ನವದೆಹಲಿ:ಮುಂಬೈನಿಂದ ಸ್ಥಳಾಂತರಗೊಂಡ ನಂತರ ಶ್ರದ್ಧಾ ವಾಕರ್​ರನ್ನು ಆಕೆಯ ಗೆಳೆಯ ಆಫ್ತಾಬ್ ಪೂನಾವಾಲಾ ಮೇ ತಿಂಗಳಲ್ಲಿ ಕೊಲೆ ಮಾಡಿದ್ದ. ಅದಾದ ಮೇಲೆ ಆಕೆಯ ಶವವನ್ನು 35 ತುಂಡು ಮಾಡಿ ಫ್ರಿಡ್ಜ್​ನಲ್ಲಿ ಇರಿಸಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯ ಕಾವು ಇನ್ನೂ ಆರಿಲ್ಲ.
ಅಫ್ತಾಬ್​ನ ವಿಚಾರಣೆ ಇನ್ನೂ ನಡೆಯುತ್ತಿದ್ದು ಈಗ ಪ್ರಕರಣ ಕೋರ್ಟ್​ನ ಮೆಟ್ಟಿಲೇರಿದೆ. ಕೋರ್ಟ್​ಲ್ಲಿ ಈತ ನಡೆದದ್ದೆಲ್ಲವನ್ನೂ ಆ ಕ್ಷಣ ಹಾಗೆ ಮಾಡಿಸಿತು. ಬೇಕೂ ಎಂದು ಕೊಲೆ ಮಾಡಿಲ್ಲ’ ಎಂದಿದ್ದಾನೆ! ಈ ಮಾಹಿತಿಯನ್ನು ಅಫ್ತಾಬ್​ನ ವಕೀಲ ಅಭಿನಾಶ್​ ಕುಮಾರ್​ ನೀಡಿದ್ದು ‘ಘಟನೆಯ ನಂತರ ಅಫ್ತಾಬ್​ ಪೊಲೀಸರೊಂದಿಗೆ ಸಹಕರಿಸುತ್ತಿದ್ದಾನೆ’ ಎಂದು ಹೇಳಿದ್ದಾರೆ.
ಸೋಮವಾರ ಅಧಿಕಾರಿಗಳು ನ್ಯಾಯಾಲಯಕ್ಕೆ ‘ಅಫ್ತಾಬ್​ನ ಹಿಂದಿನ ಹೇಳಿಕೆಗಳ ನಡುವೆ ಅನೇಕ ವ್ಯತ್ಯಾಸಗಳಿವೆ. ಈತ ತನಿಖಾಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾನೆ. ಹೀಗಾಗಿ ಆತನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
ನಾರ್ಕೋ ವಿಶ್ಲೇಷಣೆ – ಅಥವಾ ಟ್ರೂಥ್ ಸೀರಮ್ – ಸೋಡಿಯಂ ಪೆಂಟೋಥಾಲ್‌ನಂತಹ ಔಷಧ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಯಾವುದೇ ಪರೀಕ್ಷೆಯ ಫಲಿತಾಂಶಗಳು ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲ. ಈ ಔಷಧಗಳು ಒಂದು ರೀತಿಯಲ್ಲಿ ಅಮಲುಕಾರಕ. ಆದ್ದರಿಂದ ಅಫ್ತಾಬ್​ನ ನಾರ್ಕೊ ಟೆಸ್ಟ್​ ಸಂದರ್ಭದ ಹೇಳಿಕೆಗಳನ್ನು ಸಾಕ್ಷಿ ಎಂದು ಪರಿಗಣಿಸಲಾಗುವುದಿಲ್ಲ.
ನ್ಯಾಯಾಲಯವು ಎರಡೂ ಪಕ್ಷದವರ ವಾದ ಆಲಿಸಿದ ನಂತರ ಅಫ್ತಾಬ್ನ​ಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿತು. ಜೊತೆಗೆ ಅಧಿಕಾರಿಗಳು ಸಲ್ಲಿಸಿದ್ದ ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಪರೀಕ್ಷೆಯ ಮನವಿಯನ್ನು ಸ್ವೀಕರಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
