ಗಾಂಧಿನಗರ (ಗುಜರಾತ್‌):ಮೂರು ಕೊಲೆ, ಬ್ಯಾಂಕ್ ದರೋಡೆ ಸೇರಿದಂತೆ ಸುಮಾರು 40 ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ನಟೋರಿಯಸ್‌ ಕ್ರಿಮಿನಲ್‌ ಇದೀಗ ಬರೋಬ್ಬರಿ 38 ವರ್ಷಗಳ ನಂತರ ಸೆರೆ ಸಿಕ್ಕಿದ್ದಾನೆ!
ಗುಜರಾತ್‌ ಗಾಂಧಿನಗರದ ಶಕ್ತಿದಾನ್ ಸಿಂಗ್ ಈತನಾಗಿದ್ದು, ಇವನ ವಯಸ್ಸು ಈಗ 65 ವರ್ಷ, ರಾಜಸ್ಥಾನದ ಬಾರ್ಮರ್ನ ಗದ್ರಾ ರಸ್ತೆ ಠಾಣೆಯ ಪೊಲೀಸರ ಕೈಗೆ ಇದೀಗ ಈತ ಸಿಕ್ಕಿಬಿದ್ದಿದ್ದಾನೆ. 38 ವರ್ಷಗಳ ಹಿಂದೆ ಅಂದರೆ 1982ರಲ್ಲಿ ಈತ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ್ದ. ಇದೇ ವೇಳೆ ಮೂವರನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ. ಎಷ್ಟೇ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಇದೀಗ ಸೆರೆ ಸಿಕ್ಕಿದ್ದಾನೆ.
ಇದನ್ನೂ ಓದಿ:ಯಾಮಾರಿಬಿಟ್ಟೆನಪ್ಪಾ… ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ: ಜಗ್ಗೇಶ್‌ ನೋವಿನ ನುಡಿ
ವಿಚಿತ್ರ ಎಂದರೆ ಈತ ಯುವಕನಾಗಿದ್ದಾಗಲೇ ತನ್ನ ಗ್ರಾಮದಲ್ಲಿ ಗುರುತಿಸಿಕೊಂಡವ. ಹಲವಾರು ಅಪರಾಧ ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬರುತ್ತಿದ್ದರೂ ಗ್ರಾಮದ ಪಂಚಾಯ್ತಿಯ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದ. ಅಲ್ಲಿಂದ ತಮ್ಮ ಅಪರಾಧ ಲೋಕವನ್ನು ವಿಸ್ತರಿಸಿಕೊಳ್ಳುತ್ತಲೇ ಬಂದಿದ್ದ ಸಿಂಗ್‌ ವಿರುದ್ಧ ಈಗಾಗಲೇ 40 ಪ್ರಕರಣಗಳಿವೆ.
1982ರಲ್ಲಿ ಗುಜರಾತ್‍ನ ಬನಸ್ಕಾಂತ ಪ್ರದೇಶದಲ್ಲಿ ಬ್ಯಾಂಕ್ ಡಕಾಯತಿ ಮಾಡಲು ಯತ್ನಿಸಿದ್ದ. ಈ ವೇಳೆ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರನ್ನು ಕೊಲೆ ಮಾಡಿದ್ದ. ನಂತರ ಪೊಲೀಸರು ಈತನನ್ನು ಮೋಸ್ಟ್ ವಾಂಟೆಡ್ ಲಿಸ್ಟ್‌ಗೆ ಸೇರಿಸಿದ್ದರೂ ಬಂಧಿಸಲು ಸಾಧ್ಯವಾಗಿರಲಿಲ್ಲ.
ಈಗ ಗುಜರಾತ್‍ನ ಎಸ್‍ಒಜಿ ಬೀಜ್ವಾಲ್‍ಗೆ ತೆರಳಿ ಬಂಧಿಸಲಾಗಿದೆ. ನಿವೃತ್ತ ಎಸ್.ಪಿ.ಆನಂದ್ ಶರ್ಮಾ ಈ ಕುರಿತು ಮಾಹಿತಿ ನೀಡಿ, ಈತ ನಟೋರಿಯಸ್ ಕ್ರಿಮಿನಲ್ ಆಗಿದ್ದ. ಅಲ್ಲದೆ ಹಲವು ಅಪರಾಧ ಪ್ರಕರಣಳಲ್ಲಿ ಬೇಕಾಗಿದ್ದ ಎಂದಿದ್ದಾರೆ.
ಈತ ತನ್ನ ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಶರಣಾಗಿದ್ದ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಹಾಗೂ ವಿವಿಧ ಕ್ರಿಮಿನಲ್‌ ಪ್ರಕರಣಗಳಲ್ಲಿ ಈತ ಸಾಕ್ಷ್ಯ ನುಡಿದಿದ್ದ ಕಾರಣ, ಈತನ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕೋರ್ಟ್‌ ಅನುಮತಿ ಮೇರೆಗೆ ಸರ್ಕಾರ ಹಿಂದಕ್ಕೆ ಪಡೆದಿತ್ತು. ಇದಾದ ಮೇಲೂ 1982ರಲ್ಲಿ ಮಾಡಿದ್ದ ಬ್ಯಾಂಕ್ ಡಕಾಯಿತಿ ಹಾಗೂ ಕೊಲೆ ಮಾಡಿ ಪರಾರಿಯಾಗಿದ್ದ.(ಏಜೆನ್ಸೀಸ್‌)
ಭೂಮಿಯೊಳಗಿಂದ ಮನುಷ್ಯರ ಚೀರಾಟ? ಬೆಚ್ಚಿಬಿದ್ದಿದ್ದಾರೆ ಚೀನಿಯರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − 4 =
Remember me
