ನವದೆಹಲಿ:ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ಸೋಮವಾರ ನಡೆದ ಘಟನೆಯಿಂದ ಉಲ್ಬಣಿಸಿರುವ ಉದ್ವಿಗ್ನತೆ ತಗ್ಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಭಾರತ ಮತ್ತು ಚೀನಾ ಬದ್ಧತೆ ವ್ಯಕ್ತಪಡಿಸಿವೆ. ಗಡಿಯಲ್ಲಿ ಶಾಂತಿಕಾಯ್ದುಕೊಳ್ಳುವುದೇ ಈಗಿನ ತುರ್ತು ಆದ್ಯತೆ ಎಂದು ಹೇಳಿವೆ.
ವಿದೇಶಾಂಗ ಸಚಿವ ಜೈಶಂಕರ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಬುಧವಾರ ದೂರವಾಣಿ ಮೂಲಕ ಮಾತನಾಡಿ, ಗಾಲ್ವಾನ್ ಕಣಿವೆಯಲ್ಲಿನ ಘಟನೆಯು ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಬೇಕಿದ್ದರೆ ಗಡಿಯಲ್ಲಿ ಶಾಂತಿ ಕಾಪಾಡಲು ಚೀನಾ ಈ ಕೂಡಲೇ ಮುಂದಾಗಬೇಕು ಎಂದರು. ಇದಕ್ಕೆ ವಾಂಗ್ ಯಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಡಿಯನ್ನು ಪ್ರಕ್ಷುಬ್ಧಗೊಳಿಸುವ ಯಾವುದೇ ಕ್ರಮವನ್ನು ಉಭಯ ಸೇನೆಗಳು ಕೈಗೊಳ್ಳುವಂತಿಲ್ಲ. ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಗಡಿಯಲ್ಲಿ ಜಮಾವಣೆಯಾಗಿರುವ ಸೇನೆಯನ್ನು ಜೂನ್ 6ರ ಮಾತುಕತೆಯಲ್ಲಿ ಒಪ್ಪಿರುವಂತೆ ಹಿಂದಕ್ಕೆ ಕರೆಯಿಸಿಕೊಳ್ಳಬೇಕು. ಗಡಿಯಲ್ಲಿ ಶಾಂತಿ ಕಾಪಾಡುವ ದ್ವಿಪಕ್ಷೀಯ ಒಪ್ಪಂದ ಮತ್ತು ಎಲ್​ಎಸಿಯಲ್ಲಿ ಪಾಲಿಸಿಕೊಂಡು ಬಂದಿರುವ ಶಿಷ್ಟಾಚಾರವು ಪ್ರಸ್ತುತ ಸನ್ನಿವೇಶದ ಶಾಂತಿ ಮಂತ್ರವಾಬೇಕು ಎಂಬುದಕ್ಕೆ ಉಭಯ ಸಚಿವರು ಸಮ್ಮತಿಸಿದ್ದಾರೆ.
ಕಳೆದ ತಿಂಗಳು ಉತ್ತರ ಸಿಕ್ಕಿಂ ನಾಕು ಲಾ ಪಾಸ್ ಗಡಿ ಮತ್ತು ಪೂರ್ವ ಲಡಾಖ್​ನ ಪ್ಯಾಂಗೊಂಗ್ ತ್ಸೊ ಸರೋವರ ಗಡಿ ಷರ್ಘಣೆಯಿಂದ ಉಭಯ ದೇಶಗಳ ಮಧ್ಯೆ ಉಂಟಾಗಿರುವ ಬಿಗುವಿನ ವಾತಾರಣದ ನಂತರ ಇದೇ ಮೊದಲ ಬಾರಿಗೆ ಜೈಶಂಕರ್ ಚೀನಾದ ತಮ್ಮ ಸಹವರ್ತಿ ಮಂತ್ರಿಯೊಂದಿಗೆ ಮಾತನಾಡಿದರು.
