ಜೈಪುರ:ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ಕಳುವು ಮಾಡಿದರ ಕುರಿತು ಪೊಲೀಸ್​ ಠಾಣೆಗೆ ನಿರಂತರವಾಗಿ ಭೇಟಿ ನೀಡಿ ರೈತನೊಬ್ಬ ತನ್ನ ಆಕಳನ್ನು ವಾಪಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯೂ ರಾಜಸ್ಥಾನದ ಬಿಕಾನೇರ್​ನಲ್ಲಿ ನಡೆದಿದ್ದು ಕಳ್ಳತನವಾಗಿದ್ದ ಹಸುವನ್ನು ವಾಪಸ್​ ಪಡೆಯಲು ರೈತ ಇನ್ನಿಲ್ಲದ ಕಸರತ್ತು ಮಾಡಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ.
ತನ್ನ ಆಕಳು ಕಳುವಾಗಿದ್ದಕ್ಕೆ ಮೊದಲು ದುಲಾರಾಮ್​​(70) ಫೆಬ್ರವರಿ 11,2021ರರಂದು ದೂರು ನೀಡಿದಾಗ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿ FIR ದಾಖಲಿಸಿಕೊಂಡಿದ್ದಾರೆ. ದಿನ ಕಳೆದಂತೆ ರೈತನಿಗೆ ತನ್ನ ಹಸು ವಾಪಸ್​ ಸಿಗುತ್ತದೆ ಎನ್ನುವ ಯಾವುದೇ ಲಕ್ಷಣಗಳು ಗೋಚರಿಸಲಿಲ್ಲ.
ಈ ಕುರಿತು ಪೊಲೀಸ್​ ಠಾಣೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ರೈತನಿಗೆ ಪೊಲೀಸರು ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದ ತೀವ್ರವಾಗಿ ಕುಪಿತಗೊಂಡ ರೈತ ನಂತರದ ದಿನಗಳಲ್ಲಿ ವಿಭಿನ್ನವಾಗಿ ಹೋರಾಡುವ ಮೂಲಕ ಯಶಸ್ವಿಯಾಗಿದ್ದಾನೆ.
ಒಮ್ಮೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಬಿಕಾನೇರ್ಗೆ ಭೇಟಿ ನೀಡುತ್ತಿದ್ದಾರೆ ಎಂಬ ವಿಷಯ ತಿಳಿದ ರೈತ ಸಿಎಂ ಬರುವ ರಸ್ತೆಯಲ್ಲಿ ಇರುವ ಮೊಬೈಲ್​ ಟವರ್​ ಒಂದನ್ನು ಏರಿ ತನ್ನ ಬೇಡಿಕೆ ಈಡೇರುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.
ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸ್​ ಅಧಿಕಾರಿಗಳು ರೈತನ ಮನವೊಲಿಸಿ ಕಳುವಾಗಿರುವ ಆಕುಳನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆ ನಂತರ ಒಂದು ದಿನ ಕಳುವಾದ ಹಸುವಿನ ಜೊತೆ ಬಂದ ಪೊಲೀಸರು ಅದನ್ನು ಹಸ್ತಾಂತರಿಸಿ DNA ರಿಪೋರ್ಟ್​ ಸಹ ನೀಡಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಕಳೆದ ಎರಡು ವರ್ಷಗಳಿಂದ ಹೋರಾಡುತ್ತಿದ್ದೇನೆ. ನಿತಂತರ ಪ್ರತಿಭಟನೆಗಳ ಫಲವಾಗಿ ಇಂದು ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + five =
Remember me
