ಉತ್ತರ ಪ್ರದೇಶ:ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಲ್ಲರನ್ನೂ ಆವರಿಸಿಕೊಂಡಿದ್ದು, ಒಂದಲ್ಲ ಒಂದು ವಿಷಯಗಳು ನೆಟ್ಟಿಗರ ಗಮನಸೆಳೆಯುತ್ತಲೇ ಇರುತ್ತದೆ. ಕೆಲವು ಆಘಾತ ಉಂಟುಮಾಡಿದರೆ, ಇನ್ನೂ ಕೆಲವು ಅಚ್ಚರಿ ಮೂಡಿಸುತ್ತದೆ. ಸಾವಿರಾರು ವಿಡಿಯೋಗಳ ಪೈಕಿ ಇಲ್ಲೊಂದು ದೃಶ್ಯ ನೋಡುಗರನ್ನು ಒಂದು ನಿಮಿಷ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಹೌದು, ಒಂದು ಸಣ್ಣ ರೀಲ್ಸ್​ 18 ವರ್ಷದಿಂದ ಪರಸ್ಪರ ಮುಖನೋಡದ, ಭೇಟಿಯಾಗದ ಅಣ್ಣ-ತಂಗಿಯನ್ನು ಸೇರಿಸಿದೆ ಎಂದರೆ ನಂಬ್ತೀರಾ? ನಂಬಲೇಬೇಕು ಯಾಕಂದ್ರೆ ಇದು ಸತ್ಯ.
ಇದನ್ನೂ ಓದಿ:ನಾರಾಯಣ ಗುರು ಮಂದಿರಕ್ಕೆ 15 ಸಾವಿರ ರೂ. ಪ್ರೋತ್ಸಾಹ ಧನ- ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು
ಉತ್ತರ ಪ್ರದೇಶದ ಕಾನ್ಪುರದ ಯುವತಿಯೊಬ್ಬಳು ಕಳೆದ 18 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಹೋದ ತನ್ನ ಅಣ್ಣ, ಮತ್ತೆ ಮನೆಗೆ ವಾಪಾಸ್ ಬಾರದೆ ಇದ್ದದ್ದನ್ನು ಕಂಡು ಬಹಳ ದುಃಖಿತಳಾಗಿದ್ದಳು. ಆತನ ಸ್ನೇಹಿತರೆಲ್ಲರೂ ಊರಿಗೆ ಆಗಾಗ್ಗೆ ಬಂದು ತಮ್ಮ ತಮ್ಮ ಮನೆಯವರನ್ನು ಭೇಟಿಯಾಗಿ, ಕೆಲಸಕ್ಕೆ ಹಿಂತಿರುಗಿದರೆ, ಈತ ಮಾತ್ರ ತನ್ನ ಕುಟುಂಬಸ್ಥರನ್ನು ಕಾಣಲು ಒಂದೇ ಒಂದು ದಿನ ಕೂಡ ಬರಲಿಲ್ಲ. ಆದರೆ, ಕಳೆದ ಕೆಲವು ದಿನಗಳ ಹಿಂದೆ ಆತ ಮಾಡಿದ ಒಂದು ರೀಲ್​ ನೋಡಿದ ತಂಗಿ, ಇವನು ನನ್ನ ಅಣ್ಣನೇ ಎಂಬುದನ್ನು ಒಂದೇ ಒಂದು ಗುರುತಿನಿಂದ ಪತ್ತೆಹಚ್ಚಿದ್ದಾಳೆ.
ಇನ್‌ಸ್ಟಾಗ್ರಾಮ್ ರೀಲ್ ನೋಡುತ್ತಿದ್ದ ಯುವತಿ, ತನ್ನ ಅಣ್ಣನ ಮುಖ ಹೋಲುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಿ ಆಶ್ಚರ್ಯಕ್ಕೆ ಒಳಗಾಗಿದ್ದಾಳೆ. ಆದರೆ, ಇವನು ನನ್ನ ಅಣ್ಣನೇ ಎಂಬುದು ಆಕೆಗೆ ಮೊದಲಿಗೆ ಸ್ಪಷ್ಟವಾಗಿಲ್ಲ. ಬಳಿಕ ವೀಡಿಯೊದಲ್ಲಿ ಸಹೋದರನ ಮುರಿದ ಹಲ್ಲು ಗುರುತಿಸಿದ ಸಹೋದರಿ, ಈತ ನನ್ನ ಅಣ್ಣ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಖುಷಿಯಿಂದ ಕುಣಿದಾಡಿ, ಅವನನ್ನು ಸಂದೇಶದ ಮೂಲಕ ತಲುಪಿದ್ದಾಳೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣಕ್ಕೂ ‘ಹನಿಟ್ರ್ಯಾಪ್’ ನಂಟು : ಸಿ.ಟಿ.ರವಿ ಆರೋಪ
ಯುವತಿಯನ್ನು ಹಾಥಿಪುರ ಗ್ರಾಮದ ರಾಜಕುಮಾರಿ ಎನ್ನಲಾಗಿದ್ದು, ಮೊಬೈಲ್​ನಲ್ಲಿ ಇನ್​​ಸ್ಟಾಗ್ರಾಮ್ ರೀಲ್ಸ್ ನೋಡುವಾಗ ಸಹೋದರನನ್ನು ಪತ್ತೆಹಚ್ಚಿದ್ದಾಳೆ. ಆಕೆಯ ಅಣ್ಣ ಬಾಲ್ ಗೋವಿಂದನನ್ನು ಕಡೆಗೂ ಮನೆಗೆ ಕರೆಸಿಕೊಂಡ ಕುಟುಂಬಸ್ಥರು, ಮನೆ ಮಗನಿಗೆ ಆರತಿ ಮಾಡಿ, ಸಿಹಿ ತಿನ್ನಿಸಿ, ಸಂತಸದಿಂದ ಕಂಬನಿ ಮಿಡಿದಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).
ಇವರಿಗೋಸ್ಕರ ಆದ್ರೂ ನೀವು ಟಿ20 ವಿಶ್ವಕಪ್​ ಗೆಲ್ಲಬೇಕು! ರೋಹಿತ್ ಪಡೆಗೆ ನವಜೋತ್ ಸಿಂಗ್​ ಸಿಧು ಮನವಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + six =
Remember me
