ನವದೆಹಲಿ:ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) PUC ಮೊದಲ ವರ್ಷದ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಉಲ್ಲೇಖಗಳನ್ನು ತೆಗೆದು ಹಾಕಿದೆ.
ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಸ್ವಾತಂತ್ರ್ಯದ ನಂತರ ಅವರು ಏನು ಮಾಡಿದರು ಎಂಬ ಉಲ್ಲೇಖಗಳನ್ನು ತೆಗೆದುಹಾಕಿದೆ. ‘ಸಂವಿಧಾನ – ಏಕೆ ಮತ್ತು ಹೇಗೆ’ ಎಂಬ ಶೀರ್ಷಿಕೆಯ ಪಠ್ಯಪುಸ್ತಕದ ಮೊದಲ ಅಧ್ಯಾಯದಲ್ಲಿ ಸಂವಿಧಾನ ರಚನಾ ಸಮಿತಿ ಸಭೆಗಳ ನಂತರ ಮೌಲಾನಾ ಆಜಾದ್ ಅವರ ಹೆಸರನ್ನು ಕೈಬಿಡಲಾಗಿದೆ.
ಇದನ್ನೂ ಓದಿ:ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!ಜಮ್ಮು ಮತ್ತು ಕಾಶ್ಮೀರವು ಸ್ವಾಯತ್ತವಾಗಿ ಉಳಿಯುತ್ತದೆ ಎಂಬ ಷರತ್ತಿನ ಮೇಲೆ ಭಾರತಕ್ಕೆ ವಿಲೀನವಾಗಿತ್ತು ಎಂಬ ಪ್ಯಾರಾಗ್ರಾಫ್‌ನ್ನು ಸಹ ಅಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಷರತ್ತುಬದ್ಧ ಸೇರ್ಪಡೆಯ ಉಲ್ಲೇಖಗಳನ್ನು ಪಠ್ಯಪುಸ್ತಕದಿಂದ ಅಳಿಸಲಾಗಿದೆ. ಪುಸ್ತಕದ ಹತ್ತನೇ ಅಧ್ಯಾಯದಲ್ಲಿ, ಸಂವಿಧಾನದ ತತ್ವಶಾಸ್ತ್ರ ಎಂಬ ಶೀರ್ಷಿಕೆಯಲ್ಲಿ, ಒಂದು ವಾಕ್ಯವನ್ನು ಅಳಿಸಲಾಗಿದೆ.
ಇದನ್ನೂ ಓದಿ:ಕೋಳಿಗಳಿಂದ H3N8 ವೈರಸ್ ಪತ್ತೆ; ಸೋಂಕಿನ ಲಕ್ಷಣಗಳೇನು..?ಈಗ ಅಳಿಸಲಾದ ಸಾಲು, ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವುದು ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಅದರ ಸ್ವಾಯತ್ತತೆಯನ್ನು ಕಾಪಾಡುವ ಬದ್ಧತೆಯನ್ನು ಆಧರಿಸಿದೆ.
ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರವು ಆಗಸ್ಟ್ 2019 ರಲ್ಲಿ ರದ್ದುಗೊಳಿಸಿತು, ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತ ಸ್ಥಾನಮಾನವನ್ನು ಕೊನೆಗೊಳಿಸಿತು. ನಂತರ, ಅಕ್ಟೋಬರ್ 2019 ರಲ್ಲಿ, ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.ಕಳೆದ ವಾರವೂ ಇದೇ ರೀತಿ ಗಾಂಧಿ ಹತ್ಯೆಯ ವಿಷಯದಲ್ಲಿ ಮಾಡಿತ್ತು. ”ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರನ್ನು ಹತ್ಯೆ ಮಾಡಲು ಹಿಂದೂ ಉಗ್ರಗಾಮಿಗಳು ನಡೆಸಿದ ಪ್ರಯತ್ನಗಳು ಮತ್ತು ಅವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾದ ನಿಷೇಧ”ದ ಪ್ಯಾರಾಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
25 ವರ್ಷಗಳ ಹಳೆಯ ಶೂ 18 ಕೋಟಿ ರೂ.ಗೆ ಹರಾಜು; ವಿಶೇಷತೆ ಏನು? ತಿಳಿದರೆ ನೀವೂ ಅಭಿಮಾನಿಯಾಗುತ್ತೀರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
