ಮುಂಬೈ:ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್‌ ಜತೆಗಿನ ದಾಂಪತ್ಯ ಸಂಬಂಧಕ್ಕೆ ಅಧಿಕೃತವಾಗಿ ವಿಚ್ಛೇದನ ಘೋಷಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದು, ಈ ವಿಚಾರ ಇತ್ತೀಚೆಗಷ್ಟೇ ಮಲಿಕ್​ ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ವಿವಾಹವಾದ ಫೋಟೋಸ್ ವೈರಲ್ ಆದ ಬೆನ್ನಲ್ಲೇ ಮುನ್ನೆಲೆಗೆ ಬಂದಿತು.
ಇದನ್ನೂ ಓದಿ:ಒಂಬತ್ತು ವರ್ಷ, 9 ಪೇಟಗಳು; ಗಣರಾಜ್ಯೋತ್ಸವದಂದು ಮೋದಿ ಯಾವ ವರ್ಷದಲ್ಲಿ ಯಾವ ಪೇಟ ತೊಟ್ಟಿದ್ದರು ಗೊತ್ತಾ?
ಕಳೆದ ಹಲವು ತಿಂಗಳುಗಳಿಂದ ಸಾನಿಯಾ ಮತ್ತು ಮಲಿಕ್ ದಾಂಪತ್ಯ ಕುರಿತು ಅನೇಕ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ವದಂತಿಗಳ ಬೆನ್ನಲ್ಲೇ ಸನಾ ಜತೆ ಮಲಿಕ್ ಮದುವೆಯಾದ ಸಂಗತಿ ಹೊರಬಿದ್ದಿದ್ದು, ಸಾನಿಯಾ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಸನಾ ಜಾವೇದ್​ಗೆ ಇದು ಎರಡನೇ ವಿವಾಹವಾದರೆ, ಮಲಿಕ್​ಗೆ ಇದು ಮೂರನೇ ಮದುವೆ ಎಂಬುದು ಮತ್ತೊಂದು ಶಾಕಿಂಗ್​ ವಿಚಾರ.
ಈ ಸುದ್ದಿ ಬಹಿರಂಗವಾದ ನಂತರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಒಳ್ಳೆಯ ನಿರ್ಧಾರ ತೆಗದುಕೊಂಡಿದ್ದೀರಿ, ಧೃತಿಗೆಡಬೇಡಿ ಎಂದು ಸಾನಿಯಾಗೆ ಧೈರ್ಯ ತುಂಬಿದ್ದಾರೆ. ವಿಚ್ಛೇದನದ ಬಳಿಕ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮೊದಲ ಫೋಟೋ ಹಂಚಿಕೊಂಡ ಸಾನಿಯಾ, ಕನ್ನಡಿ ಮುಂದೆ ನಿಂತು ತಮ್ಮ ಮುಖವನ್ನು ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯಾರೇ ಮೈತ್ರಿ ಅಭ್ಯರ್ಥಿಯಾದರೂ ಗೆಲುವು: ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ
A post shared by Sania Mirza (@mirzasaniar)

ಕಪ್ಪು​ ಮತ್ತು ಬೂದಿ ಬಣ್ಣದ ಉಡುಗೆಯಲ್ಲಿ ಕನ್ನಡಿ ಮುಂದೆ ನಿಂತ ಸಾನಿಯಾ, ಫೋಟೋಗೆ ‘ಪ್ರತಿಬಿಂಬ’ ಎಂಬ ಪದವನ್ನು ಶೀರ್ಷಿಕೆಯಾಗಿ ನೀಡಿದ್ದಾರೆ. ಮಿರ್ಜಾ ಫೋಟೋಗೆ ಧೈರ್ಯ ತುಂಬುವಂತ ಕಮೆಂಟ್​ಗಳನ್ನು ಮಾಡುತ್ತಿರುವ ನೆಟ್ಟಿಗರು, ನಿಮ್ಮ ನಿರ್ಧಾರಕ್ಕೆ ಒಂದು ಮೆಚ್ಚುಗೆ ಎಂದು ತಿಳಿಸುತ್ತಿದ್ದಾರೆ,(ಏಜೆನ್ಸೀಸ್).
ಸದ್ದಿಲ್ಲದೇ ಒಟಿಟಿಗೆ ಲಗ್ಗೆಯಿಟ್ಟ ರಕ್ಷಿತ್​ ಸಿನಿಮಾ! ಈ ಪ್ಲಾಟ್​ಫಾರ್ಮ್​ನಲ್ಲಿ ನೋಡಿ ಮನು-ಪ್ರಿಯಾ ಪ್ರೇಮಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + three =
Remember me
