ನವದೆಹಲಿ: 20,000 ಅಗ್ನಿವೀರ್‌ಗಳ ಎರಡನೇ ಬ್ಯಾಚ್ ಅಕ್ಟೋಬರ್ ಮೊದಲ ವಾರದಲ್ಲಿ ತೇರ್ಗಡೆಯಾಗಲಿದೆ ಎಂದು ವರದಿಯಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾದ ಮೊದಲ ಬ್ಯಾಚ್ ಅನ್ನು ಭಾರತದಾದ್ಯಂತ ವಿವಿಧ ಘಟಕಗಳಲ್ಲಿ ನಿಯೋಜಿಸಲಾಗಿದೆ.
ಈಗಾಗಲೇ ಆಗಸ್ಟ್​​ ತಿಂಗಳಿನಲ್ಲಿ ಮೊದಲ ಬ್ಯಾಚ್​​ ತೇರ್ಗಡೆಗೊಂಡಿತ್ತು. ಮೊದಲ ಬ್ಯಾಚ್ ಅನ್ನು ಶ್ಲಾಘಿಸುತ್ತಾ, ರಕ್ಷಣಾ ಮತ್ತು ಭದ್ರತಾ ಸಂಸ್ಥೆಯವರು ಮೊದಲ ಬ್ಯಾಚ್​​​ನ ಕಾರ್ಯಕ್ರಮತೆಯನ್ನ ಹಾಡಿ ಹೊಗಳಿದ್ದಾರೆ.
2022 ರಲ್ಲಿ ಒಟ್ಟು 40,000 ಅಗ್ನಿವೀರ್‌ಗಳನ್ನು ಸೇನೆಗೆ ಸೇರ್ಪಡೆಯಾಗಿದ್ದು, ಎರಡು ಬ್ಯಾಚ್‌ಗಳಲ್ಲಿ ತರಬೇತಿಗಾಗಿ ವಿವಿಧ ರೆಜಿಮೆಂಟಲ್ ಕೇಂದ್ರಗಳಿಗೆ ಕಳುಹಿಸಲಾಯಿತು. ಕೊರೊನಾ ಸಂದರ್ಭದಲ್ಲಿ ಸುಮಾರು 3 ವರ್ಷಗಳ ಕಾಲ ಸಶಸ್ತ್ರ ಪಡೆಗಳ ನೇಮಕಾತಿ ನಡೆದಿರಲಿಲ್ಲ.
ಕಳೆದ ವರ್ಷ ಜೂನ್‌ನಲ್ಲಿ ಅಗ್ನಿಪಥ್ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಅಭ್ಯರ್ಥಿಗಳನ್ನು ಅಗ್ನಿವೀರ್‌ಗಳಾಗಿ ನೇಮಿಸಿಕೊಳ್ಳಲು ಸೇನೆಯು ಚಾಲನೆ ನೀಡಿತ್ತು. ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಕಾರ್ಯಕ್ಷಮತೆ ಉತ್ತಮವಾಗಿದೆ.
ಈ ಯೋಜನೆಯು ಹೊಸದಾಗಿ ಅಗ್ನಿವೀರ್​​ಗಳಾಗಿ ನೇಮಕಾತಿಗಳನ್ನು ಪ್ರೇರೇಪಿಸಿದೆ ಮತ್ತು ತಾಂತ್ರಿಕ ಪರಿಣತಿಯ ಮಿತಿಯನ್ನು ಹೆಚ್ಚಿಸಿರೋದಾಗಿ ರಕ್ಷಣಾ ಮತ್ತು ಭದ್ರತಾ ಸಂಸ್ಥೆ ತಿಳಿಸಿದೆ.
ಅಗ್ನಿಪಥ್ ಯೋಜನೆಗೆ ಅರ್ಹರಾಗಲು ನಿಮ್ಮ ವಯಸ್ಸು 17 ವರ್ಷದಿಂದ 21 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + four =
Remember me
