ನವದೆಹಲಿ:ಕರೊನಾದ ಚೇತರಿಸಿಕೊಂಡರೂ ಗುಣಮುಖರಾದವರು ಬೇರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕೋವಿಡ್ ಬೆನ್ನಿಗೆ ಬೇರೆ ಬೇರೆ ರೋಗಗಳಿಂದ ಬಳಲಾರಂಭಿಸಿದ್ದಾರೆ. ಇದಕ್ಕೆ ಕೋವಿಡ್​ ಚಿಕಿತ್ಸೆ ವೇಳೆ ಬಳಸುವ ಔಷಧದ ಅಡ್ಡಪರಿಣಾಮವೇ ಕಾರಣ ಎಂಬುದನ್ನು ಅರಿತುಕೊಂಡಿರುವ ವೈದ್ಯರು, ಇದೀಗ ಅದರ ಬಳಕೆಯನ್ನು ಆದಷ್ಟೂ ತಪ್ಪಿಸುವಂತೆ ಸಲಹೆ ನೀಡಿದ್ದಾರೆ.
ಕರೊನಾದಿಂದ ಗುಣಮುಖರಾದವರು, ಚೇತರಿಸಿಕೊಂಡ ಕೆಲವೇ ದಿನಗಳಲ್ಲಿ ಬ್ಲ್ಯಾಕ್​ ಫಂಗಸ್, ಬೋನ್​ ಡೆತ್​ ಸೇರಿದಂತೆ ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲ ಕೋವಿಡ್ ಟ್ರೀಟ್​ಮೆಂಟ್ ವೇಳೆ ನೀಡಲಾಗುತ್ತಿರುವ ಸ್ಟೆರಾಯ್ಡ್ಸ್​​ ಕಾರಣ ಎಂಬುದು ತಿಳಿದುಬಂದಿದ್ದಾಗಿ ವೈದ್ಯರು ಹೇಳಿದ್ದಾರೆ.
ಕೋವಿಡ್​ನಿಂದ ಗುಣಮುಖರಾದ ಬಹಳಷ್ಟು ಮಂದಿ ಚೇತರಿಸಿಕೊಂಡ ಕೆಲವು ತಿಂಗಳುಗಳಿಂದ ಒಂದು ವರ್ಷದೊಳಗೆ ಕೀಲುನೋವು, ಸೊಂಟ-ಭುಜ ಮುಂತಾದ ನೋವುಗಳಿಗೆ ಒಳಗಾಗುತ್ತಿದ್ದಾರೆ. ಮೂಳೆಗೆ ಆಗುತ್ತಿರುವ ಹಾನಿಯ ಪರಿಣಾಮದಿಂದ ಹೀಗಾಗುತ್ತಿದೆ. ಇದಕ್ಕೆ ಕೋವಿಡ್​ ವೇಳೆ ನೀಡಲಾಗುವ ಸ್ಟೆರಾಯ್ಡ್ಸ್​ ಕಾರಣ. ಸ್ಟೆರಾಯ್ಡ್ಸ್​ ಒಂದು ರೀತಿಯಲ್ಲಿ ಎರಡು ಅಲಗಿನ ಕತ್ತಿಯಂತೆ. ಅತಿಯಾದ ಸ್ಟೆರಾಯ್ಡ್ಸ್​ ಬಳಕೆ ಮ್ಯಾರೋ ಒಡಿಮಾ ಎಂಬ ಕಾಯಿಲೆಗೆ ಕಾರಣವಾಗುತ್ತದೆ. ಇದು ಮೂಳೆಗೆ ರಕ್ತ ಸರಬರಾಜು ಆಗುವುದನ್ನೇ ಕಡಿತಗೊಳಿಸುತ್ತದೆ ಎಂದು ಎನ್​ಎಚ್​ಎಸ್​ ಆಸ್ಪತ್ರೆಯ ಡಾ. ಶುಭಾಂಗ್ ಅಗರ್​ವಾಲ್​ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಾಧಾರಣ ಸೋಂಕಿನ ಸಂದರ್ಭದಲ್ಲಿ ಸ್ಟೆರಾಯ್ಡ್ಸ್​ ಬಳಕೆ ಆದಷ್ಟೂ ತಪ್ಪಿಸಬೇಕು ಎಂಬುದಾಗಿ ಇವರೂ ಸೇರಿದಂತೆ ಹಲವು ವೈದ್ಯರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)
ಟ್ವಿಟರ್​ನಲ್ಲಿ ಮುಟ್ಟಿದ್ರೇನೆ ‘ಲವ್’: ಇನ್ಮುಂದೆ ಹಾಗಾಗದಂತೆ ನಡೆಯುತ್ತಿದೆ ಹೊಸ ಪ್ರಯೋಗ!

ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
