ನವದೆಹಲಿ:ಲಡಾಖ್​ನಲ್ಲಿ ಭಾರತದ ಭೂಮಿಯನ್ನು ಅತಿಕ್ರಮಿಸಿಕೊಳ್ಳುವ ಪ್ರಯತ್ನದ ಬಳಿಕ ಚೀನಾದ ಕಾಕದೃಷ್ಟಿ ಈಗ ಜಪಾನ್​ ಮೇಲೆ ಬಿದ್ದಿದೆ. ಪೂರ್ವ ಚೀನಾ ಮಹಾಸಾಗರದ ಸೆಂಕಾಕು ದ್ವೀಪ ಪ್ರದೇಶದಲ್ಲಿ ಜಪಾನ್​ ಮೀನುಗಾರರ ಬೋಟುಗಳು ಅತಿಕ್ರಮಣ ಮಾಡುತ್ತಿರುವುದಾಗಿ ಆರೋಪಿಸುವ ಮೂಲಕ ಈ ಪ್ರದೇಶದಲ್ಲಿ ಅತಿಕ್ರಮಣ ನಡೆಸಲು ಚೀನಾ ಮುಂದಾಗಿದೆ.
ಸೆಂಕಾಕು ಜಪಾನ್​ನ ಭಾಗವಾಗಿದ್ದು ಈ ಪ್ರದೇಶಕ್ಕೆ ಟೊನೊಶಿರೊ ಸೆಂಕಾಕು ಎಂದು ದ್ವೀಪ ಸಮೂಹಕ್ಕೆ ಮರುನಾಮಕರಣ ಮಾಡಲು ಇಶಿಗಾಕಿ ನಗರಾಡಳಿತ ನಿರ್ಣಯ ಕೈಗೊಂಡಿತ್ತು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ಆ ನಿರ್ಣಯವನ್ನು ಕೈಬಿಡುವಂತೆ ಇಶಿಗಾಕಿ ನಗರಾಡಳಿತಕ್ಕೆ ಸೂಚಿಸುವಂತೆ ಜಪಾನ್​ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಅದಕ್ಕೆ ಕವಡೆಕಾಸಿನ ಕಿಮ್ಮತ್ತೂ ಕೊಡದ ಜಪಾನ್​ ಆ ಸೂಚನೆಯನ್ನು ಕಸದಬುಟ್ಟಿಗೆ ರವಾನಿಸಿದೆ.
ಸೆಂಕಾಕು ದ್ವೀಪ ಸಮೂಹದ ವಿಷಯದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಮೂಲಕ ಚೀನಾ ತನ್ನ ಗಡಿವಿಸ್ತೀರ್ಣದ ದುರ್ಬುದ್ಧಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಯಾವುದೇ ಪ್ರದೇಶವನ್ನು ಅತಿಕ್ರಮಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಬಳಿಕ ಚೀನಾ ಆ ಪ್ರದೇಶದಲ್ಲಿ ಇಲ್ಲಸಲ್ಲದ ಸಮಸ್ಯೆಗಳನ್ನು ಸೃಷ್ಟಿಸಿ, ತನ್ನ ಸೇನೆಯನ್ನು ರವಾನಿಸಿ ಆ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತದೆ. ಸೆಂಕಾಕು ದ್ವೀಪ ಸಮೂಹದ ವಿಷಯವಾಗಿಯೂ ಅದು ಹಾಗೆಯೇ ನಡೆದುಕೊಳ್ಳುತ್ತಿದೆ.
ಇದನ್ನೂ ಓದಿ:ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಉಡುಪಿಯ ಪವಿತ್ರ ಮೃತ್ತಿಕೆ ರವಾನೆ
ಸೆಂಕಾಕು ದ್ವೀಪ ಸಮೂಹದ ಸುತ್ತ 5ಕ್ಕೂ ಹೆಚ್ಚು ಜನವಸತಿ ಇಲ್ಲದ ದ್ವೀಪಗಳಿವೆ. ಇದರ ಸುತ್ತ 7 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಬೃಹತ್​ ಬಂಡೆಗಳಿವೆ. ಇವೆಲ್ಲವನ್ನೂ ತನ್ನದಾಗಿಸಿಕೊಳ್ಳುವುದು ಚೀನಾದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಜಪಾನ್​ನ ಮಿಲಿಟರಿ ಉಪಸ್ಥಿತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾ, ಇದೀಗ ಮೀನುಗಾರಿಕಾ ಬೋಟುಗಳ ಸಂಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದೆ.
