ಚೆನ್ನೈ:ಐಪಿಎಲ್ 17ನೇ ಸೀಸನ್​​ನಲ್ಲಿ ಆರ್​​ಸಿಬಿ ತಂಡದ ಎದರು ಚೆನ್ನೈ ಸೂಪರ್ ಕಿಂಗ್ಸ್ ಸೋಲುವ ಮೂಲಕವಾಗಿ ಕಥೆ ಅಂತ್ಯಗೊಂಡಿದೆ. ಈ ಹಿಂದೆ ಐದು ಬಾರಿಯ ಚಾಂಪಿಯನ್ ಆಗಿದ್ದ ಸಿಎಸ್‌ಕೆ ಈ ವರ್ಷ ಪ್ಲೇಆಫ್‌ಗೆ ಪ್ರವೇಶಿಸದೆ ನಿರ್ಗಮಿಸಿತು. ಈ ಅನುಕ್ರಮದಲ್ಲಿ ಸುಮಾರು ಎರಡು ತಿಂಗಳ ಕಾಲ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದ ಟೀಂ ಇಂಡಿಯಾದ ದಿಗ್ಗಜ ಆಟಗಾರ, ಸಿಎಸ್ ಕೆ ಸ್ಟಾರ್ ಆಟಗಾರ ಎಂಎಸ್ ಧೋನಿ ತವರು ರಾಂಚಿ ತಲುಪಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಧೋನಿ ಮತ್ತು ಜಡೇಜಾ ಕಾದಾಡಿದರೂ ಚೆನ್ನೈ 27 ರನ್‌ಗಳಿಂದ ಸೋಲನುಭವಿಸಿತ್ತು. ಚೆನ್ನೈ ಪ್ಲೇಆಫ್‌ಗೆ ಅರ್ಹತೆ ಪಡೆಯದ ಹಿನ್ನೆಲೆಯಲ್ಲಿ ಧೋನಿ ತಮ್ಮ ಕುಟುಂಬದೊಂದಿಗೆ ಭಾನುವಾರ ತಮ್ಮ ತವರು ರಾಂಚಿ ತಲುಪಿದರು.  ನಿನ್ನೆ (ಸೋಮವಾರ) ತಮ್ಮ ನೆಚ್ಚಿನ ಬೈಕ್ ನಲ್ಲಿ ಹೆಲ್ಮೆಟ್ ಹಾಕಿಕೊಂಡು  ಬೈಕ್​ ರೈಡ್​​ ಮಾಡಿದ್ದಾರೆ.
MS Dhoni enjoying a bike ride in Ranchi. ❤️https://t.co/RjHZqeCTqg
— Mufaddal Vohra (@mufaddal_vohra)May 20, 2024

ಯಮಹಾ ಬೈಕ್‌ನಲ್ಲಿ ಧೋನಿ ಫಾರ್ಮ್‌ಹೌಸ್‌ಗೆ ಮರಳುತ್ತಿದ್ದಾರೆ. ಇದನ್ನು ಅಭಿಮಾನಿಯೊಬ್ಬ ವಿಡಿಯೋ ಮಾಡಿಕೊಂಡಿದ್ದಾನೆ. ಅಭಿಮಾನಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಧೋನಿ ನಿವೃತ್ತಿ ಕುರಿತು ಚರ್ಚೆ ನಡೆಯುತ್ತಿದೆ. ಈ ಸೀಸನ್ ಅವರ ಕೊನೆಯ ಸೀಸನ್ ಎಂದು ವದಂತಿಗಳಿವೆ. ಆದರೆ.. ಇವುಗಳಿಗೆ ಧೋನಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ತಮ್ಮ ನಿವೃತ್ತಿ ಕುರಿತು ಯಾವುದೇ ಘೋಷಣೆ ಮಾಡಿಲ್ಲ.
ಕನ್ನಡಿಯಲ್ಲಿ ತನ್ನ ಮುಖವನ್ನೇ ನೋಡಿಕೊಂಡು ನಾಚಿದ ಕೋತಿ; ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
