ಮುಂಬೈ:ದೇಶದ ವಾಣಿಜ್ಯ ನಗರಿ ಕೋಟ್ಯಂತರ ಜನರಿಗೆ ಜೀವನಾಧಾರ. ಮೂಲೆಮೂಲೆಗಳಿಂದ ಇಲ್ಲಿಗೆ ಬಂದು ಕನಸು ಕಟ್ಟಿಕೊಂಡು ಬದುಕು ಸಾಗಿಸುತ್ತಾರೆ. ಆ ಕನಸುಗಳು ನನಸಾದಾಗ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಅಂತೆಯೇ ಉತ್ತರಪ್ರದೇಶದ ಜೌನ್​ಪುರ ಜಿಲ್ಲೆ ಮೊಕಾಲ್​ಪುರದ ರಾಜನ್​ ಯಾದವ್​ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. 13 ವರ್ಷಗಳಿಂದ ಬಾಡಿಗೆ ಆಟೋ ಓಡಿಸುತ್ತಿದ್ದ ಆತ ಆರು ತಿಂಗಳ ಹಿಂದಷ್ಟೇ ಹೊಸ ಆಟೋಗೆ ಮಾಲೀಕನಾಗಿದ್ದ. ಹೊಸ ಜೀವನ ಆರಂಭಿಸಿದ್ದ. ಆದರೆ, ಲಾಕ್​ಡೌನ್​ ಪರಿಣಾಮವಾಗಿ ಕಳೆದೆರಡು ತಿಂಗಳಿನಿಂದ ಆಟೋ ಚಲಾಯಿಸುವುದೇ ದುಸ್ತರವಾಗಿತ್ತು. ಇದ್ದ ಹಣವೆಲ್ಲ ಖರ್ಚಾದ ಬಳಿಕ, ಇನ್ನಿಲ್ಲಿ ಉಳಿದರೆ ಉಳಿಗಾಲವಿಲ್ಲವೆಂದು ಆಟೋದಲ್ಲಿ ಹುಟ್ಟೂರಿಗೆ ತೆರಳಲು ಸಜ್ಜಾದ. ಇದಕ್ಕಾಗಿ ನೆರೆಯವರು ಹಾಗೂ ಸ್ನೇಹಿತರ ಬಳಿ 3,000 ರೂ. ಸಾಲ ಪಡೆದಿದ್ದ.
ಮುಂಬೈನಿಂದ ಮೊಕಾಲ್​​ಪುರ ಅಂದಾಜು 1,500 ಕಿ.ಮೀಗೂ ಹೆಚ್ಚು ದೂರವಿದೆ. ಪತ್ನಿ, ಮಕ್ಕಳು ಹಾಗೂ ಸಂಬಂಧಿಕರ ಮತ್ತಿಬ್ಬರು ಮಕ್ಕಳು ಆಟೋಗೆ ಜತೆಯಾದರು. ಬೈಕ್​ನಲ್ಲಿ ಮತ್ತಿಬ್ಬರು ಸಂಬಂಧಿಕರು ಹಿಂಬಾಲಿಸುತ್ತಿದ್ರು.
ಬರೋಬ್ಬರಿ ಮೂರು ದಿನಗಳ ಪ್ರಯಾಣದ ಬಳಿಕ ಫತೇಫುರ್​ ಜಿಲ್ಲೆಯ ಖಾಘಾ ತಲುಪಿತ್ತು. ಊರು ಕೇವಲ 200 ಕಿ.ಮೀ ದೂರವಿತ್ತು. ಅಷ್ಟರಲ್ಲಿ ಬೈಕ್​ನಲ್ಲಿ ಹಿಂಬಾಲಿಸುತ್ತಿದ್ದವರು ವೇಗ ಪಡೆದುಕೊಂಡು ಮುಂದಕ್ಕೆ ತೆರಳಿದ್ದಾರೆ.
ಇದಾದ ಕೊಂಚ ಸಮಯದ ಬಳಿಕ ಟ್ರಕ್​ಗೆ ಆಟೋ ಡಿಕ್ಕಿಯಾಗಿದೆ. ಪತ್ನಿ ಸಂಜು ಆಕೆಯ ಮಡಿಲಲ್ಲಿ ಮಲಗಿದ್ದ ಮಗಳು ಆರು ವರ್ಷದ ನಂದಿನಿ ಟ್ರಕ್​ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಜನ್​ ಹಾಗೂ ಮಗ ನಿಖಿಲ್​, ಸಂಬಂಧಿಯ ಪುತ್ರ ಆಕಾಶ್​ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಷ್ಟು ದೂರ ಪ್ರಯಾಣಿಸಿ ಮನೆಗೆ ನಾನು ಕೊಂಡೊಯ್ಯುತ್ತಿರುವುದಾದರೂ ಏನನ್ನು ನೋಡಿ ಎಂದು ಆಂಬುಲೆನ್ಸ್​ನಲ್ಲಿದ್ದ ಮೃತದೇಹದೆದುರು ರಾಜನ್​ ಅಳುತ್ತಿದ್ದರೆ ಅಲ್ಲಿದ್ದವ ಕಣ್ಣಾಲಿಗಳು ತೇವವಾಗಿದ್ದವು.
ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 17 =
Remember me
