ಮುಂಬೈ:ದೇಶದ ವಾಣಿಜ್ಯ ಜಗತ್ತಿನ 124 ವರ್ಷ ಹಳೆಯ ಗೋದ್ರೆಜ್​ ಸಾಮ್ರಾಜ್ಯ ಈಗ ವಿಭಜನೆಯ ಹಾದಿಯಲ್ಲಿದೆ. ಸೌಹಾರ್ದಯುತವಾಗಿ ಪಾಲುಪಂಚಾಯಿತಿ ಮೂಲಕ ಕಂಪನಿಗಳ ಹಂಚುವಿಕೆಗೆ ಕೆಲವು ವರ್ಷಗಳ ಹಿಂದೆಯೇ ಗೋದ್ರೆಜ್​ ಕುಟುಂಬ ಸದಸ್ಯರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಗೋದ್ರೆಜ್​ ಕಂಪನಿ ಎರಡಾಗಿ ವಿಭಜನೆಯಾಗುವ ಸಾಧ್ಯತೆ ಇದೆ. ಆದಿ ಗೋದ್ರೆಜ್​, ನಾದಿರ್​ ಗೋದ್ರೆಜ್​ ಮತ್ತು ಕುಟುಂಬ (ಗೋದ್ರೆಜ್​ ಇಂಡಸ್ಟ್ರೀಸ್​ ಆ್ಯಂಡ್​ ಅಸೋಸಿಯೇಟ್ಸ್​) ಒಂದಾದರೆ, ಜಮ್ಶಿಡ್​ ಗೋದ್ರೆಜ್​ ಮತ್ತು ಕುಟುಂಬ (ಗೋದ್ರೆಜ್​ ಆ್ಯಂಡ್​ ಬಾಯ್ಸ್​ (ಜಿಆ್ಯಂಡ್​ಬಿ) ಇನ್ನೊಂದು. ಗೋದ್ರೆಜ್​ ಸಾಮ್ರಾಜ್ಯದ ಒಟ್ಟು ಮೌಲ್ಯ ಸದ್ಯ 29966 ಕೋಟಿ ರೂಪಾಯಿ ಎಂದು ಷೇರುಪೇಟೆ ದತ್ತಾಂಶ ಹೇಳುತ್ತಿದೆ.
ಗೋದ್ರೆಜ್​ ಗ್ರೂಪ್​ನಲ್ಲಿ ಪ್ರಮೊಟರ್​ ಹೋಲ್ಡಿಂಗ್​ನಲ್ಲಿ ಶೇಕಡ 23 ಟ್ರಸ್ಟ್​ ವಶದಲ್ಲಿದೆ. ಅದು ಲಾಭಾಂಶವನ್ನು ಪರಿಸರ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ. ಗೋದ್ರೆಜ್​ ಇಂಡಸ್ಟ್ರೀಸ್​, ಜಿಆ್ಯಂಡ್​ಬಿ ಹೊರತಾಗಿ, ಗೋದ್ರೆಜ್​ ಕನ್ಸೂಮರ್​ ಪ್ರಾಡಕ್ಟ್​ ್ಸ ಲಿಮಿಟೆಡ್​, ಗೋದ್ರೆಜ್​ ಅಗ್ರೋವೆಟ್​, ಗೋದ್ರೆಜ್​ ಪ್ರಾಪರ್ಟೀಸ್​ಗಳಿವೆ. ಆದಿ ಮತ್ತು ನಾದಿರ್​ ಗೋದ್ರೆಜ್​ ಕನ್ಸೂಮರ್​ ಪ್ರಾಡಕ್ಟ್​ ್ಸ, ಗೋದ್ರೆಜ್​ ಅಗ್ರೋವೆಟ್​, ಗೋದ್ರೆಜ್​ ಪ್ರಾಪರ್ಟೀಸ್​, ಗೋದ್ರೆಜ್​ ಇಂಡಸ್ಟ್ರೀಸ್​ ಅನ್ನು ನಿರ್ವಹಿಸುತ್ತಿದ್ದಾರೆ. ಜಮ್ಶಿಡ್​ ಅವರು ಗೋದ್ರೆಜ್​ ಆ್ಯಂಡ್​ ಬಾಯ್ಸ್​ನ್ನು ನಿರ್ವಹಿಸುತ್ತಿದ್ದಾರೆ. ಗೋದ್ರೆಜ್​ ಚೇರ್ಮನ್​ ಸ್ಥಾನದಿಂದ ನಿರ್ಗಮಿಸುತ್ತಿರುವುದಾಗಿ ಆದಿ ಗೋದ್ರೆಜ್​ (76) ಆಗಸ್ಟ್​ ತಿಂಗಳಲ್ಲಿ ಘೋಷಿಸಿದ್ದರು. ಅವರ ಮಕ್ಕಳು ಒಬ್ಬೊಬ್ಬರು ಒಂದೊಂದು ಕಂಪನಿಯ ಉಸ್ತುವಾರಿ ಗಮನಿಸಲಾರಂಭಿಸಿದ್ದು, ಚೇರ್ಮನ್​ ಸ್ಥಾನದ ಹೊಣೆಗಾರಿಕೆಯನ್ನು ನಾದಿರ್​ಗೆ ಆದಿ ಹಸ್ತಾಂತರಿಸಿದ್ದಾರೆ. ಜಿಮ್ಶಿಡ್​ ಅವರ ಸಹೋದರಿ ಸ್ಮಿತಾ ವ್ಯಾಪಾರದಲ್ಲಿ ಸಕ್ರಿಯರಾಗಿಲ್ಲದೇ ಹೋದರೂ ಅವರ ಪತಿ ವಿಜಯ್​ ಕೃಷ್ಣಾ ಗೋದ್ರೆಜ್​ ಇಂಡಸ್ಟ್ರೀಸ್​, ಗೋದ್ರೆಜ್​ ಅಗ್ರೋವೆಟ್​ಗಳಲ್ಲಿ ನಿರ್ದೇಶಕರು ಮತ್ತು ಗೋದ್ರೆಜ್​ ಆ್ಯಂಡ್​ ಬಾಯ್ಸ್​ನಲ್ಲಿ ನಾನ್​&ಎಕ್ಸಿಕ್ಯೂಟವ್​ ಡೈರೆಕ್ಟರ್​ ಆಗಿದ್ದಾರೆ. ಸೌಹಾರ್ದಯುತವಾಗಿ ಪಾಲುಪಂಚಾಯಿತಿ ಮುಗಿಸಲು ಕುಟುಂಬ ಮುಂದಾಗಿದ್ದು, ಅದು ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಗೋದ್ರೆಜ್​ ಸಾಮ್ರಾಜ್ಯದ ಚಿತ್ರಣರಿಶದ್​, ಆದಿ, ನಾದಿರ್​, ಜಮ್ಶಿಡ್​ ಮತ್ತು ಸ್ಮಿತಾ ಕೃಷ್ಣಾ ಈ ಐದು ಕುಟುಂಬ ಶಾಖೆಗಳ ನಡುವೆ ಗೋದ್ರೆಜ್​ ಸಾಮ್ರಾಜ್ಯ ಹಂಚಿಕೊಂಡಿದೆ. ಜಿಆ್ಯಂಡ್​ಬಿನಲ್ಲಿ ಪ್ರತಿ ಕುಟುಂಬಕ್ಕೆ ಶೇಕಡ 15.3 ಪಾಲಿದೆ. ಅದೇ ರೀತಿ ಪಿರೋಜ್​ ಶಾ ಗೋದ್ರೆಜ್​ ೌಂಡೇಷನ್​ಗೆ ಶೇಕಡ 23 ಪಾಲಿದೆ.’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