ಗಡಿ ಶಿಷ್ಟಾಚಾರದಲ್ಲಿ ಬದಲಾವಣೆ:ಭಾರತ ಗಡಿಯಲ್ಲಿನ ನಿರ್ವಹಣಾ ಶಿಷ್ಟಾಚಾರ ಮತ್ತು ನಿಯಮದಲ್ಲಿ ಮಾರ್ಪಾಟು ಮಾಡಿದೆ. ಸಶಸ್ತ್ರಧಾರಿ ಸೈನಿಕರು ಗುಂಡು ಹಾರಿಸುವಂತಿಲ್ಲ. ಗಸ್ತಿನ ವೇಳೆ ಚೀನಾ ಸೈನಿಕರು ಎದುರಾದಾಗ ಪ್ರಚೋದನಾತ್ಮಕ ಕ್ರಿಯೆಗಳಿಗೆ ಅವಕಾಶ ಇಲ್ಲ. ಆದರೆ, ಎದುರಾಳಿಗಳು ದಾಳಿಗೆ ಮುಂದಾದರೆ ರಕ್ಷಣಾತ್ಮಕ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬಹುದು. ಸೇನೆಯ ಹಿರಿಯ ಅಧಿಕಾರಿಗಳ ಆದೇಶ ಬರುವವರೆಗೂ ಈ ಸೂಚನೆ ಜಾರಿಯಲ್ಲಿ ಇರುತ್ತದೆ ಎಂದು ಮುಂಚೂಣಿ ಗಡಿ ಚೌಕಿಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚೀನಾದ ಯೋಜಿತ ಪಿತೂರಿ?:ಲಡಾಖ್​ನ ಗಾಲ್ವಾನದಲ್ಲಿ ಸೋಮವಾರ ನಡೆದ ಘರ್ಷಣೆ ಚೀನಾದ ಯೋಜಿತ ಪಿತೂರಿ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಚೀನಾ ಮೊದಲು ಥರ್ಮಲ್ ಇಮೇಜಿಂಗ್ ಡ್ರೋನ್​ಗಳ ಮೂಲಕ ಸೋಮವಾರ ಸಂಜೆ ಗಡಿಯಲ್ಲಿದ್ದ ಭಾರತೀಯ ಯೋಧರ ಸಂಖ್ಯೆಯನ್ನು ಗಮನಿಸಿ, ನಂತರ ತನ್ನ ಸೈನ್ಯವನ್ನು ಹೆಚ್ಚಿಸಿ ಯೋಜಿತವಾಗಿ ದಾಳಿ ನಡೆಸಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಘರ್ಷಣೆ ನಡೆದಾಗ ಚೀನಾ ಸೈನಿಕರ ಸಂಖ್ಯೆ ಹೆಚ್ಚಾಗಿ, ನಮ್ಮ ಪಡೆಗಳಿಗಿಂತ ಅವರ ಕಡೆ ಸುಮಾರು ಐದು ಪಟ್ಟು ಹೆಚ್ಚು ಯೋಧರಿದ್ದರು ಎಂದು ತಿಳಿದುಬಂದಿದೆ.
ಸೇನಾಧಿಕಾರಿಗಳ ಮಧ್ಯೆ ಚರ್ಚೆ ಮುಂದುವರಿಕೆ:ಗಡಿಯಲ್ಲಿನ ಪ್ರಕ್ಷುಬ್ಧ ವಾತಾವರಣ ತಿಳಿಯಾಗಿಲು ಉಭಯ ಸೇನೆಗಳ ಮೇಜರ್ ಜನರಲ್ ಹಂತದ ಮಾತುಕತೆ ಕೂಡ ಮುಂದುವರಿದಿದೆ. ಮಂಗಳವಾರ ನಡೆದ ಮಾತುಕತೆಯಲ್ಲೂ ಶಾಂತಿ ಕಾಪಾಡುವುದಕ್ಕೆ ಸೇನಾಧಿಕಾರಿಗಳು ಸಮ್ಮತಿಸಿದ್ದಾರೆ. ಜೂನ್ 15ರಂದು ನಡೆದ ಮಾತುಕತೆಯಲ್ಲೂ ಇದೇ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಅಂದು ರಾತ್ರಿಯೇ ಗಾಲ್ವಾನ್ ಕಣಿವೆಯ 14ನೇ ಗಸ್ತು ಪಾಯಿಂಟ್​ನಲ್ಲಿ ಭಾರಿ ಘರ್ಷಣೆ ನಡೆಯಿತು.