ಲಡಾಖ್​ ವಿಷಯದಲ್ಲೂ ಚೀನಾ 20 ವರ್ಷಗಳಿಂದಲೂ ಇದೇ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಆದರೆ, ಕೆಲದಿನಗಳ ಹಿಂದೆ ಮತ್ತೊಮ್ಮೆ ಆ ನಿಟ್ಟಿನಲ್ಲಿ ಅದು ಮಾಡಿದ ಪ್ರಯತ್ನಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾಗಿದ್ದರಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಈ ವಿಷಯವಾಗಿ ಅಮೆರಿಕವಂತೂ ಚೀನಾವನ್ನು ಲೇವಡಿ ಮಾಡಿದೆ.
2002ರ ಜೂನ್​ 17ರಂದು ಭಾರತ ಮತ್ತು ಚೀನಾದ ತಜ್ಞರ ಸಮೂಹದ ಸಭೆ ನಡೆದಿತ್ತು. ಈ ಸಭೆಯಲ್ಲಿ ವಾಸ್ತವ ಗಡಿರೇಖೆ ಕುರಿತ ನಕ್ಷೆಯನ್ನು ಮಂಡಿಸಿದ್ದ ಭಾರತ, ಎಲ್​ಎಸಿ ಕುರಿತು ಚೀನಾಕ್ಕಿರುವ ತಪ್ಪುಕಲ್ಪನೆಯನ್ನು ಪರಿಹರಿಸಲು ಮುಂದಾಗಿತ್ತು. ಆದರೆ, ಈ ನಕ್ಷೆಯನ್ನು ಸ್ವೀಕರಿಸಲು ನಿರಾಕರಿಸಿದ್ದ ಚೀನಾದ ತಜ್ಞರು ತಕರಾರನ್ನು ಮುಂದುವರಿಸಿದ್ದರು. ಅಲ್ಲದೆ, ಈ ಕುರಿತು ತಮ್ಮದೇ ಆದ ವಾದವನ್ನು ಮಂಡಿಸಿದ್ದರು. ಅಲ್ಲದೆ, ಆ ಸಂದರ್ಭದಲ್ಲಿ ಗೋಗ್ರಾ ಮತ್ತು ಪ್ಯಾಂಗಾಂಗ್​ ಸರೋವರದ ಏಣುಗಳ ಬಗ್ಗೆ ಚೀನಾ ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ದೇಶದಲ್ಲಿ 5ಕ್ಕೆ ಇಳಿಯುತ್ತಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಸಂಖ್ಯೆ?
ಆದರೆ ಮುಂದಿನ 18 ವರ್ಷಗಳಲ್ಲಿ ಅದು ಇಂಚಿಂಚಾಗಿ ಭಾರತದ ಭೂಮಿಯನ್ನು ಅತಿಕ್ರಮಿಸುತ್ತಾ, ಇದೀಗ ಗೋಗ್ರಾ ಮತ್ತು ಪ್ಯಾಂಗಾಂಗ್​ ಸರೋವರದ ಏಣುಗಳವರೆಗಿನ ಪ್ರದೇಶ ತನ್ನದೆಂದು ಪ್ರತಿಪಾದಿಸಲು ಆರಂಭಿಸಿದೆ.
