂದ ದಿನಕ್ಕೆ ಅಫ್ರಿಕನ್​ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಕಣ್ಣೂರು ಜಿಲ್ಲೆಯ ಕಣಿಚಾರ ಎಂಬ ಗ್ರಾಮದಲ್ಲಿ ರೋಗ ಪತ್ತೆಯಾಗಿದೆ. ಹಂದಿಜ್ವರ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾ ಆಡಳಿತ ಪ್ರದೇಶದ ಸುತ್ತ ಫಾರ್ಮ್​ಗಳಲ್ಲಿ ಸಾಕಿರುವ ಹಂದಿಗಳನ್ನು ಕೊಂದು ಹೂಳುವಂತೆ ಸೂಚನೆ ನೀಡಲಾಗಿದೆ.
ಕಣ್ಣೂರು ಜಿಲ್ಲೆಯಲ್ಲಿರುವ ಮಲೆಯಂಪಾಡಿಯಲ್ಲಿರುವ ಫಾರ್ಮ್​ ಒಂದರಲ್ಲಿ ಸಾಕಿರುವ ಹಂದಿಯಲ್ಲಿ ಜ್ವರ ಕಾಣಿಸಿಕೊಂಡಿರುವುದನ್ನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು. ಇದಾದ ಬಳಿಕ ಮಲೆಯಂಪಾಡಿ ಗ್ರಾಮದ ಸುತ್ತ 10 ಕಿಲೋಮೀಟರ್​ ವ್ಯಾಪ್ತಿಯಲ್ಲಿರುವ ಫಾರ್ಮ್​ಗಳಲ್ಲಿ ಸಾಕಲಾಗಿರುವ ಹಂದಿಗಳನ್ನು ಕೊಂದು ಶಿಷ್ಟಾಚಾರದ ಪ್ರಕಾರ ಮಣ್ಣು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಗಂಡನಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ಕೊಟ್ಟ ಪತ್ನಿ; ನಾಯಿ-ಬೆಕ್ಕು ಮೃತ್ಯು, ಪತಿ ಚಿಂತಾಜನಕ
ಮಲೆಯಂಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹಂದಿ ಮಾಂಸ ಮಾರಾಟ ಹಾಗೂ ಸಾಗಣೆಯನ್ನು ಮುಂದಿನ ಮೂರು ತಿಂಗಳವರೆಗೆ ನಿಷೇಧಿಸಲಾಗಿದೆ. ಹಂದಿ ಜ್ವರ ಪತ್ತೆಯಾದ ಸಾಕಾಣಿಕೆ ಕೇಂದ್ರದ ಒಂದು ಕಿಲೋಮೀಟರ್​ ಪ್ರದೇಶವನ್ನು ಸೋಂಕು ಪತ್ತೆ, 10 ಕಿಲೋಮೀಟರ್​ ವ್ಯಾಪ್ತಿಯನ್ನು ರೋಗ ಕಣ್ಗಾವಲು ಪ್ರದೇಶವೆಂದು ಘೋಷಿಸಲಾಗುತ್ತದೆ.
ಮಲೆಯಂಪಾಡಿ ಹಾಗೂ ಕಣಿಚಾರ್​ ಪ್ರದೇಶಗಳಲ್ಲಿರುವ ಸಾಕಾಣಿಕೆ ಕೇಂದ್ರಗಳಿಂದ ಹಂದಿಗಳನ್ನು ಮಾರಾಟ ಮಾಡಲಾಗಿತ್ತೆ ಎಂಬುದರ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯಲಾಗುತ್ತಿದೆ. ತುರ್ತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