ಚೀನಾ ಬೆನ್ನಲ್ಲೇ ಪಾಕ್ ಕುತಂತ್ರ:ಭಾರತ-ಚೀನಾ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ವಣವಾಗಿರುವ ಬೆನ್ನಲ್ಲೇ ಕುತಂತ್ರಿ ಪಾಕಿಸ್ತಾನ ಕೂಡ ಕಾಶ್ಮೀರದಲ್ಲಿ ಕ್ಯಾತೆ ತೆಗೆಯುವ ಸಾಧ್ಯತೆ ಇದೆ. ಇತ್ತ ಚೀನಾ-ಭಾರತ ಬಿಕ್ಕಟ್ಟು ಉಲ್ಬಣಿಸಿರುವ ನಡುವೆ ಅತ್ತ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ, ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐನ ಮುಖ್ಯ ಕಚೇರಿಗೆ ಭೇಟಿ ನೀಡಿ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಎಲ್ಲ ಸೇನಾ ಮುಖ್ಯಸ್ಥರು ಇದ್ದರು ಎಂದು ತಿಳಿದುಬಂದಿದೆ. ಸೇನಾ ಮುಖ್ಯಸ್ಥ ಬಜ್ವಾ ಸಾಮಾನ್ಯವಾಗಿ ಐಎಸ್​ಐ ಮುಖ್ಯ ಕಚೇರಿಗೆ ಭೇಟಿ ನೀಡುವುದಿಲ್ಲ. ಹೀಗಾಗಿ ಈ ಭೇಟಿ ಮಹತ್ವ ಪಡೆದಿದೆ. ಬಜ್ವಾ ಹಾಗೂ ಸೇನೆಯ ಎಲ್ಲ ಮುಖ್ಯಸ್ಥರು ಐಎಸ್​ಐ ಕಚೇರಿಗೆ ತೆರಳಿ ಸಭೆ ನಡೆಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ಅಭಿಪ್ರಾಯಪಟ್ಟಿದೆ. ಈ ಹಿಂದೆ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ಬಾಲಾಕೋಟ್ ವೈಮಾನಿಕ ದಾಳಿ ಘಟನೆಯ ನಂತರವೂ ಸಹ ಸೇನಾ ಮುಖ್ಯಸ್ಥರು ಐಎಸ್​ಐ ಕಚೇರಿಗೆ ಭೇಟಿ ನೀಡಿರಲಿಲ್ಲ. ರೇಡಿಯೊ ಪಾಕಿಸ್ತಾನದ ವರದಿಯ ಪ್ರಕಾರ, ಐಎಸ್​ಐ ಕೇಂದ್ರ ಕಚೇರಿಯಲ್ಲಿ ಪ್ರಮುಖ ಸಭೆ ನಡೆದಿದ್ದು, ಈ ವೇಳೆ ಬಜ್ವಾ ಜತೆ ಸೇನಾ ಜಂಟಿ ಮುಖ್ಯಸ್ಥರಾದ ನದೀಮ್ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಜಾಫರ್ ಮಹಮೂದ್ ಅಬ್ಬಾಸಿ ಮತ್ತು ವಾಯುಪಡೆಯ ಮುಖ್ಯಸ್ಥ ಮುಜಾಹಿದ್ ಅನ್ವರ್ ಖಾನ್ ಉಪಸ್ಥಿತರಿದ್ದರು. ಸಭೆಯಲ್ಲಿ ಕಾಶ್ಮೀರದ ವಿಷಯ ಕುರಿತು ರ್ಚಚಿಸಲಾಗಿದೆ.
ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