ವಾಸ್ತವ ಗಡಿರೇಖೆ ಸುತ್ತ ಭಾರತ ಮೂಲಸೌಕರ್ಯ ಸುಧಾರಣೆಗೆ ಮುಂದಾಗುತ್ತಿರುವಂತೆ ಎಚ್ಚೆತ್ತುಕೊಂಡ ಚೀನಾ, ಆಯಕಟ್ಟಿನ ಭಾಗ ಭಾರತದ ಪಾಲಾದರೆ, ಅದಕ್ಕೆ ಮೇಲುಗೈ ಒದಗುತ್ತದೆ ಎಂಬ ಕಾರಣ ಇಟ್ಟುಕೊಂಡು ಈ ಪ್ರದೇಶಗಳನ್ನು ತನ್ನದೆಂದು ಪ್ರತಿಪಾದಿಸಲು ಆರಂಭಿಸಿದೆ. ಅದರಲ್ಲೂ ವಿಶೇಷವಾಗಿ ಡರ್ಬುಕ್​-ಶಿಯಾಕ್​-ದೌಲತ್​ಬೇಗ್​ ಓಲ್ಡೀ ರಸ್ತೆಯನ್ನು ನಿರ್ಮಿಸಿದ ನಂತರದಲ್ಲಿ ಗಲ್ವಾನ್​ ಕಣಿವೆಯ ಮಹತ್ವವನ್ನು ಅರಿತುಕೊಂಡಿರುವ ಚೀನಾ, ಆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.
ಚೀನಾದ ಈ ಹುನ್ನಾರದ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಅರಿವಿತ್ತು. ಇಂಥ ಅಪಾಯವನ್ನು ಅವರು ಮುಂಗಂಡಿದ್ದರು. ಆದರೆ, ನಿರಂತರವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆಯುತ್ತಿದುದರಿಂದ, ಅವುಗಳ ಪ್ರಭಾವದಿಂದ ಚೀನಾದ ಅಧಿಕಾರಿಗಳ ಮನೋಭಾವ ಬದಲಾಗುತ್ತದೆ ಎಂಬ ನಿರೀಕ್ಷೆ ಅವರದ್ದಾಗಿತ್ತು. ಇದು ಭಾರತ ಮಾಡಿದ ಬಹುದೊಡ್ಡ ಅಪರಾಧ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರೊಯೊಬ್ಬರು ಹೇಳಿದ್ದಾರೆ.
ಈ ವಿಷಯವಾಗಿ ಚೀನಾವನ್ನು ಹಗುರವಾಗಿ ಪರಿಗಣಿಸುವ ತಪ್ಪನ್ನು ಭಾರತವಷ್ಟೇ ಅಲ್ಲ, ಅಮೆರಿಕ ಕೂಡ ಇದೇ ತಪ್ಪನ್ನು ಮಾಡಿದೆ. ಚೀನಾವನ್ನು ಓಲೈಸಿದರೆ ಅದು ಇಂದಲ್ಲ ನಾಳೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹಾದಿಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಚೀನಾದೊಂದಿಗೆ ಸಂಬಂಧ ಸುಧಾರಣೆಗೆ ಅಮೆರಿಕ ಮುಂದಾಗಿತ್ತು. ಆದರೆ, ಇದು ಸಾಧ್ಯವಾಗದು ಎಂಬುದು ಡೊನಾಲ್ಡ್​ ಟ್ರಂಪ್​ ಅವರು ಅಧಿಕಾರಕ್ಕೆ ಬಂದ ನಂತರ ಸ್ಪಷ್ಟವಾಗಿದೆ. ಆದ್ದರಿಂದ, ಚೀನಾ ಬಗೆಗಿನ ನೀತಿಯನ್ನು ಬದಲಿಸಿಕೊಳ್ಳಲು ಅಮೆರಿಕ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ಇತ್ತೀಚೆಗೆ ಹೇಳಿದ್ದೇ ಇದಕ್ಕೆ ಸಾಕ್ಷಿ.
ನಾನೆಲ್ಲಿ 35 ಕೋಟಿ ರೂಪಾಯಿ ತಗೊಂಡೆ- ಮಿಥ್ಯಾರೋಪಕ್ಕೆ ಕಾನೂನು ಕ್ರಮ ಖಚಿತ: ಎಚ್ಚರಿಸಿದ್ರು ಸಚಿನ್ ಪೈಲೆಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + sixteen =
Remember me
