ಬೆಂಗಳೂರು: ರೀಲ್ಸ್ ರಾಣಿ ಎಂದೇ ಹೆಸರುಪಡೆದಿರುವ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸದ್ದುಮಾಡುತ್ತಿರುತ್ತಾಳೆ. ಅದರಲ್ಲೂ ‘ಬಿಗ್ ಬಾಸ್‌’ ಒಟಿಟಿ ಕನ್ನಡ ಸೀಸನ್ 1ರಲ್ಲಿ ಭಾಗವಹಿಸಿದ ಮೇಲಂತೂ ಸೋನು ಜನಪ್ರಿಯತೆ ಮತ್ತಷ್ಟು ಹೆಚ್ಚಿತ್ತು. ಇತ್ತೀಚೆಗೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಜೈಲು ಸೇರಿದ್ದ ಈಕೆ ಜಾಮೀನು ​ ಪಡೆದು ಹೊರ ಬಂದಿದ್ದಾರೆ. ಈಗ ಸೋನು ಸೋಶಿಯಲ್ ಮೀಡಿಯಾದಲ್ಲಿ ಜೈಲಿನ ಅನುಭವ ಹಾಗೂ ದುಡಿಮೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಇಸ್ರೇಲ್, ಉಕ್ರೇನ್‌ಗೆ ಬೃಹತ್ ನೆರವು ಒದಗಿಸುವುದಕ್ಕೆ ಯುಎಸ್​ ಹೌಸ್​ ಒಪ್ಪಿಗೆ
ಜೈಲಿನಿಂದ ಬಂದ್ಮೇಲೆ ಸೋನು ಗೌಡ ಅಕೌಂಟ್‌ನಲ್ಲಿ ಎಷ್ಟಿದೆ? ಸೋಶಿಯಲ್ ಮೀಡಿಯಾದಿಂದ ಲಕ್ಷ ಲಕ್ಷ ದುಡಿಯುತ್ತಾರೆ ಅನ್ನೋ ಟೀಕೆಗಳಿಗೆ ಸೋನು ಗೌಡ ಓಪನ್ ಆಗಿ ವೀಡಿಯೋ ಮಾಡಿ ಹೇಳಿಕೊಂಡಿದ್ದಾಳೆ.
ಕಿರಿಕ್ ಕೀರ್ತಿ ಜೊತೆ ಸೋನು ಗೌಡ ರಿವೀಲ್‌ ಮಾಡಿರುವ ಬ್ಯಾಂಕ್ ಅಕೌಂಟ್ ಡಿಟೈಲ್ಸ್, ಜೈಲಿನ ಅನುಭವ ನೋಡುವುದಾದರೆ “ಎಲ್ಲರೂ ಆ ಎಕ್ಸ್‌ಪೀರಿಯನ್ಸ್ ಮಾಡಬೇಕು. ಆ ಅನುಭವ(ಜೈಲ್​) ಒಂದು ತರ ಚೆನ್ನಾಗಿದೆ. ಈಗ ನನಗೆ 24 ವರ್ಷ. ಈ ವಯಸ್ಸಿನಲ್ಲಿ ಕಲಿಯುವಂತಹದ್ದೂ ಸಾಕಷ್ಟಿದೆ. ಹೇಳಿಕೊಡುವಂತಹದ್ದೂ ಸಾಕಷ್ಟಿದೆ. ಜೈಲು ಅಂತ ಬಂದರೆ, ಆ ನಾಲ್ಕು ಗೋಡೆ ಮಧ್ಯೆನೇ ಎಲ್ಲವನ್ನೂ ಕಲಿಸಿಬಿಡುತ್ತೆ. ಯಾರೂ ಏನನ್ನೂ ಹೇಳಿಕೊಡುವುದು ಬೇಡ. ಹೇಗೆ ನಡೆದುಕೊಂಡಿದ್ದೇನೆ? ಹೇಗೆ ಮಾತಾಡಬೇಕಿತ್ತು? ಅದೆಲ್ಲ ಗೊತ್ತಾಗುತ್ತೆ.” ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ.
