ಶ್ರೀನಗರ:ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯಾದ ಹಿಜ್ಬ್-ಉಲ್-ಮುಜಾಹಿದ್ದೀನ್​ನ (ಎಚ್‌ಎಂ) ಸ್ಥಳೀಯ ಕಮಾಂಡರ್ ರಿಯಾಜ್ ನಾಯ್ಕುನನ್ನು ಭಾರತೀಯ ಸೇನೆ ಈಗಾಗಲೇ ಹೊಡೆದುರುಳಿದೆ. ಇದೀಗ ಭಾರತದ ಮೇಲೆ ಹೊಂಚು ಹಾಕುತ್ತಿರುವ ಇನ್ನೂ 10 ಉಗ್ರರ ಬೇಟೆಗೆ ಭಾರತೀಯ ಸೇನೆ ಸಜ್ಜಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಹತ್ತು ಪ್ರಮುಖ ಭಯೋತ್ಪಾದಕರನ್ನು ಬೇಟೆಯಾಡಲು ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಸೈನ್ಯವು ಕಾಶ್ಮೀರ ಕಣಿವೆಯಲ್ಲಿ ಹೊಂಚು ಹಾಕಿ ಕುಳಿತಿರುವ ಹತ್ತು ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇವರ ಬೇಟೆಗೆ ಸಿದ್ಧತೆ ನಡೆಸಲಾಗಿದೆ.
ಇದನ್ನೂ ಓದಿ:ಐದು ಬಾಲಕಿಯರ ವಿರುದ್ಧ ಕಂಪ್ಲೇಂಟ್​ ಕೊಟ್ಟ ಎಂಟರ ಪೋರ! ಕಾರಣ ಕೇಳಿ ನಕ್ಕೂ ನಕ್ಕೂ ಸುಸ್ತಾದ ಪೊಲೀಸರು…
ಈ ಉಗ್ರರ ಪಟ್ಟಿಯಲ್ಲಿ ಇರುವವರು:1. ಹಿಜ್ಬ್-ಉಲ್-ಮುಜಾಹಿದ್ದೀನ್​ನ ಹೊಸ ಕಮಾಂಡರ್​ ಡಾ. ಸೈಫುಲ್ಲಾ ಅಲಿಯಾಸ್​ ಗಾಜಿ ಹೈದರ್​ (ಈತ 2014ರ ಅಕ್ಟೋಬರ್​ನಲ್ಲಿ ಸಂಘಟನೆ ಸೇರಿದ್ದಾನೆ); ಮೊಹಮ್ಮದ್ ಅಶ್ರಫ್ ಖಾನ್ ಅಲಿಯಾಸ್​ ಮನ್ಸೂರ್-ಉಲ್-ಇಸ್ಲಾಂ (ಈತ 2016ರ ಸೆಪ್ಟೆಂಬರ್ 9ರಂದು ಸಂಘಟನೆ ಸೇರಿದ್ದು); ಜುನೈದ್ ಸೆಹ್ರಾಯ್; ಮೊಹ್ಮ್ ಅಬ್ಬಾಸ್ ಶೇಖ್ ಅಲಿಯಾಸ್​ ತುರಾಬಿ ಮೊಲ್ವಿ (2015 ರಿಂದ ಈ ಸಂಘಟನೆಯಲ್ಲಿ ಸಕ್ರಿಯನಾಗಿದ್ದಾನೆ); ಜಾಹಿದ್ ಜರ್ಗರ್ (2014ರಲ್ಲಿ ಜೈಶ್-ಎ-ಮೊಹಮ್ಮದ್‌ಗೆ ಸೇರಿದ್ದಾನೆ); ಶಕುರ್ (2015ರಿಂದ ಎಲ್‌ಇಟಿಗೆ ಸಂಪರ್ಕ ಹೊಂದಿದ್ದಾನೆ); ಫೈಸಲ್ ಭಾಯ್ (2015ರಲ್ಲಿ ಜೈಶ್‌ಗೆ ಸೇರಿದ್ದಾನೆ); ಶೆರಾಜ್ ಅಲ್ ಲೋನ್, ಅಲಿಯಾಸ್​ ಮೊಲ್ವಿ (ಈತ ಸಲೀಂ ಪಾರೆ ಜೆಎಂಗೆ ಸಂಪರ್ಕ ಹೊಂದಿದ್ದಾನೆ) ಹಾಗೂ ಓವೈಸ್ ಮುಲ್ಲಿಕ್ (ಈತ ಎಲ್‌ಇಟಿ ಜತೆ ಸಂಬಂಧ ಹೊಂದಿದ್ದಾನೆ).
ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಹಿಜ್ಬ್-ಉಲ್-ಮುಜಾಹಿದ್ದೀನ್ ನ 35 ವರ್ಷದ ಸ್ಥಳೀಯ ಕಮಾಂಡರ್ ರಿಯಾಜ್ ಅಹ್ಮದ್ ನಾಯ್ಕು ಕೊಲ್ಲಲ್ಪಟ್ಟ ಕೆಲವು ದಿನಗಳ ನಂತರ ಇಂಥದ್ದೊಂದು ಪಟ್ಟಿಯನ್ನು ತಯಾರು ಮಾಡಲಾಗಿದೆ.
ಇದನ್ನೂ ಓದಿ:ಕರೊನಾ ಅಲರ್ಟ್​! ಬೆಕ್ಕಿಗೆ ಮುತ್ತು ಕೊಡುವ ಮುನ್ನ ಇದನ್ನೊಮ್ಮೆ ಓದಿ…
ಆಗಸ್ಟ್ 2017 ರಲ್ಲಿ, ಹಿಜ್ಬ್-ಉಲ್-ಮುಜಾಹಿದ್ದೀನ್​ನ ಕಮಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿದ ಒಂದು ವರ್ಷದ ನಂತರ, ಭದ್ರತಾ ಪಡೆಗಳು ಅವನ ಉತ್ತರಾಧಿಕಾರಿ ಯಾಸಿನ್ ಇಟೂ ಅಲಿಯಾಸ್ ಮೆಹಮೂದ್ ಘಜ್ನವಿಯನ್ನು ಶೋಪಿಯಾನ್‌ನಲ್ಲಿ ಗುಂಡಿಕ್ಕಿ ಹೊಡೆದುರುಳಿಸಿದ್ದವು. ನಾಯ್ಕು ಈ ತಂಡದ ನೇತೃತ್ವ ವಹಿಸಿದ ಮೇಲೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿದ್ದವು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ರದ್ದುಪಡಿಸಿದ ನಂತರ ಈ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿತ್ತು. ವರದಿಗಳ ಪ್ರಕಾರ, ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 28 ಭಯೋತ್ಪಾದಕರು ಹತರಾಗಿದ್ದಾರೆ.
ಇದನ್ನೂ ಓದಿ:VIDEO: ಅಬ್ಬಬ್ಬಾ ಏನು ಗತ್ತು! ಕರೊನಾ ಪಾಠಕ್ಕೆ ಪೊಲೀಸರ​ ಜತೆ ಹೊರಟಿತಲ್ಲ ಈ ಮರಿ ಆಡು… ವೀಡಿಯೋ ವೈರಲ್​
ಆದಾಗ್ಯೂ, ಸಶಸ್ತ್ರ ಪಡೆಗಳ ವರದಿಗಳ ಪ್ರಕಾರ, ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕನಿಷ್ಠ 35 ಸ್ಥಳೀಯ ಯುವಕರು ಭಯೋತ್ಪಾದಕ ಗುಂಪುಗಳಿಗೆ ಸೇರ್ಪಡೆಗೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − thirteen =
Remember me