ಇನ್ನು ಸೋನು ಗೌಡ ರೀಲ್ಸ್‌ಗಿಂತ ಹೆಚ್ಚಾಗಿ ಟ್ರೋಲ್, ಟೀಕೆಗಳಿಗೆ ಗುರಿಯಾಗಿದ್ದೇ ಹೆಚ್ಚು. ಈಗ ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ” ನನ್ನನ್ನು ಟ್ರೋಲ್ ಮಾಡುವವರನ್ನು ಬೈದು ಕೊಳ್ಳುವುದಿಲ್ಲ. ನಾನು ನಗುತ್ತಲೇ ಇರುತ್ತೇನೆ. ಕಾಮೆಂಟ್‌ಗಳನ್ನು ಮಾಡುತ್ತೇನೆ. ನೋಡಿ ಎಂಜಾಯ್ ಮಾಡುತ್ತೇನೆ. ಕೆಲವು ಕೆಟ್ಟ ಪದಗಳು ಫ್ಯಾಮಿಲಿವರೆಗೂ ಬಂದರೆ ಬೇಜಾರಾಗುತ್ತೆ. ಆದರೆ, ನನ್ನ ಬಗ್ಗೆ ಏನೇ ಮಾತಾಡಿದರೂ, ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ.” ಎಂದು ಸೋನು ಗೌಡ ಹೇಳಿದ್ದಾಳೆ.
ಸೋಶಿಯಲ್ ಮೀಡಿಯಾಗೆ ಬಂದಾಗ ಸಿಕ್ಕಾಪಟ್ಟೆ ಟೀಕಿಸಿದ್ದರು. ಆಗ ಹೆದರಿ ಹಿಂದೆ ಸರಿದಿದ್ದರೆ ಸೋನು ಯಾರು ಅಂತಲೇ ಗೊತ್ತಾಗುತ್ತಿರಲಿಲ್ಲ ಎಂದಿದ್ದಾಳೆ.
“ಡಿಪ್ಲೋಮಾ ಫೈನಲ್ ಇಯರ್‌ವರೆಗೂ ನಾನು ದುಡ್ಡಿಗೆ ಕೈ ಚಾಚುತ್ತಿದ್ದೆ. ಆದರೆ ಡಿಪ್ಲೋಮಾ ಆದ ಕೂಡಲೇ ಸೋಶಿಯಲ್ ಮೀಡಿಯಾಗೆ ಕಾಲಿಟ್ಟಿದ್ದು, ಅಂದಿನಿಂದ ಇಲ್ಲಿತನಕ ನಾನು ನಮ್ಮ ಮನೆಯವರ ಬಳಿ ಕೈ ಚಾಚಿಲ್ಲ. ಈಗ ಟ್ರೋಲ್‌ಗಳನ್ನು ಸಹಿಕೊಂಡೇ ಒಂದಿಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ.
ಇನ್ನು ಜೈಲಿನಿಂದ ಬಂದ್ಮೇಲೆ ಸೋನು ಗೌಡ ಅಕೌಂಟ್‌ನಲ್ಲಿ ಎಷ್ಟಿದೆ? ಸೋಶಿಯಲ್ ಮೀಡಿಯಾದಿಂದ ಅವರು ಎಷ್ಟು ಸಂಪಾದನೆ ಮಾಡುತ್ತಾರೆ? ಅನ್ನೋದನ್ನು ಸ್ಪೀಡ್ ಪ್ಲಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. “ಈಗಲೂ ನನ್ನ ಅಕೌಂಟ್ ತೆರೆದು ನೋಡಿ, ಆಚೆಗೆ ಬಂದಾಗ ಇರಲಿ ಅಂತ 10 ಸಾವಿರ ರೂ.ಇಟ್ಟುಕೊಂಡಿದ್ದೇನೆ. ಬೇಕಾದ್ರೆ ಬ್ಯಾಂಕ್ ಬ್ಯಾಲೆನ್ಸ್ ತೋರಿಸುತ್ತೇನೆ. ನಿಜ ಹೇಳಬೇಕಂದ್ರೆ ನನ್ನ ಬಳಿ ದುಡ್ಡೇ ಇಲ್ಲ. ಅಲ್ಲ ಗುರೂ, ಲಕ್ಷ ಲಕ್ಷ ದುಡಿಯೋ ಹಾಗಿದ್ರೆ, ಇನ್ನೂ ಚೆನ್ನಾಗಿ ಇರುತ್ತಿದ್ದೆನಲ್ಲಾ? ಅಬ್ಬಬ್ಬಾ ಎಂದ್ರೆ ಏನೋ ಒಂದು ತಿಂಗಳಲ್ಲಿ ಒಂದು ಐವತ್ತು ಸಾವಿರ ದುಡಿಯಬಹುದು, ಏನು 50 ಲಕ್ಷ ರೂ. ದುಡಿಯೋ ತರ ಮಾತಾಡುತ್ತಾರೆ.” ಎಂದು ಹೇಳಿಕೊಂಡಿದ್ದಾರೆ.
ನವೀಕರಿಸಿದ ಅಮೆರಿಕಾ ಬಂಗಲೆಗೆ ಪ್ರಿಯಾಂಕಾ ಚೋಪ್ರಾ ದಂಪತಿ.. ಇದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + seven =
Remember me
